Asianet Suvarna News Asianet Suvarna News

ಉತ್ತರಕನ್ನಡ: ಹೊನ್ನಾವರದ ಬಳಿ ಭೀಕರ ಅಪಘಾತ, ಇಬ್ಬರು ಸಾವು, 49 ಮಂದಿಗೆ ಗಾಯ

ಗೌರಿಬಿದನೂರಿನಿಂದ ಧರ್ಮಸ್ಥಳಕ್ಕೆ ಬಸ್ ಮೂಲಕ 53 ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನ ಅತೀ ವೇಗದ ಕಾರಣ ಸುಳೆಮುರ್ಕಿ ತಿರುವಿನಲ್ಲಿ ಬಸ್ ಪಲ್ಟಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. 
 

Two Killed in Private Bus Accident at Honnavar in Uttara Kannada grg
Author
First Published May 3, 2024, 8:44 PM IST

ಕಾರವಾರ(ಮೇ.03):  ಖಾಸಗಿ ಬಸ್‌ವೊಂದು ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿ 49 ಜನರಿಗೆ ಗಾಯಗಳಾದ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಸುಳೆಮುರ್ಕಿ ತಿರುವಿನಲ್ಲಿ ಇಂದು(ಶುಕ್ರವಾರ) ನಡೆದಿದೆ. ತುಮಕೂರಿನ ಲೋಕೇಶ್ (26), ಚಿಕ್ಕಬಳ್ಳಾಪುರದ ರುದ್ರೇಶ್ (38) ಅಫಘಾತದಲ್ಲಿ ಸಾವಿಗೀಡಾದವರು ಎಂದು ತಿಳಿದು ಬಂದಿದೆ. 

ಗೌರಿಬಿದನೂರಿನ ರಜನಿ (30) ಒಂದು ಕೈ ಕಳೆದುಕೊಂಡು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. 

Breaking: ಮಾಜಿ ಸಚಿವ ಬೈರತಿ ಬಸವರಾಜು ಕಾರು ಪಲ್ಟಿ; ಪ್ರಾಣಾಪಾಯದಿಂದ ಪಾರು

ಗೌರಿಬಿದನೂರಿನಿಂದ ಧರ್ಮಸ್ಥಳಕ್ಕೆ ಬಸ್ ಮೂಲಕ 53 ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನ ಅತೀ ವೇಗದ ಕಾರಣ ಸುಳೆಮುರ್ಕಿ ತಿರುವಿನಲ್ಲಿ ಬಸ್ ಪಲ್ಟಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. 

ಗಾಯಾಳುಗಳನ್ನು ಉಡುಪಿ, ಶಿವಮೊಗ್ಗದ ಮೆಗ್ಗಾನ್ ಹಾಗೂ ಹೊನ್ನಾವರ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Latest Videos
Follow Us:
Download App:
  • android
  • ios