ಮುಗ್ಟಾ ಗ್ರಾಮದ ಬಳಿ ಕಾರ್‌ ಪಲ್ಟಿಯಾಗಿದ್ದು ಚಾಲಕ ಸೇರಿ 6 ಜನರಿಗೆ ಗಂಭೀರ ಗಾಯಗಳಾಗಿದ್ದವು. ಅವರಲ್ಲಿ ವಸಂತರಾವ ಕುಲ್ಕರ್ಣಿ ಹಾಗೂ ಬ್ರಹ್ಮಪುರದ ರಾಮಾಚಾರ್ಯ ಕುಲ್ಕರ್ಣಿ ಎನ್ನುವವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಾಲ್ಕು ಮಂದಿಗೆ ಕಲಬುರಗಿಯ ಮನ್ನೂರ ಆಸ್ಪತ್ರೆ ಹಾಗೂ ಯುನೈಟೈಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಚಿತ್ತಾಪುರ(ಜೂ.23):  ಸೇಡಂ ತಾಲೂಕಿನ ಮೊತಕಪಲ್ಲಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಕಲಬುರಗಿಗೆ ವಾಪಸ್‌ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಮುಗ್ಟಾ ಕ್ರಾಸ್‌ ಬಳಿ ಕಾರ್‌ ಪಲ್ಟಿಯಾಗಿ ಇಬ್ಬರು ​ಮೃತಪಟ್ಟಿದ್ದು, ನಾಲ್ಕು ಜನ ಗಾಯಗೊಂಡ ಘಟನೆ ನಡೆದಿದೆ.

ಜಿಪಂ ನಿವೃತ್ತ ಕಾರ್ಯದರ್ಶಿಯಾಗಿದ್ದ ವಸಂತರಾವ ಕುಲ್ಕರ್ಣಿ ಸೇರಿದಂತೆ ಐದು ಜನರು ಇನ್ನೊವಾ ಕಾರಿನಲ್ಲಿ ವೈಯಕ್ತಿಕ ಕಾರ್ಯಕ್ರಮದ ನಿಮಿತ್ತ ಸೇಡಂ ತಾಲೂಕಿನ ಮೊತಕಪಲ್ಲಿ ಹನುಮಾನ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರ​ಳಿ​ದ್ದರು. 

Raichur: ಬೈಕ್ ಮತ್ತು ಬಸ್ ಡಿಕ್ಕಿಯಾಗಿ ಜಮೀನಿನಲ್ಲಿ ಉರುಳಿ ಬಿದ್ದ ಬಸ್: 30 ಜನ​ರಿಗೆ ಗಾಯ

ಹಿಂತಿರುಗುವ ಸಮಯದಲ್ಲಿ ಮುಗ್ಟಾ ಗ್ರಾಮದ ಬಳಿ ಕಾರ್‌ ಪಲ್ಟಿಯಾಗಿದ್ದು ಚಾಲಕ ಸೇರಿ 6 ಜನರಿಗೆ ಗಂಭೀರ ಗಾಯಗಳಾಗಿದ್ದವು. ಅವರಲ್ಲಿ ವಸಂತರಾವ ಕುಲ್ಕರ್ಣಿ ಹಾಗೂ ಬ್ರಹ್ಮಪುರದ ರಾಮಾಚಾರ್ಯ ಕುಲ್ಕರ್ಣಿ ಎನ್ನುವವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಾಲ್ಕು ಮಂದಿಗೆ ಕಲಬುರಗಿಯ ಮನ್ನೂರ ಆಸ್ಪತ್ರೆ ಹಾಗೂ ಯುನೈಟೈಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಡಬೂಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.