Raichur: ಬೈಕ್ ಮತ್ತು ಬಸ್ ಡಿಕ್ಕಿಯಾಗಿ ಜಮೀನಿನಲ್ಲಿ ಉರುಳಿ ಬಿದ್ದ ಬಸ್: 30 ಜನ​ರಿಗೆ ಗಾಯ

ಚಾಲ​ಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌ ರಸ್ತೆ ಪಕ್ಕದ ಜಮೀ​ನಿಗೆ ನುಗ್ಗಿದ ಪರಿ​ಣಾಮ 30ಕ್ಕೂ ಹೆಚ್ಚು ಜನರು ಗಾಯ​ಗೊಂಡಿ​ರುವ ಘಟನೆ ಗುರು​ವಾರ ನಡೆ​ದಿದೆ. 

Over 30 passengers injured as bus falls into field after colliding with bike in Raichur gvd

ಮಾನ್ವಿ (ಜೂ.23): ಚಾಲ​ಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌ ರಸ್ತೆ ಪಕ್ಕದ ಜಮೀ​ನಿಗೆ ನುಗ್ಗಿದ ಪರಿ​ಣಾಮ 30ಕ್ಕೂ ಹೆಚ್ಚು ಜನರು ಗಾಯ​ಗೊಂಡಿ​ರುವ ಘಟನೆ ಗುರು​ವಾರ ನಡೆ​ದಿದೆ. ತಾಲೂ​ಕಿನ ನಂದಿ​ಹಾಳ ಸಮೀ​ಪ​ದಲ್ಲಿ ಅಪ​ಘಾತ ಸಂಭ​ವಿ​ಸಿದ್ದು, ಘಟ​ನೆ​ಯನ್ನು ಸಣ್ಣ ಪುಟ್ಟ​ಗಾ​ಯ​ಗ​ಳಾ​ಗಿದ್ದು, ಯಾವುದೇ ಪ್ರಾಣ ಹಾನಿ ಸಂಭ​ವಿ​ಸಿಲ್ಲ. 

ಬೆಂಗ​ಳೂ​ರಿನ ಕುರು​ಬ​ರ​ಹ​ಳ್ಳಿಯ ಚಾಲ​ಕರ ಸಂಘದ 30ಕ್ಕೂ ಹೆಚ್ಚು ಸದ​ಸ್ಯರು ಮಂತ್ರಾ​ಲ​ಯದ ಶ್ರೀರಾ​ಘ​ವೇಂದ್ರ ಸ್ವಾಮಿ​ಗಳ ಮಠಕ್ಕೆ ಬಂದು ಶ್ರೀಗು​ರು​ರಾ​ಯರ ದರ್ಶನ ಪಡೆದು ಮರಳಿ ಬೆಂಗ​ಳೂ​ರಿಗೆ ಹೋಗು​ತ್ತಿದ್ದಾಗ ಮಾನ್ವಿ ಪಟ್ಟ​ಣದ ಹೊರ​ವ​ಲ​ಯದ ಸಿಂಧ​ನೂರು ರಸ್ತೆ​ಯಲ್ಲಿ ಬರುವ ನಂದಿ​ಹಾಳ ಗ್ರಾಮದ ಬಳಿ ಬಸ್‌ಗೆ ದ್ವಿಚಕ್ರ ವಾಹ​ನದ ಅಡ್ಡಿ ಬಂದಿದ್ದು, ಇದ​ರಿಂದಾಗಿ ಚಾಲ​ಕನ ನಿಯಂತ್ರಣ ತಪ್ಪಿದ ಬಸ್‌ ರಸ್ತೆ ಪಕ್ಕದ ಜಮೀ​ನಿಗೆ ನುಗ್ಗಿದೆ. 

ಪರಿಣಾಮ ಪ್ರಯಾ​ಣಿ​ಕ​ರಿಗೆ ಸಣ್ಣ-ಪುಟ್ಟ​ಗಾ​ಯ​ಗ​ಳಾ​ಗಿದ್ದು, ಅವ​ರನ್ನು ಮಾನ್ವಿ ತಾಲೂ​ಕಾ​ಸ್ಪ​ತ್ರೆ​ಯಲ್ಲಿ ದಾಖ​ಲಿಸಿ ಚಿಕಿತ್ಸೆ ನೀಡ​ಲಾ​ಗು​ತ್ತಿದೆ. ಗಂಭೀ​ರ​ವಾಗಿ ಗಾಯ​ಗೊಂಡಿ​ರುವ ಬಸ್‌ ಚಾಲ​ಕ​ನನ್ನು ರಿಮ್ಸ್‌ ಬೋಧಕ ಆಸ್ಪ​ತ್ರೆಯಲ್ಲಿ ಚಿಕಿತ್ಸೆ ಪಡೆ​ಯು​ತ್ತಿ​ದ್ದಾನೆ. ಅಪ​ಘಾ​ತದ ಮಾಹಿತಿ ಪಡೆದ ಪೊಲೀ​ಸರು ಸ್ಥಳಕ್ಕೆ ಭೇಟಿ ನೀಡಿ ಗಾಯಾ​ಳು​ಗ​ಳನ್ನು ಆಸ್ಪ​ತ್ರೆಗೆ ದಾಖ​ಲಿ​ಸಿ​ದ್ದಾರೆ. ಘಟ​ನೆಗೆ ಸಂಬಂಧಿ​ಸಿ​ದಂತೆ ಮಾನ್ವಿ ಠಾಣೆ​ಯಲ್ಲಿ ಪ್ರಕ​ರ​ಣ ದಾಖ​ಲಾ​ಗಿದೆ.

ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಾಂಡವಪುರ ತಹಶೀಲ್ದಾರ್ ಸೌಮ್ಯ

ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ: ಗರ್ಡಾಡಿ ಗ್ರಾಮದ ಮೊಗೆರಡ್ಕ ಕ್ರಾಸ್‌ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಬೈಕಿಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ಸ್ಥಳದಲ್ಲಿಯೇ ಮೃತಪಟ್ಟಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ. ಮೃತ ಯುವಕ ಕೇರಳದ ಕಾಸರಗೋಡು ನಿವಾಸಿ ದೀಕ್ಷಿತ್‌ (19) ಎಂದು ಗುರುತಿಸಲಾಗಿದೆ. ಬುಧವಾರ ದೀಕ್ಷಿತ್‌ನ ಹುಟ್ಟುಹಬ್ಬವಾಗಿದ್ದು ಈ ಹಿನ್ನಲೆಯಲ್ಲಿ ಬೆಳಗ್ಗೆ ವೇಣೂರಿನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಗರ್ಡಾಡಿ ಮೊಗೆರಡ್ಕ ಕ್ರಾಸ್‌ನಲ್ಲಿ ಎದುರಿನಿಂದ ಬಂದ ಬಸ್‌ ಬೈಕಿಗೆ ಡಿಕ್ಕಿ ಹೊಡೆದಿದೆ. ಬಸ್‌ ಚಾಲಕ ಅತಿಯಾದ ವೇಗದಲ್ಲಿ ಲಾರಿಯೊಂದನ್ನು ಓವರ್‌ ಟೇಕ್‌ ಮಾಡುತ್ತಾ ರಸ್ತೆಯ ತೀರಾ ಬಲ ಭಾಗಕ್ಕೆ ಬಂದಿದ್ದು ಎದುರಿನಿಂದ ಬಂದ ಬೈಕಿಗೆ ಡಿಕ್ಕಿ ಹೊಡೆದಿದೆ. ಹೊಡೆತದ ರಭಸಕ್ಕೆ ತಲೆಗೆ ಗಂಭೀರವಾಗಿ ಗಾಯಗೊಂಡ ದೀಕ್ಷಿತ್‌ನನ್ನು ಸ್ಥಳೀಯರು ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದರೂ ಆವೇಳೆಗಾಗಲೇ ಆತ ಮೃತಪಟ್ಟಿದ್ದ. ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರಾಎ.

ಇನ್ನೊಂದು ವಾರದಲ್ಲಿ 3500 ಪೊಲೀಸ್‌ ಕಾನ್‌ಸ್ಟೇಬಲ್‌ ನೇಮಕ: ಸಚಿವ ಪರಮೇಶ್ವರ್‌

ದೀಕ್ಷಿತ್‌ ವೇಣೂರಿನ ಎಸ್‌.ಡಿ.ಎಂ ಐಟಿಐಯಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದ ಉತ್ತಮ ಕ್ರೀಡಾಪಟುವೂ ಆಗಿದ್ದ ಕಬಡ್ಡಿ ಆಟಗಾರನಾಗಿ ಗುರುತಿಸಿಕೊಂಡಿದ್ದ. ಈತ ಕಂಬಳದ ಓಟಗಾರನೂ ಆಗಿದ್ದ. ಈತ ಕುವೆಟ್ಟು ಗ್ರಾಪಂ ವ್ಯಾಪ್ತಿಯ ಒಡೀಲ್‌ನಲ್ಲಿರುವ ತನ್ನ ಮಾವನ ಮನೆಯಲ್ಲಿದ್ದು ಶಿಕ್ಷಣ ಪಡೆಯುತ್ತಿದ್ದ.

Latest Videos
Follow Us:
Download App:
  • android
  • ios