ಹಟ್ಟಿಯಲ್ಲಿತ್ತು 2 ಹೆಬ್ಬಾವುಗಳು ಮತ್ತು 31 ಮೊಟ್ಟೆಗಳು!
ಉಡುಪಿ ಜಿಲ್ಲೆಯ ಕಟಪಾಡಿ ಎಂಬಲ್ಲಿನ ವಿಶ್ವನಾಥ ಕ್ಷೇತ್ರದ ಸಮೀಪದ ರಾಮಚಂದ್ರ ಪೈ ಎಂಬವರ ಮನೆಯ ದನದ ಹಟ್ಟಿಯಲ್ಲಿ 2 ಹೆಬ್ಬಾವುಗಳು ಪತ್ತೆಯಾಗಿವೆ.
ಉಡುಪಿ(ಮೇ 12): ಉಡುಪಿ ಜಿಲ್ಲೆಯ ಕಟಪಾಡಿ ಎಂಬಲ್ಲಿನ ವಿಶ್ವನಾಥ ಕ್ಷೇತ್ರದ ಸಮೀಪದ ರಾಮಚಂದ್ರ ಪೈ ಎಂಬವರ ಮನೆಯ ದನದ ಹಟ್ಟಿಯಲ್ಲಿ 2 ಹೆಬ್ಬಾವುಗಳು ಪತ್ತೆಯಾಗಿವೆ.
ಅದನ್ನು ಕಂಡು ಬೆಚ್ಚಿಬಿದ್ದ ಅವರು ಸ್ಥಳೀಯ ಉರಗ ಉರಗತಜ್ಞ ಮನು ಪೈ ಅವರನ್ನು ಕರೆಸಿ ನೋಡಿದಾಗ ಎರಡೂ ಹೆಬ್ಬಾವುಗಳು ಮೊಟ್ಟೆಗೆ ಕಾವು ಕೊಡುತ್ತಿದ್ದುದು ಕಂಡುಬಂತು.
ಲಾಕ್‌ಡೌನ್ ಎಫೆಕ್ಟ್: 1 ದಿನದಲ್ಲಿ ತೀರಕ್ಕೆ ಬಂತು 72 ಸಾವಿರಕ್ಕೂ ಹೆಚ್ಚು ಕಡಲಾಮೆ
ಒಂದು ಹೆಬ್ಬಾವು 15 ಮೊಟ್ಟೆಗಳು ಮತ್ತು ಇನ್ನೊಂದು ಹೆಬ್ಬಾವು 16 ಮೊಟ್ಟೆಗಳ ಮೇಲೆ ಸುರಳಿಯಾಗಿ ಕೂತು ಕಾವು ಕೊಡುತ್ತಿದ್ದವು. ನಂತರ ಅವುಗಳನ್ನು ಸುರಕ್ಷಿತವಾಗಿ ಹಿಡಿದ ಉರಗತಜ್ಞ ಮನು ಪೈ ಅವರು ಪ್ರತ್ಯೇಕ ಗೋಣಿ ಚೀಲಕ್ಕೆ ತುಂಬಿಸಿದರು.
ಎಲ್ಲೆಲ್ಲಿ ಸುತ್ತಿದ್ರೂ ಮಲಗೋದಕ್ಕೆ ಮಾತ್ರ ಕಾಳಿಂಗಕ್ಕೆ ತನ್ನ ಮನೆಯೇ ಬೇಕು..!
ಮೊಟ್ಟೆಗಳನ್ನು ಸಂಗ್ರಹಿಸಿದರು ಮತ್ತು ಅರಣ್ಯ ಇಲಾಖೆಯವರಿಗೆ ಹಸ್ತಾಂತರಿಸಿದರು. ಅರಣ್ಯ ಇಲಾಖೆಯವರು ಹಾವು ಮತ್ತು ಮೊಟ್ಟೆಗಳನ್ನು ಕಾರ್ಕಳ ತಾಲೂಕಿನ ಬೆಳ್ಮಣ್ ಸಮೀಪದ ಪಿಲಾರು ರಕ್ಷಿತಾರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ.
ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ! ಕಾರಣವೇನು?