Asianet Suvarna News Asianet Suvarna News

ಜಮಖಂಡಿ: ಕಾರು-ಬೈಕ್‌ ಮುಖಾಮುಖಿ ಡಿಕ್ಕಿ, ಇಬ್ಬರ ದುರ್ಮರಣ

ದ್ವಿಚಕ್ರ ವಾಹನ ಹಾಗೂ ಬುಲೇರೋ ವಾಹನ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮುತ್ತಪ್ಪ ಸನದಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಸವಾರ ಬಸವರಾಜ ಗಲಗಲಿ ತೀವ್ರ ಸ್ವರೂಪದ ಪೆಟ್ಟಾಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮೃತಪಟ್ಟಿದ್ದಾನೆ.

Two Dies Due to Car Bike Accident at Jamakhandi in Bagalkot grg
Author
First Published Sep 16, 2023, 12:38 PM IST

ಜಮಖಂಡಿ(ಸೆ.16): ಕಾರು ಹಾಗೂ ಬೈಕ್‌ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಜಮಖಂಡಿ-ಮುಧೋಳ ಹೆದ್ದಾರಿಯಲ್ಲಿ ಗುರುವಾರ ನಡೆದಿದೆ. ಈ ಮುಧೋಳ ತಾಲೂಕಿನ ಪಿ.ಎಂ.ಬುದ್ದಿ ಗ್ರಾಮದ ಮುತ್ತಪ್ಪ ಸನದಿ (30), ಬಸವರಾಜ ಗಲಗಲಿ (20) ಮೃತರು. 

ದ್ವಿಚಕ್ರ ವಾಹನ ಹಾಗೂ ಬುಲೇರೋ ವಾಹನ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮುತ್ತಪ್ಪ ಸನದಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಸವಾರ ಬಸವರಾಜ ಗಲಗಲಿ ತೀವ್ರ ಸ್ವರೂಪದ ಪೆಟ್ಟಾಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮೃತಪಟ್ಟಿದ್ದಾನೆ.

ತೆಲಂಗಾಣದಲ್ಲಿ ಭೀಕರ ಅಪಘಾತ: ತಿರುಪತಿ ದರ್ಶನ ಪಡೆದು ಬರುತ್ತಿದ್ದ ಐವರು ಕನ್ನಡಿಗ ಭಕ್ತರು ಸಾವು

ಜಮಖಂಡಿಯಿಂದ ಸ್ವಗ್ರಾಮ ಮುಧೋಳ ತಾಲೂಕಿನ ಪಿಎಂ ಬುದ್ದಿಗೆ ಹೋಗುವ ವೇಳೆ ಈ ಘಟನೆ ಎನ್ನಲಾಗಿದೆ. ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸೈ ಮಹೇಶ ಸಂಖ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios