ಹಂದಿ ಕಳವು ವಿಚಾರಕ್ಕೆ ಎರಡು ಗುಂಪುಗಳ ಗಲಾಟೆ : ಮಹಿಳೆ ಸ್ಥಿತಿ ಗಂಭೀರ
ಹಂದಿ ಕಳ್ಳತನದ ವಿಚಾರವಾಗಿ ಪಳ್ಳವಳ್ಳಿ ಗ್ರಾಮದ ಎರಡು ಗುಂಪುಗಳ ಮಧ್ಯೆ ಗಲಾಟೆ ವೇಳೆ ಕಲ್ಲು ಎತ್ತಿ ಹಾಕಿದ ಪರಿಣಾಮ ಮಹಿಳೆಗೆ ಗಂಭೀರ ಗಾಯವಾದ ಘಟನೆ ಚಳ್ಳಕರೆ ರಸ್ತೆ ಮಾರ್ಗದ ತೋಟಗಾರಿಕೆ ಇಲಾಖೆಯ ಬಳಿ ನಡೆದಿದೆ.
ಪಾವಗಡ : ಹಂದಿ ಕಳ್ಳತನದ ವಿಚಾರವಾಗಿ ಪಳ್ಳವಳ್ಳಿ ಗ್ರಾಮದ ಎರಡು ಗುಂಪುಗಳ ಮಧ್ಯೆ ಗಲಾಟೆ ವೇಳೆ ಕಲ್ಲು ಎತ್ತಿ ಹಾಕಿದ ಪರಿಣಾಮ ಮಹಿಳೆಗೆ ಗಂಭೀರ ಗಾಯವಾದ ಘಟನೆ ಚಳ್ಳಕರೆ ರಸ್ತೆ ಮಾರ್ಗದ ತೋಟಗಾರಿಕೆ ಇಲಾಖೆಯ ಬಳಿ ನಡೆದಿದೆ.
ಒಂದೇ ಕೋಮಿನ ಎರಡು ಗುಂಪು, ಪಾವಗಡಕ್ಕೆ ಬಂದಿದ್ದ ವೇಳೆ ಹಂದಿ ಕಳ್ಳತನ ವಿಚಾರವಾಗಿ ತಗಾದೆ ತೆಗೆದು ಪರಸ್ವರ ಆರೋಪಿಸಿ ಪುರುಷ ಹಾಗೂ ಮಹಿಳೆಯರಿದ್ದ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದಿದೆ.
ಗಲಾಟೆ ವಿಕೋಪಕ್ಕೆ ತಿರುಗಿ ಬಡಿದಾಡಿಕೊಂಡಿದ್ದು, ಈ ಮಧ್ಯೆ ಒಂದು ಗುಂಪಿನ ಮಹಿಳೆಯೊಬ್ಬರು ಮತ್ತೊಂದು ಗುಂಪಿನ ಮಹಿಳೆಗೆ ಸೈಜುಗಲ್ಲಿನಿಂದ ಎತ್ತಿಹಾಕಿದ ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿವೆ. ಗಲಾಟೆಯಲ್ಲಿದ್ದ ಮಹೇಶ್ ಅವರಿಗೂ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಯಿಂದ ತುಮಕೂರು ಜಿಲ್ಲಾಸ್ಪತ್ರೆಗೆ ರೆವಾನಿಸಲಾಗಿದೆ. ಈ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಎರಡು ಗುಂಪು ನೀಡಿದ ದೂರು ದಾಖಲಾಗಿರುವುದಾಗಿ ಪಿಎಸ್‌ಐ ಗುರುಮೂರ್ತಿ ತಿಳಿಸಿದ್ದಾರೆ.
ಬೆಳೆ ತಿಂದು ತೇಗಿದ ಹಂದಿಗಳು
ರಾಮನಗರ (ನ.13): ಮೊದಲೇ ಮಳೆ ಬೀಳದೇ ಬರದಿಂದ ಕಂಗಾಲಿರುವ ರೈತನಿಗೆ ಕಾಡು ಪ್ರಾಣಿಗಳ ಹಾವಳಿ ನಿದ್ದೆಗೆಡಿಸಿದೆ. ಮಳೆ ಇಲ್ಲದಿದ್ದರೂ ಕಷ್ಟ ಪಟ್ಟು ಬೆಳೆದ ಬೆಳೆಯನ್ನ ಕಾಡುಪ್ರಾಣಿಗಳು ನಾಶಪಡಿಸಿರೋದು ರೈತರಿಗೆ ನುಂಗಲಾರದ ತುತ್ತಾಗಿದೆ. ಬರಗಾಲದಲ್ಲಿ ಚಿಗುರಿದ್ದ ರಾಗಿ ಬಳೆ ಕಾಡುಹಂದಿಗಳ ಪಾಲಾಗಿದ್ದು ರೈತರ ಕಣ್ಣೀರಿಗೆ ಕಾರಣವಾಗಿದೆ.
ಬರಗಾಲದಲ್ಲಿ ಚಿಗುರಿದ್ದ ರಾಗಿ ತೆನೆ ಕಾಡುಹಂದಿಗಳ ಪಾಲು: ರೇಷ್ಮೆ ನಾಡು ರಾಮನಗರದಲ್ಲಿ ಒಂದೆಡೆ ಮಳೆ ಕೊರತೆಯಿಂದ ಬರಗಾಲ ಆವರಿದ್ರೆ, ಮತ್ತೊಂದೆಡೆ ಕಾಡುಪ್ರಾಣಿಗಳ ಹಾವಳಿ ರೈತರ ನಿದ್ದೆಗೆಡಿಸಿದೆ. ರಾಮನಗರ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ಜೊತೆಗೆ ಇದೀಗ ಕಾಡು ಹಂದಿಗಳ ಕಾಟ ಮಿತಿಮೀರಿದೆ. ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ತುಂಬೇನಹಳ್ಳಿಯಲ್ಲಿ ಕೊಯ್ಲಿಗೆ ಬಂದಿದ್ದ ರಾಗಿ ಫಸಲನ್ನ ಕಾಡುಹಂದಿಗಳು ತಿಂದುಹಾಕಿವೆ.
ರಾಮನಗರದಲ್ಲಿ ಒನಕೆ ಓಬವ್ವ ಭವನ ನಿರ್ಮಾಣಕ್ಕೆ ಕ್ರಮ: ಶಾಸಕ ಇಕ್ಬಾಲ್ ಹುಸೇನ್
ಪರಿಹಾರಕ್ಕೆ ಅರಣ್ಯ ಕಚೇರಿ ಮೆಟ್ಟಿಲೇರಿದ ರೈತ ಕುಟುಂಬ: ಗ್ರಾಮದ ತುಂಬೇನಹಳ್ಳಿಯ ರೈತ ರಾಮಯ್ಯ ತಮ್ಮ ಒಂದುವರೆ ಎಕರೆಯಲ್ಲಿ ಬೆಳೆದಿದ್ದ ರಾಗಿ ಕಾಡುಹಂದಿಗಳಿಂದ ಸಂಪೂರ್ಣ ನಾಶವಾಗಿದೆ. ರೈತ ರಾಮಯ್ಯ ಬೆಳೆ ರಕ್ಷಿಸಿಕೊಳ್ಳಲಾಗದೇ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಕಾಡುಹಂದಿಗಳ ಕಾಟ ತಪ್ಪಿಸುವಂತೆ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ರೂ ಯಾವುದೇ ಪ್ರಯೋಜನ ಇಲ್ಲ. ಹಾಗಾಗಿ ಸೂಕ್ತ ಪರಿಹಾರ ನೀಡವಂತೆ ಅರಣ್ಯ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಇನ್ನೂ ತುಂಬೇನಹಳ್ಳಿಯ ಒಂದು ಎಕರೆ ತೋಟದಲ್ಲಿ ಸಾಗುವಳಿ ಭೂಮಿಯಲ್ಲಿ ರಾಗಿ ಬೆಳೆದಿದ್ದ ರಾಮಯ್ಯ ಬರಗಾಲದಲ್ಲೂ ರಾಗಿ ತೆನೆ ಮೂಡಿದಕ್ಕೆ ಬಹಳ ಖಷಿಯಾಗುದ್ರು. ಆದರೆ ಅವರ ಹೊಲಕ್ಕೆ ನುಗ್ಗಿದ್ದ ಕಾಡಂದಿಗಳ ಗುಂಪು ಒಂದು ತೆನೆಯೂ ಬಿಡದೆ ಎಲ್ಲವನ್ನೂ ತಿಂದು ಹಾಕಿದೆ. ನನ್ನ ಮಗ ಅದೆಲ್ಲಿ ಸಾಲ ಮಾಡಿ ತಂದು ಹೊಲ ಬಿತ್ತಿದ್ನೋ ಈಗ ಉಪವಾಸ ಬೀಳೋ ಪರಿಸ್ಥಿತಿ ಬಂದಿದೆ ಅಂತ ರಾಮಯ್ಯ ತಾಯಿ ಗೌರಮ್ಮ ಕಣ್ಣೀರಿಟ್ಟಿದ್ದಾರೆ.
ಕೇಂದ್ರದ ಕಡೆ ಕೈ ತೋರುವ ಬದಲು ತಮ್ಮ ಕೆಲಸ ಮಾಡಲಿ: ಸಿಎಂಗೆ ಎಚ್‌ಡಿಕೆ ತಿರುಗೇಟು
ತಮ್ಮ ಹೊಲಗದ್ದೆಗಳಿಗೆ ಪದೇ ಪದೇ ಕಾಡಂದಿಗಳ ಬರುತ್ತಿದ್ದು ಕಾಡು ಮೃಗಗಳ ಕಾಟ ಹೆಚ್ಚಾಗಿದೆ ಅಂತ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡ್ರೂ ಅರಣ್ಯಾಧಿಕಾರಿಗಳು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ, ಹುಲಿಯುಗುರು ವಿಚಾರಕ್ಕೆ ಇಡೀ ರಾಜ್ಯಾಂದ್ಯಂತ ಕಾರ್ಯಾಚರಣೆ ಮಾಡಿದ ಅಧಿಕಾರಿಗಳು ರೈತರ ಗೋಳು ಯಾಕೆ ಕೇಳುತ್ತಿಲ್ಲ ಅಂತ ರೈತರು ಪ್ರಶ್ನೆ ಮಾಡಿದ್ದಾರೆ.