Asianet Suvarna News Asianet Suvarna News

ಬಾಗಲಕೋಟೆ: ಡಿಎಚ್‌ಒ ಹುದ್ದೇಲಿ ಇಬ್ಬರ ಜಟಾಪಟಿ..!

ಕಳೆದ ಕೆಲವು ದಿನಗಳಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹುದ್ದೆಗಾಗಿ ನಡೆದ ಜಟಾಪಟಿ ಸೋಮವಾರ ಬಹಿರಂಗಗೊಂಡಿತು. ಈವರೆಗೆ ಇದ್ದ ಡಿಎಚ್‌ಒ ಡಾ.ಜಯಶ್ರೀ ಎಮ್ಮಿ ಅವರನ್ನು ಆ.11ರಂದು ಸರ್ಕಾರ ವರ್ಗಾವಣೆ ಮಾಡಿ, ಅವರ ಜಾಗಕ್ಕೆ ಶಾಸಕ ಎಚ್‌.ವೈ. ಮೇಟಿ ಅವರ ಅಳಿಯ ಡಾ.ರಾಜಕುಮಾರ ಯರಗಲ್‌ ಅವರನ್ನು ನಿಯೋಜಿಸಿದ್ದು, ಅದರಂತೆ ಡಾ.ರಾಜಕುಮಾರ ಡಿಎಚ್‌ಒ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ, ಡಾ.ಜಯಶ್ರೀ ಅವರು ತಮ್ಮ ವರ್ಗಾವಣೆಗೆ ಕೆಎಟಿ ತಡೆಯಾಜ್ಞೆ ತಂದಿದ್ದು, ಸೋಮವಾರ ಅವರೂ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿ ಜಟಾಪಟಿಗೆ ಕಾರಣರಾದರು.

Two Competing for the Post of DHO in Bagalkot grg
Author
First Published Aug 22, 2023, 11:00 PM IST

ಬಾಗಲಕೋಟೆ(ಆ.22):  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹುದ್ದೆಗೆ ಅಧಿಕಾರಿಗಳಿಬ್ಬರ ನಡುವೆ ಪೈಪೋಟಿ ನಡೆದಿದೆ. ಸೋಮವಾರ ಬೆಳಗ್ಗೆ ಇಬ್ಬರೂ ಡಿಎಚ್‌ಒಗಳು ಒಂದೇ ಕೊಠಡಿಯಲ್ಲೇ ಅಧಿಕಾರಕ್ಕಾಗಿ ಜಟಾಪಟಿ ನಡೆಸಿದ ಪ್ರಸಂಗ ನಡೆಯಿತು. ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುತ್ತ ಒಬ್ಬರಿಗೊಬ್ಬರು ಕಾಲೆಳೆದುಕೊಂಡಿದ್ದು ಆಡಳಿತ ವ್ಯವಸ್ಥೆಗೆ ಕೈಗನ್ನಡಿಯಂತೆ ಇತ್ತು.

ಕಳೆದ ಕೆಲವು ದಿನಗಳಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹುದ್ದೆಗಾಗಿ ನಡೆದ ಜಟಾಪಟಿ ಸೋಮವಾರ ಬಹಿರಂಗಗೊಂಡಿತು. ಈವರೆಗೆ ಇದ್ದ ಡಿಎಚ್‌ಒ ಡಾ.ಜಯಶ್ರೀ ಎಮ್ಮಿ ಅವರನ್ನು ಆ.11ರಂದು ಸರ್ಕಾರ ವರ್ಗಾವಣೆ ಮಾಡಿ, ಅವರ ಜಾಗಕ್ಕೆ ಶಾಸಕ ಎಚ್‌.ವೈ. ಮೇಟಿ ಅವರ ಅಳಿಯ ಡಾ.ರಾಜಕುಮಾರ ಯರಗಲ್‌ ಅವರನ್ನು ನಿಯೋಜಿಸಿದ್ದು, ಅದರಂತೆ ಡಾ.ರಾಜಕುಮಾರ ಡಿಎಚ್‌ಒ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ, ಡಾ.ಜಯಶ್ರೀ ಅವರು ತಮ್ಮ ವರ್ಗಾವಣೆಗೆ ಕೆಎಟಿ ತಡೆಯಾಜ್ಞೆ ತಂದಿದ್ದು, ಸೋಮವಾರ ಅವರೂ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿ ಜಟಾಪಟಿಗೆ ಕಾರಣರಾದರು.

ಪಂಚಮಸಾಲಿ ಮೀಸಲಾತಿಗೆ ಮತ್ತೆ ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ನಾನೇ ಡಿಎಚ್‌ಒ ಎನ್ನುತ್ತಿದ್ದಾರೆ ಎಬ್ಬರೂ:

ಜಿಲ್ಲಾಡಳಿತ ಭವನದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಕೊಠಡಿಯಲ್ಲಿ ಇಬ್ಬರೂ ಕುಳಿತುಕೊಂಡಿದ್ದಾರೆ. ಅಧಿಕಾರ ವಹಿಸಿಕೊಂಡಿರುವ ಡಾ.ಯರಗಲ್‌ ‘ನಾನೇ ಡಿಎಚ್‌ಒ’ ಎಂದರೆ, ‘ವರ್ಗಾವಣೆಗೆ ಕೆಎಟಿ ತಡೆಯಾಜ್ಞೆ ನೀಡಿದೆ. ಅವರಿಗೆ ನಾನಿನ್ನೂ ಅಧಿಕಾರ ವಹಿಸಿಕೊಟ್ಟಿಲ್ಲ. ನಾನೇ ಡಿಎಚ್‌ಒ’ ಎನ್ನುತ್ತಿದ್ದಾರೆ ಜಯಶ್ರೀ ಎಮ್ಮಿ. ಇವರಿಬ್ಬರ ಮಧ್ಯೆ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾರಿಗೆ ಫೈಲ್‌ ತೋರಿಸಬೇಕೆಂಬ ಗೊಂದಲಕ್ಕೆ ಬಿದ್ದಿದ್ದು, ಹೈರಾಣಾಗುತ್ತಿದ್ದಾರೆ. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜಟಾಪಟಿಯಿಂದಾಗಿ ಕಚೇರಿಗೆ ಪೊಲೀಸ್‌ ಬಂದೋ ಬಸ್‌್ತ ಒದಗಿಸಲಾಗಿದೆ.

2016ರಲ್ಲಿ ಡಾ.ಯರಗಲ್‌ ಕೆಎಟಿ ತಡೆ ತಂದಿದ್ರು!

ಡಾ.ರಾಜಶೇಖರ್‌ ಯರಗಲ್‌ 2016ರಲ್ಲಿ ಬಾಗಲಕೋಟೆಯ ಡಿಎಚ್‌ಒ ಆಗಿದ್ದರು. ಆಗ ಡಾ.ಜಗದೀಶ ನುಚ್ಚಿನ ಎಂಬುವವರು ಡಿಎಚ್‌ಒ ಆಗಿ ವರ್ಗಾವಣೆಯಾಗಿ ಬಂದಿದ್ದರು. ಆಗ ಡಾ.ಯರಗಲ್‌ ಸಹ ಈಗಿನ ಡಿಎಚ್‌ಒ ಅವರಂತೆ ಕೆಎಟಿಯಿಂದ ತಡೆಯಾಜ್ಞೆ ತಂದಿದ್ದರು. ಇಬ್ಬರ ನಡುವೆ ಬರೋಬ್ಬರಿ ಹತ್ತು ತಿಂಗಳ ಕಾಲ ಕಿತ್ತಾಟ, ಜಟಾಪಟಿ ನಡೆದಿತ್ತು. ಇಬ್ಬರೂ ನಾಲ್ಕು ಬಾರಿ ಅಧಿಕಾರ ವಹಿಸಿಕೊಂಡಿದ್ದರು. ಕೊನೆಗೆ ಡಾ.ಯರಗಲ್‌ ಇಲ್ಲಿಯೇ ಉಳಿದುಕೊಂಡಿದ್ದರು. ಆಗಲೂ ಎಚ್‌.ವೈ.ಮೇಟಿ ಶಾಸಕರಾಗಿದ್ದರು.

ಚಾಯ್​ ವಾಲಾಗಳಾದ ಡಿಪ್ಲೋಮಾ ಎಂಜಿನಿಯರ್ಸ್​..ಇವರ ಚಹಾಗೆ ಫುಲ್ ಫಿದಾ ಆದ ಬಾಗಲಕೋಟೆ ಮಂದಿ !

ನನ್ನ ವರ್ಗಾವಣೆಗೆ ಕೆಎಟಿ ತಡೆ ನೀಡಿದೆ. ಅಧಿಕಾರ ಹಸ್ತಾಂತರ ಮಾಡದಿದ್ದರಿಂದ ನೀವೇ ಅಧಿಕಾರ ವಹಿಸಿಕೊಳ್ಳುವಂತೆ ಮೇಲಧಿಕಾರಿಗಳು ತಿಳಿಸಿದ್ದಾರೆ. ಆದರೆ, ಡಾ.ಯರಗಲ್‌ ಇದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅವರ ವಿರುದ್ಧ ಹಲವಾರು ಪ್ರಕರಣಗಳಿವೆ. ವಿಜಯಪುರ ಡಿಎಚ್‌ಒ ಹುದ್ದೆಯಿಂದ ವರ್ಗಾವಣೆಯಾಗಿರುವ ಬಂದಿರುವ ಡಾ.ರಾಜಕುಮಾರ ಯರಗಲ್‌ ಶಾಸಕ ಎಚ್‌.ವೈ.ಮೇಟಿ ಅವರ ಅಳಿಯ. ರಾಜಕೀಯ ಪ್ರಭಾವವೂ ವರ್ಗಾವಣೆಯಲ್ಲಿ ಕೆಲಸ ಮಾಡಿದೆ ಎಂದು ಟಿಎಚ್‌ಒ ಡಾ.ಜಯಶ್ರೀ ಎಮ್ಮಿ ತಿಳಿಸಿದ್ದಾರೆ.  

ಸರ್ಕಾರದ ಆದೇಶದ ಪ್ರಕಾರ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಅವರು ಸರ್ಕಾರದಿಂದ ಆದೇಶ ತರಲಿ. ಹುದ್ದೆ ಬಿಟ್ಟು ಕೊಡುತ್ತೇನೆ. ಡಾ.ಜಯಶ್ರೀ ಎಮ್ಮಿ ಅವರ ವಿರುದ್ಧ ನನ್ನದೇ ಸಹಿ ನಕಲಿ ಮಾಡಿದ ಆರೋಪವಿದೆ ಎಂದು ಟಿಎಚ್‌ಒ ಡಾ.ರಾಜಕುಮಾರ್‌ ಯರಗಲ್‌ ಹೇಳಿದ್ದಾರೆ.  

Follow Us:
Download App:
  • android
  • ios