Asianet Suvarna News Asianet Suvarna News

ತೆಲಂಗಾಣದಲ್ಲಿ ಭೀಕರ ಅಪಘಾತ: ತಿರುಪತಿ ದರ್ಶನ ಪಡೆದು ಬರುತ್ತಿದ್ದ ಐವರು ಕನ್ನಡಿಗ ಭಕ್ತರು ಸಾವು

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬಡಚಿ ಗ್ರಾಮದ ಒಂದೇ ಕುಟುಂಬದ ಒಟ್ಟು 16 ಮಂದು ತಿರುಪತಿ ದರ್ಶನಕ್ಕೆ ತೆರಳಿದ್ದರು. ತಿರುಪತಿ ದರ್ಶನ ಪಡೆದು ವಾಪಸ್ ಬರುವ ವೇಳೆ ಕಡಪ-ಚಿತ್ತೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. 

Karnataka  Based Five Dies Due to Road Accident in Telangana grg
Author
First Published Sep 15, 2023, 1:25 PM IST

ಚಿಕ್ಕೋಡಿ(ಸೆ.15):  ಕ್ರೂಸರ್ ವಾಹನ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬ 5 ಜನರು ಸಾವನ್ನಪ್ಪಿ, 11 ಮಂದಿಗೆ ಗಂಭೀರವಾದ ಗಾಯಗಳಾದ ಘಟನೆ ತೆಲಂಗಾಣ ರಾಜ್ಯದ ಸೂರ್ಯಪೇಠ ಜಿಲ್ಲೆಯ ಮಠಮಪಲ್ಲಿಯಲ್ಲಿ ಇಂದು(ಶುಕ್ರವಾರ) ಬೆಳಗಿನ ಜಾವ 3:30 ರ ಸುಮಾರಿಗೆ ನಡೆದಿದೆ. 

ಶೋಭಾ ಆಜೂರ (36), ಅಂಬಿಕಾ ಆಜೂರ (14), ಮಾನಂದಾ ಆಜೂರ (32) ಹನುಮಂತ ಆಜೂರ (42) ಚಾಲಕ ಹನುಮಂತ ಜಾಧವ (32) ಸ್ಥಳದಲ್ಲೇ ಸಾನ್ನಪ್ಪಿದ್ದಾರೆ. ಇನ್ನು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಅಂತ ತಿಳಿದು ಬಂದಿದೆ. 11 ಜನರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಹೆದ್ದಾರಿ ಪಕ್ಕ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಟ್ರಕ್‌, 12 ಮಂದಿಯ ದಾರುಣ ಸಾವು

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬಡಚಿ ಗ್ರಾಮದ ಒಂದೇ ಕುಟುಂಬದ ಒಟ್ಟು 16 ಮಂದು ತಿರುಪತಿ ದರ್ಶನಕ್ಕೆ ತೆರಳಿದ್ದರು. ತಿರುಪತಿ ದರ್ಶನ ಪಡೆದು ವಾಪಸ್ ಬರುವ ವೇಳೆ ಕಡಪ-ಚಿತ್ತೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. 

ಕ್ರೂಸರ್ ವಾಹನ ಮಾಡಿಕೊಂಡು ಮೊದಲು ಶ್ರೀಶೈಲ ದರ್ಶನ ಪಡೆದು ಬಳಿಕ ತಿರುಪತಿಗೆ ತೆರಳಿದ್ದರು. ತಿರುಪತಿ ದರ್ಶನ ಮುಗಿಸಿಕೊಂಡು ರಾತ್ರಿ ವಾಪಸ್ ಆಗುತಿದ್ದಾಗ ನಡೆದ ಅಪಘಾತದಲ್ಲಿ ಒಂದೇ ಕುಟುಂಬ ಐವರು ಮೃತಪಟ್ಟಿದ್ದಾರೆ. 

Follow Us:
Download App:
  • android
  • ios