Asianet Suvarna News Asianet Suvarna News

ಕಾರು ಬೈಕ್ ಡಿಕ್ಕಿ: ಸವಾರರು ಸ್ಥಳದಲ್ಲೇ ಸಾವು

ಹಾಸನದ ಹೊಳೆನರಸೀಪುರದಲ್ಲಿ ಕಾರು-ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯುವಕರಿಬ್ಬರು ಬೈಕ್ ಮೂಲಕ ಹಾಸನದಿಂದ ಗ್ರಾಮದತ್ತ ತೆರಳುವ ಸಂದರ್ಭ ಘಟನೆ ನಡೆದಿದೆ. ಕಾರು ಚಾಲಕನಿಗೂ ಗಂಭೀರ ಗಾಯವಾಗಿದೆ.

two die in Road Accident near Hassan
Author
Bangalore, First Published Aug 14, 2019, 11:28 AM IST
  • Facebook
  • Twitter
  • Whatsapp

ಹಾಸನ(ಆ.14): ಹೊಳೆನರಸೀಪುರ ತಾಲೂಕು ಸಿಗರನಹಳ್ಳಿ ಬಳಿ ಕಾರು ಬೈಕ್ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರು ಚಾಲಕನಿಗೂ ಗಂಭೀರ ಗಾಯವಾಗಿದೆ.

ಕಾರು- ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಉಮೇಶ್(23), ಹರೀಶ್(22)ಮೃತಪಟ್ಟಿದ್ದಾರೆ. ಇಬ್ಬರೂ ಸಿಗರನಹಳ್ಳಿ ನಿವಾಸಿಗಳಾಗಿದ್ದು, ಹಾಸನದಿಂದ ಗ್ರಾಮಕ್ಕೆ ತೆರಳುವಾಗ ಘಟನೆ ನಡೆದಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾರು ಇದೇ ತಾಲೂಕಿನ ಹರದನಹಳ್ಳಿಯ ಅನಿಲ್ ಎಂಬುವರಿಗೆ ಸೇರಿದೆ. ಕಾರು ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಮಾಲೀಕ ಅನಿಲ್ ಸದ್ಯ ಮರೆಸಿಕೊಂಡಿದ್ದಾರೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಯುಭಾರ ಕುಸಿತ: ಕರಾವಳಿ, ಮಲೆನಾಡಲ್ಲಿ ಮತ್ತೆ ಭಾರಿ ಮಳೆ ಭೀತಿ

Follow Us:
Download App:
  • android
  • ios