ಕೊಪ್ಪಳ(ಫೆ.01): ತಾಲೂಕಿನ ಕೋಳೂರು ಕ್ರಾಸ್‌ ಬಳಿ ಲಾರಿ-ಬೈಕ್‌ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ಭಾನುವಾರ ಸಂಭ​ವಿ​ಸಿದೆ. ಮೃತರನ್ನು ಕುಕನೂರು ಪಟ್ಟಣದ ಗಣೇಶ (21) ಹಾಗೂ ರಾಧಿಕಾ (19) ಎಂದು ಗುರುತಿಸಲಾಗಿದೆ. 

ಇವರು ಜಾತ್ರೆಗೆಂದು ಕೊಪ್ಪಳಕ್ಕೆ ಆಗಮಿಸಿದ್ದರು. ಆದರೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಲಾರಿಗೆ ಡಿಕ್ಕಿ ಹೊಡೆ​ದು ಇಬ್ಬರು ಸ್ಥಳದಲ್ಲಿಯೇ ಮೃತ​ಪ​ಟ್ಟಿ​ದ್ದಾರೆ.

ಹೊಸಪೇಟೆ: ಬೈಕ್‌ನಿಂದ ಬಿದ್ದು ಕೊಪ್ಪಳದ ಯುವಕರಿಬ್ಬರ ದುರ್ಮರಣ

ದುರ್ಘಟನೆ ನಡೆದ ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ್‌ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.