ಉಡುಪಿ(ಜು.24): ದುರ್ಗಾದೇವಿ ಭಜನಾಮಂದಿರದ ಬಳಿ, ಇತ್ತೀಚೆಗೆ ಸಾವಿಗೀಡಾದ ತಾಯಿಯ ಕರ್ಮಾಂಗಗಳನ್ನು ಮುಗಿಸಿದ ಇಬ್ಬರು ಪುತ್ರರು ಬುಧವಾರ ಕೆಲವೇ ಗಂಟೆಗಳ ಅಂತರದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇಬ್ಬರು ಪುತ್ರರು ಬುಧವಾರ ಕೆಲವೇ ಗಂಟೆಗಳ ಅಂತರದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜು.11ರಂದು ಇಲ್ಲಿನ ನಿವಾಸಿ ವಾರಿಜಾಕ್ಷಿ ಆಚಾರ್ಯ (80) ನಿಧನರಾಗಿದ್ದು, ಬುಧವಾರ ಅವರ 11ನೇ ದಿನದ ಕರ್ಮಾಂಗಳನ್ನು ಮೂವರು ಪುತ್ರರು ನೆರವೇರಿಸಿದ್ದರು.

ಕೊರೋನಾ ಪೀಡಿತೆ ಮೇಲೆ ಆಸ್ಪತ್ರೆಯಲ್ಲೇ ಅತ್ಯಾಚಾರಕ್ಕೆ ಯತ್ನಿಸಿದ ಡಾಕ್ಟರ್!

ಅವರಲ್ಲಿ ಹಿರಿಯ ಮಗ ಉದಯ ಆಚಾರ್ಯ (55) ಅವರು ಮಧ್ಯಾಹ್ನದ 4 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟರೆ, 3ನೇ ಮಗ ವಿಶ್ವನಾಥ ಆಚಾರ್ಯ (45) ಅವರು ರಾತ್ರಿ 2 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.