ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಸೋಮವಾರ ಮುಂಜಾನೆ ಕಾಡಾನೆ ದಾಳಿಗೆ ಯುವತಿ ಹಾಗೂ ಆಕೆಯನ್ನು ರಕ್ಷಿಸಲು ಹೋದ ವ್ಯಕ್ತಿ ಬಲಿಯಾದ ಹೃದಯವಿದ್ರಾವಕ ಘಟನೆ ಸಂಭ​ವಿ​ಸಿ​ದೆ. ವಾರದ ಹಿಂದಷ್ಟೇ ಸ್ಥಳೀಯ ಯುವಕನೊಬ್ಬ ಈ ಭಾಗ​ದ​ಲ್ಲಿ ಕಾಡಾನೆ ಉಪ​ಟ​ಳದ ಕುರಿತು ಎಚ್ಚ​ರಿ​ಸಿದ್ದ. ಇದೀಗ ಅದೇ ಸ್ಥಳ​ದಲ್ಲಿ ಈ ಘಟನೆ ನಡೆ​ದಿದ್ದು, ಅರಣ್ಯ ಇಲಾಖೆ ನಿರ್ಲಕ್ಷ್ಯ ಕುರಿತು ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಉಪ್ಪಿನಂಗಡಿ (ಫೆ.21) :

ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಸೋಮವಾರ ಮುಂಜಾನೆ ಕಾಡಾನೆ ದಾಳಿಗೆ ಯುವತಿ ಹಾಗೂ ಆಕೆಯನ್ನು ರಕ್ಷಿಸಲು ಹೋದ ವ್ಯಕ್ತಿ ಬಲಿಯಾದ ಹೃದಯವಿದ್ರಾವಕ ಘಟನೆ ಸಂಭ​ವಿ​ಸಿ​ದೆ. ವಾರದ ಹಿಂದಷ್ಟೇ ಸ್ಥಳೀಯ ಯುವಕನೊಬ್ಬ ಈ ಭಾಗ​ದ​ಲ್ಲಿ ಕಾಡಾನೆ ಉಪ​ಟ​ಳದ ಕುರಿತು ಎಚ್ಚ​ರಿ​ಸಿದ್ದ. ಇದೀಗ ಅದೇ ಸ್ಥಳ​ದಲ್ಲಿ ಈ ಘಟನೆ ನಡೆ​ದಿದ್ದು, ಅರಣ್ಯ ಇಲಾಖೆ ನಿರ್ಲಕ್ಷ್ಯ ಕುರಿತು ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ನೈಲ ನಿವಾಸಿ ರಂಜಿ​ತಾ​(21), ರಮೇಶ್‌ ರೈ(55) ಮೃತ​ರು. ಪೇರಡ್ಕ ಹಾಲಿನ ಸೊಸೈಟಿ ಸಿಬ್ಬಂದಿ ರಂಜಿತಾ ಎಂದಿನಂತೆ ಕಾಡಂಚಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

Chikkamagaluru: ಒಂಟಿ ಸಲಗ ಅಟ್ಯಾಕ್ ರೈತ ಜಸ್ಟ್ ಮಿಸ್

ಕಾಡಿ​ನಿಂದ ಏಕಾ​ಏಕಿ ರಂಜಿತಾ ಮೇಲೆ ಮುಂಜಾನೆ ಆನೆ ದಾಳಿ(wild elephant attack) ನಡೆ​ಸಿ​ದ್ದು, ಆಗ ಈಕೆಯ ಬೊಬ್ಬೆ ಕೇಳಿ ರಕ್ಷ​ಣೆಗೆ ಬಂದ ಸ್ಥಳೀಯ​ರಾದ ರಮೇಶ್‌ ರೈ (55) ಅವರನ್ನು ಕೂಡ ಅಟ್ಟಾ​ಡಿ​ಸಿ​ಕೊಂಡು ಹೋದ ಆನೆ ಕಾಲಿನಿಂದ ತುಳಿದು ಬಲಿ ತೆಗೆದುಕೊಂಡಿದೆ. ರಂಜಿತಾ ಮನೆ​ಯಿಂದ ಸುಮಾರು 500 ಮೀಟರ್‌ ದೂರದಲ್ಲಿ ಕಾಡಾನೆ ದಾಳಿ ನಡೆ​ದಿ​ದೆ.

ಘಟ​ನೆ​ಯಲ್ಲಿ ರಮೇಶ್‌ ರೈ(Ramesh rai) ಅವರು ಸ್ಥಳ​ದಲ್ಲೇ ಮೃತ​ಪ​ಟ್ಟರೆ, ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಯುವತಿಯನ್ನು ಸ್ಥಳೀಯರು ನೆಲ್ಯಾಡಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ. ರಮೇಶ್‌ ರೈ ಅವರ ಜತೆ ಸ್ಥಳೀಯ ಆಟೋ ಚಾಲಕ ನಂದೀಶ್‌ ಅವರೂ ಯುವತಿ ರಕ್ಷ​ಣೆಗೆ ಬಂದಿದ್ದು, ಆಗ ಕಾಡಾನೆ ಅವರನ್ನೂ ಅಟ್ಟಾ​ಡಿ​ಸಿ​ಕೊಂಡು ಬಂದಿ​ತ್ತಾದರೂ ಅವರು ತಪ್ಪಿ​ಸಿ​ಕೊ​ಳ್ಳುವಲ್ಲಿ ಯಶ​ಸ್ವಿ​ಯಾ​ಗಿ​ದ್ದಾರೆ.

ಸಾರ್ವ​ಜ​ನಿ​ಕರ ಆಕ್ರೋ​ಶ: ಕಾಡಾನೆ ದಾಳಿಗೆ ಇಬ್ಬರು ಬಲಿ​ಯಾದ ಸುದ್ದಿ ಹಬ್ಬು​ತ್ತಿ​ದ್ದಂತೆæ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದರು. ಸ್ಥಳಕ್ಕೆ ಜಿಲ್ಲಾಧಿಕಾರಿ, ಡಿಎಫ್‌ಒ ಬಾರದೆ ಇಬ್ಬರ ಮೃತದೇಹವನ್ನು ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಅರಣ್ಯ ಇಲಾಖೆ(Forest deperrtment) ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದರು. ಕಡಬ, ಸುಬ್ರಹ್ಮಣ್ಯ ಪೊಲೀಸರು ಬಂದೋಬಸ್‌್ತ ಒದಗಿಸಿದರು.

Wild elephant attacks: ತೀರ್ಥಹಳ್ಳಿ: ಕುರು​ವ​ಳ್ಳಿ​ ಬಳಿ ಕಾಡಾನೆ ಹಾವಳಿ- ಆತಂಕ

ಡಿಸಿ, ಡಿಎಫ್‌ಒ ಭೇಟಿ: ಸ್ಥಳಕ್ಕೆ ಡಿಎಫ್‌ಒ ವೈ.ಕೆ.ದಿನೇಶ್‌ ಹಾಗೂ ಜಿಲ್ಲಾಧಿಕಾರಿ ರವಿಕುಮಾರ್‌ ಭೇಟಿ ನೀಡಿ, ಘಟನೆ ಬಗ್ಗೆ ಮಾಹಿತಿ ಪಡೆದರು. ಬಳಿಕ ಮೃತ ಯುವತಿ ಮನೆಗೆ ತೆರಳಿ ಮನೆಯವರಿಗೆ ಸಾಂತ್ವನ ತಿಳಿಸಿದರು.

ಜಿಲ್ಲಾ​ಧಿ​ಕಾರಿ ರವಿಕುಮಾರ್‌ ಮಾತ​ನಾ​ಡಿ, ಇಲ್ಲಿನ ಕಾಡಾನೆ ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಪೂರಕ ಕ್ರಮ ಕೈಗೊಳ್ಳಲಾಗುವುದು, ಮೃತ ಇಬ್ಬರ ಮನೆಯವರಿಗೆ ತಲಾ .15 ಲಕ್ಷ ಪರಿಹಾರ ನೀಡಲಾಗುವುದು ಎಂದರು.