ಭುವನೇಶ್ವರ( ಮಾ.27): 21 ದಿನಗಳ ಲಾಕ್‌ಡೌನ್ ಘೋಷಿಸಿ ಮೂರು ದಿನಗಳು ಕಳೆದಿವೆಯಷ್ಟೇ. ಆದಗಲೇ ಮಾಲೀನ್ಯ ಪ್ರಮಾಣ ಕಡಿಮೆಯಾಗಿದೆ. ಮನಷ್ಯರು ಬಂಧಿಗಳಾಗಿ ಮನೆಯೊಳಗೆ ಕುಳಿತಿದ್ರೆ ನಿಸರ್ಗ ಜೀವಿಗಳು ಮೆಲ್ಲನೆ ಸ್ವಂತಂತ್ರವಾಗುತ್ತಿವೆ.

ಮನುಷ್ಯರ ಸುಳಿದಾಟ ನಿಲ್ಲುತ್ತಿದ್ದಂತೆ ಹೆದರಿ ಮುದುರಿಕೊಂಡಿದ್ದ ಕಡಲಾಮೆಗಳು ನಿರ್ಭೀತಿಯಿಂದ ತೀರಕ್ಕೆ ಬಂದಿವೆ. ಸ್ವಚ್ಛಂದವಾಗಿ ವಿಹಿರಿಸಿವೆ. ಒಟ್ಟಾರೆಯಾಗಿ ಕೊರೋನಾ ವೈರಸ್‌ ಮನಷ್ಯನಿಗೆಷ್ಟು ಮಾರಕವಾಯ್ತೋ ಅಷ್ಟೇ ಮಟ್ಟಿಗೆ ಪ್ರಾಣಿ ಪಕ್ಷಿಗಳಿಗೆ ವರವಾಯ್ತು ಎನ್ನಬಹುದು.

ಕೊರೋನಾದ ಜೊತೆಗೆ ಇಲಿ ಜ್ವರದ ಭಯ. ಚೀನಾದಲ್ಲಿ ಒಂದು ಬಲಿ!

ಒಲಿವ್‌ ರಿಡ್ಲಿ ಕಡಲಾಮೆಗಳು ತೀರಕ್ಕೆ ಬಂದಿವೆ. ಒಡಿಶಾದ ಗಂಜಮ್ ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಆಮೆಗಳು ತೀರದಲ್ಲಿ 6 ಕಿಲೋ ಮೀಟರ್‌ನಷ್ಟು ದೂರ ಸಂಚರಿಸುತ್ತಿವೆ. ಬೀಚ್‌ನ ಮರಳಿನಲ್ಲೀಗ ಮನಷ್ಯರ ಸದ್ದಿಲ್ಲ, ಕಡಲಾಮೆಗಳ ಸ್ವಚ್ಛಂದ ವಿಹಾರ ಮಾತ್ರ.

ಕೊರೋನಾ ವೈರಸ್‌ನಿಂದ ಜನ ಮನೆಯೊಳಗೇ ಉಳಿದುಕೊಳ್ಳಲಾರಂಭಿಸಿದ ನಂತರ ಗಹಿರ್‌ಮಠ ಬೀಚ್‌ ಹಾಗೂ ಒಡಿಶಾದಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ಆಮೆಗಳು ತೀರಕ್ಕಾಗಮಿಸಿವೆ. ಮಾರ್ಚ್‌ 22ರಂದು ಮುಂಜಾವ 2 ಗಂಟೆಗೆ 2 ಸಾವಿರಕ್ಕೂ ಅಧಿಕ ಹೆಣ್ಣಾಮೆಗಳು ಕಡಲಿಂದ ಮೇಲೆ ತೀರಕ್ಕೆ ಬಂದಿವೆ ಎನ್ನುತ್ತಾರೆ ಅಲ್ಲಿನ ವಿಭಾಗೀಯ ಅರಣ್ಯಾಧಿಕಾರಿ ಅಮ್ಲನ್ ನಾಯಕ್.

ಕೊರೋನಾ ಲಾಕ್‌ಡೌನ್‌ - ಪಾಕಿಸ್ತಾನದಲ್ಲಿ ಹಿಟ್ಟಿಗೂ ಹಾಹಾಕಾರ

ಈ ಆಮೆಗಳು ತಾವು ಹುಟ್ಟಿದ ಸ್ಥಳಕ್ಕೇ ಮತ್ತೆ ಬಂದು ಮೊಟ್ಟೆಗಳನ್ನಿಡುತ್ತವೆ. ಒಡಿಶಾದ ಕಡಲ ತೀರ ಆಮೆಗಳು ಅಧಿಕ ಮೊಟ್ಟೆ ಇಡುವ ಸ್ಥಳ. ಆದರೆ ಈ ಹಿಂದೆ ತ್ಯಾಜ್ಯಗಳು, ಮಾಲೀನ್ಯದಿಂದ ಆಮೆಗಳು ಮೊಟ್ಟೆ ಇಡಲು ತೀರಕ್ಕೆ ಆಗಮಿಸುತ್ತಿರಲಿಲ್ಲ. ಆದರೆ ಈ ಲಾಕ್‌ಡೌನ್‌ ಸಂದರ್ಭ ಏಕಕಾಲಕ್ಕೆ 2,78,502 ಆಮೆಗಳು ಮೊಟ್ಟೆ ಇಡಲು ತೀರಕ್ಕೆ ಬಂದಿವೆ. ಮಂಗಳವಾರ ಒಂದೇ ದಿನ 72142 ಆಮೆಗಳು ತೀರಕ್ಕೆ ಬಂದಿವೆ.

ಒಂದು ಆಮೆಯಿಂದ ಕನಿಷ್ಟ 100 ಮೊಟ್ಟೆ

ಆಮೆ ಮೊಟ್ಟೆ ಇಡುವುದಕ್ಕಾಗಿ ಮಾಡುವ ಪ್ರತಿ ಒಂದು ಗೂಡಲ್ಲೂ ಸುಮಾರು 100ಕ್ಕೂ ಹೆಚ್ಚು ಮೊಟ್ಟೆಗಳಿರುತ್ತವೆ. ಸಾವಿರಾರು ಕಡಲಾಮೆಗಳು ತೀರಕ್ಕೆ ಆಗಮಿಸಿದ್ದು, ಅವುಗಳು 100ರಂತೆ ಮೊಟ್ಟೆ ಇಟ್ಟರೂ ಅತ್ಯಧಿಕ ಮರಿಗಳು ಹುಟ್ಟಲಿವೆ. ಮೊಟ್ಟೆಗಳು ಮರಿಯಾಗಲು 45 ದಿನ ಕಾಲಾವಕಾಶ ಬೇಕು.

ಈ ವರ್ಷ ಅತ್ಯಧಿಕ ಆಮೆಗಳನ್ನು ತೀರದಲ್ಲಿ ಕಂಡಿದ್ದೇವೆ. ಆದರೆ ಈ ಹಿಂದಿನ ವರ್ಷಗಳಲ್ಲಿ ಇಷ್ಟೊಂದು ಆಮೆಗಳು ಬರುತ್ತಿರಲಿಲ್ಲ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ. ಈ ಬಾರಿ 4 ಲಕ್ಷಕ್ಕೂ ಅಧಿಕ ಆಮೆಗಳು ತೀರಕ್ಕೆ ಬರುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.

ಮಾರ್ಚ್ 24ರಿಂದ ಲಾಕ್‌ಡೌನ್ ಘೋಷಿಸಿರುವ ಪರಿಣಾಮ ಪ್ರವಾಸಿಗರು ಖಷಿಕುಲ್ಯ ಬೀಚ್‌ಗೆ ಬರುವುದನ್ನು ನಿಷೇಧಿಸಲಾಗಿದೆ. ಆದರೆ ಪರಿಸರತಜ್ಞರು, ಸಂಶೋಧಕರೂ ಬೀಚ್‌ಗೆ ಬರಬಹುದಾಗಿದೆ. ಗಹಿರ್‌ಮಠದಲ್ಲಿ ಮೊಟ್ಟೆ ಇಡುವುದು ಆದ ನಂತರ ಆಮೆಗಳು ಖಷಿಕುಲ್ಯದತ್ತ ಬರಲಿವೆ. ಈ ವರ್ಷ ಸುಮಾರು 6 ಕೋಟಿ ಮೊಟ್ಟೆಗಳನ್ನಿಡಲಿವೆ ಎಂದು ಅಂದಾಜಿಸಲಾಗಿದೆ.