Breaking: ಮಾಜಿ ಸಚಿವ ಬೈರತಿ ಬಸವರಾಜು ಕಾರು ಪಲ್ಟಿ; ಪ್ರಾಣಾಪಾಯದಿಂದ ಪಾರು
ಯಾದಗಿರಿ ಜಿಲ್ಲೆಯ ಸುರಪುರಕ್ಕೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ಯಾದಗಿರಿ ಬಳಿ ಕಾರು ಪಲ್ಟಿಯಾಗಿದೆ.
ಯಾದಗಿರಿ (ಏ.29): ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆಂದು ತೆರಳಿದ್ದ ಮಾಜಿ ಸಚಿವ ಹಾಗೂ ಹಾಲಿ ಶಾಸಕರೂ ಆಗಿರುವ ಬೈರತಿ ಬಸವರಾಜು ಅವರ ಫಾರ್ಚೂನರ್ ಕಾರು ಪಲ್ಟಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿದೇ ಕಾರಿನಲ್ಲಿದ್ದವರು ಪಾರಾಗಿದ್ದಾರೆ.
ಹೌದು, ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಾಮನಟಗಿ ಬಳಿ ಮಾಜಿ ಸಚಿವ ಬೈರತಿ ಬಸವರಾಜ ಅವರ ಪಾರ್ಚ್ಯೂನರ್ ಕಾರು ಪಲ್ಟಿಯಾಗಿದೆ. ಕಾರಿನಲ್ಲಿದ್ದ ಚಾಲಕ ಹಾಗೂ ಶಾಸಕರ ಗನ್ ಮ್ಯಾನ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ಬಿಜೆಪಿ ಅಭ್ಯರ್ಥಿ ರಾಜುಗೌಡ ಪರ ಮತಯಾಚನೆಗೆ ಆಗಮಿಸಿದ ವೇಳೆ ಘಟನೆ ಸಂಭವಿಸಿದೆ. ಆದರೆ, ಅದೃಷ್ಟವಶಾತ್ ಶಾಸಕ ಬೈರತಿ ಬಸವರಾಜು ಅವರು ಬೇರೆ ಕಾರಿನಲ್ಲಿ ತೆರಳಿದ್ದರಿಂದ ಅವರಿಗೆ ಯಾವುದೇ ಪ್ರಾಣಾಪಾಯ ಅಥವಾ ಗಾಯವಾಗಲೀ ಸಂಭವಿಸಿಲ್ಲ.
ಚಿತ್ರದುರ್ಗ ಮುರುಘಾ ಸ್ವಾಮೀಜಿ ಮತ್ತೆ ಜೈಲಿಗೆ ಶಿಫ್ಟ್; ಮೇ 27ರವರೆಗೆ ನ್ಯಾಯಾಂಗ ಬಂಧನ
'ಶಾಸಕ ಬೈರತಿ ಬಸವರಾಜು ಅವರ ಹಿಂದೆ ಕಾನ್‌ವೇನಲ್ಲಿ ಹೋಗುತ್ತಿದ್ದ ಶಾಸಕರ ಕಾರಿನಲ್ಲಿ ಗನ್‌ಮ್ಯಾನ್ ಹಾಗೂ ಚಾಲಕ ಇಬ್ಬರೇ ಇದ್ದರು. ಆದರೆ, ಹೆಚ್ಚಿನ ವಾಹನಗಳಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ಕೂಡಲೇ ರಸ್ತೆ ಬದಿಗೆ ನುಗ್ಗಿದೆ. ರಸ್ತೆ ಬದಿಯಲ್ಲಿ ತಗ್ಗಾದ ಹಳ್ಳದ ಪ್ರದೇಶವಿದ್ದರಿಂದ ಕೂಡಲೇ ಕಾರು ಪಲ್ಟಿಯಾಗಿದೆ. ಈ ಕಾರಿನ ಹಿಂದೆ ಬರುತ್ತಿದ್ದ ಕಾರಿನಲ್ಲಿದ್ದವರು ಶಾಸಕರಿಗೆ ಮಾಹಿತಿ ನೀಡಿದ್ದಾರೆ. ಎಲ್ಲರೂ ಬಂದು ಕಾರಿನಲ್ಲಿದ್ದ ಇಬ್ಬರನ್ನು ರಕ್ಷಣೆ ಮಾಡಿ ಹೊರಗೆ ಕರೆತಂದಿದ್ದಾರೆ. ನಂತರ, ಸಣ್ಣಪುಟ್ಟ ಗಾಯಗಳಿಂದ ಬಳಲುತ್ತಿದ್ದ ಗಾಯಾಳುಗಳನ್ನು ಅವರದ್ದೇ ಕಾರಿನಲ್ಲಿ ಕರೆದೊಯ್ದು ಸ್ಥಳೀಯ ಹುಣಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು, ಕನಕಪುರ ಸಂಗಮದಲ್ಲಿ ಈಜಲು ತೆರಳಿದಾಗ ದುರ್ಘಟನೆ
ಇನ್ನು ಘಟನೆ ನಡೆದ ಸ್ಥಳಕ್ಕೆ ಹುಣಸಗಿ ಪೊಲೀಸ್ ಠಾಣೆಯ ಪಿಎಸ್‌ಐ ಸಂಗೀತಾ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಘಟನೆಯಲ್ಲಿ ಮಾಜಿ ಸಚಿವರಿಗೆ ಯಾವುದೇ ಹಾನಿಯಾಗದ ಹಿನ್ನೆಲೆಯಲ್ಲಿ ವಾತಾವರಣ ಶಾಂತಿಯುವಾಗಿದೆ. ಅಪಘಾತ ಸ್ಥಳದಲ್ಲಿ ಹೆಚ್ಚಿನ ಜನರು ಸೇರುವ ಮುನ್ನವೇ ರಸ್ತೆಯನ್ನು ಕ್ಲಿಯರ್ ಮಾಡಿಸಿದ ಪೊಲೀಸ್ ಸಿಬ್ಬಂದಿ, ನಂತರ ಕಾರನ್ನು ಕ್ರೇನ್ ಸಹಾಯದಿಂದ ಮೇಲಕ್ಕೆತ್ತಿಸಿ, ತೆಗೆದುಕೊಂಡು ಹೋಗಿದ್ದಾರೆ.