ಮಹಿಳಾ ಸಹದ್ಯೋಗಿ ಮೇಲೆ ಹಲ್ಲೆ; ಕರ್ನಾಟಕದ ಐಪಿಎಸ್ ಅಧಿಕಾರಿ ತಮಿಳನಾಡಲ್ಲಿ ಅರೆಸ್ಟ್!

ಮಹಿಳಾ ಸಹೋದ್ಯೋಗಿ ಮೇಲೆ ಹಲ್ಲೆ ನಡೆಸಿರುವ ಆರೋಪ ಹಿನ್ನೆಲೆ ಕರ್ನಾಟಕದ ಐಪಿಎಸ್‌ ಪೊಲೀಸ್ ಅಧಿಕಾರಿಯೊಬ್ಬರನ್ನು ತಮಿಳನಾಡಿನ ಈರೋಡ್ ಜಿಲ್ಲೆಯ ಗೋಬಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

illicit relationship Karnataka IPS officer Arun Rangarajan arrested in Tamil Nadu rav

ಬೆಂಗಳೂರು (ಫೆ.1): ಮಹಿಳಾ ಸಹೋದ್ಯೋಗಿ ಮೇಲೆ ಹಲ್ಲೆ ನಡೆಸಿರುವ ಆರೋಪ ಹಿನ್ನೆಲೆ ಕರ್ನಾಟಕದ ಐಪಿಎಸ್‌ ಪೊಲೀಸ್ ಅಧಿಕಾರಿಯೊಬ್ಬರನ್ನು ತಮಿಳನಾಡಿನ ಈರೋಡ್ ಜಿಲ್ಲೆಯ ಗೋಬಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಬಂಧಿತರು. ಕಲಬುರಗಿ ಎಸ್​​ಪಿ ಆಗಿರುವ ಐಪಿಎಸ್ ಅಧಿಕಾರಿ ಸಹದ್ಯೋಗಿ ಮಹಿಳೆ ಜೊತೆ ತಿರುಚ್ಚಿಗೆ ತೆರಳಿದ್ದ ವೇಳೆ ತಿರುಚ್ಚಿಯ ಶ್ರೀರಂಗಂನಲ್ಲಿ ಮಹಿಳೆ ಹಾಗೂ ಅರುಣ್ ಮಧ್ಯೆ ಜಗಳವಾಗಿದೆ. ಸ್ಥಳೀಯ ಪೊಲೀಸರು ರಾಜೀ ಮಾಡಿ ಕಳಿಸಿದ್ದರು. ಆ ಬಳಿಕ ಸುಜಾತರನ್ನು ಹುಟ್ಟೂರಿಗೆ ಕರೆದೊಯ್ದಿದ್ದ ಅರುಣ್ ರಂಗರಾಜನ್, ಮನೆಯಲ್ಲಿಯೂ  ಹಲ್ಲೆ ನಡೆಸಿದ್ದಾರೆಂದು ಆರೋಪಿಸಿರುವ ಮಹಿಳೆ.

ಅಂದು ಮಕ್ಕಳಿಗಾಗಿ ಧರಣಿ ಕೂತಿದ್ದ ಐಪಿಎಸ್ ಅಧಿಕಾರಿ ಅರುಣ್, ಇಂದು ಅನೈತಿಕ ಸಂಬಂಧದಲ್ಲಿ ಸಿಕ್ಕಿಬಿದ್ದ!

ಐಪಿಎಸ್ ಅಧಿಕಾರಿ ವಿರುದ್ಧ  ಮಹಿಳೆ ಪತಿ ದೂರು:

ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್, ಪತ್ನಿಯನ್ನು ಅಕ್ರಮವಾಗಿ ಬಂಧನಲ್ಲಿಟ್ಟುಕೊಂಡು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಮಹಿಳೆಯ ಪತಿ 2023 ಮಾರ್ಚ್‌ ನಲ್ಲಿ ಈ ಬಗ್ಗೆ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ಸೆಕ್ಷನ್ 323, 324,498,376 ಅಡಿ ದೂರು ದಾಖಲಿಸಿದ್ದರು. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸರು  ಚಾರ್ಜ್ ಶೀಟ್ ಹಾಕಿದ್ರು. 

ಕಳೆದ ಜ.16ರಂದು ಚಾರ್ಜ್ ಶೀಟ್ ಸಲ್ಲಿಕೆ ಆಗಿತ್ತು. ಈ ಮಧ್ಯೆ ಮತ್ತೆ ಸುಜಾತರನ್ನ ತಮಿಳುನಾಡಿಗೆ ಕರೆದೊಯ್ದಿದ್ದ ಅರುಣ್ ರಂಗರಾಜನ್. ತಿರುಚ್ಚಿಯ ಶ್ರೀರಂಗಂನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದ ಸುಜಾತ ಗೋಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡು ಪೊಲೀಸರು, ಅರುಣ್ ರಂಗರಾಜ‌ನ್ ರನ್ನ ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ. ಬಳಿಕ ಕೋರ್ಟ್‌ನಲ್ಲಿ ಜಾಮೀನು ಅರುಣ್ ರಂಗರಾಜನ್ ಬಿಡುಗಡೆಯಾಗಿದ್ದಾರೆ.

6 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಗಂಡ ಮಂಗಳಮುಖಿಯಾಗಿ ಪತ್ತೆ; ಸುಳಿವು ಕೊಟ್ಟ ಬಿಗ್‌ಬಾಸ್, ಪತಿ ವೇಷ ಕಂಡು ಪತ್ನಿ ಮೂರ್ಛೆ!

Latest Videos
Follow Us:
Download App:
  • android
  • ios