Shivamogga: ಕಾರ್ಗತ್ತಲ ಜಡಿ ಮಳೆಯಲ್ಲಿ ಪ್ರತ್ಯಕ್ಷವಾದ ಹೆಬ್ಬಾವು: ಕೆರೆ ದಂಡೆ ಒಡೆದು ತೋಟಕ್ಕೆ ಹಾನಿ

ತಾಲೂಕಿನ ಲಕ್ಷ್ಮೀಪುರ ಗ್ರಾಮದ ಬಾಲಕೃಷ್ಣ ಎಂಬುವರ ಅಡಕೆ ತೋಟದಲ್ಲಿ ಆಹಾರ ಹುಡುಕಿಕೊಂಡು ಬಂದಿದ್ದ ಹೆಬ್ಬಾವೊಂದು ಹೆಗ್ಗಣವೊಂದನ್ನು ಭಕ್ಷಿಸಿ ಮರವೊಂದರ ಬಳಿ ಬೀಡುಬಿಟ್ಟಿತ್ತು. ಇದನ್ನು ಗಮನಿಸಿದ ಕುಟುಂಬದವರು ಭಯ ಆತಂಕದಿಂದ ಉರಗ ತಜ್ಞ ಸ್ನೇಕ್ ಕಿರಣ್‌ಗೆ ಮಾಹಿತಿ ನೀಡಿದ್ದಾರೆ. 

twelve feet python rescued at shivamogga district gvd

ವರದಿ: ರಾಜೇಶ್ ಕಾಮತ್, ಶಿವಮೊಗ್ಗ

ಶಿವಮೊಗ್ಗ (ಜು.08): ತಾಲೂಕಿನ ಲಕ್ಷ್ಮೀಪುರ ಗ್ರಾಮದ ಬಾಲಕೃಷ್ಣ ಎಂಬುವರ ಅಡಕೆ ತೋಟದಲ್ಲಿ ಆಹಾರ ಹುಡುಕಿಕೊಂಡು ಬಂದಿದ್ದ ಹೆಬ್ಬಾವೊಂದು ಹೆಗ್ಗಣವೊಂದನ್ನು ಭಕ್ಷಿಸಿ ಮರವೊಂದರ ಬಳಿ ಬೀಡುಬಿಟ್ಟಿತ್ತು. ಇದನ್ನು ಗಮನಿಸಿದ ಕುಟುಂಬದವರು ಭಯ ಆತಂಕದಿಂದ ಉರಗ ತಜ್ಞ ಸ್ನೇಕ್ ಕಿರಣ್‌ಗೆ ಮಾಹಿತಿ ನೀಡಿದ್ದಾರೆ. 

ಕತ್ತಲೆಯಲ್ಲಿ ಜಡಿ ಮಳೆಯ ಮಧ್ಯೆ ಸಾಕಷ್ಟು ಹರಸಾಹಸ ಪಟ್ಟು ಸ್ನೇಕ್ ಕಿರಣ್ ಹೆಬ್ಬಾವು ಅನ್ನು ಸೆರೆ ಹಿಡಿದರು. ಹೆಬ್ಬಾವು 12 ಅಡಿ ಉದ್ದವಿದ್ದು, 15 ಕೆಜಿ ತೂಕವಿದೆ. ಅರಣ್ಯ ಇಲಾಖೆ ಅಧಿಕಾರಿಗಳ  ಸಮ್ಮುಖದಲ್ಲಿ ಸಮೀಪದ ಅರಣ್ಯಕ್ಕೆ ಹೆಬ್ಬಾವು ನ್ನು ಬಿಡಲಾಯಿತು. ಬೃಹದಾಕಾರದ ಹೆಬ್ಬಾವು ಅನ್ನು ಉರಗ ಸಂರಕ್ಷಕ  ಸ್ನೇಕ್ ಕಿರಣ್  ಸುರಕ್ಷಿತವಾಗಿ ಸಂರಕ್ಷಿಸಿದರು.

ವಿವಾದದ ಸ್ವರೂಪ ಪಡೆದ ನಾಟಕ : ಶಿವಮೊಗ್ಗದಲ್ಲಿ ಹಿಂದೂ ಪರ ಸಂಘಟನೆಗಳಿಂದ ಪ್ರದರ್ಶನಕ್ಕೆ ಅಡ್ಡಿ

ಕೆರೆ ದಂಡೆ ಒಡೆದು ತೋಟಕ್ಕೆ ಹಾನಿ: ಸಾಗರ ತಾಲೂಕಿನ ಆಚಾಪುರ ಗ್ರಾಪಂ ವ್ಯಾಪ್ತಿಯ ಹಳ್ಳೂರು ಗ್ರಾಮದ ಕೆರೆ ದಂಡೆ ಒಡೆದು ಅಡಕೆ ತೋಟಕ್ಕೆ ಹಾನಿಯಾಗಿದೆ. ಗಿಳಾಲಗುಂಡಿ ಮತ್ತು ಹಳ್ಳೂರು ಗ್ರಾಮದ ಗಡಿಯಲ್ಲಿರುವ ಕೆರೆಯನ್ನು ಕಳೆದ ವರ್ಷ ಖಾತ್ರಿ ಯೋಜನೆಯಡಿ ಕೆರೆ ದಂಡೆ ಬಲಪಡಿಸುವ ಕಾಮಗಾರಿ ನಡೆಸಲಾಗಿತ್ತು . ಕಳೆದ 3 ದಿನಗಳಿಂದ ಸಾಗರ ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಯಿಂದ ಗಿಳಾಲಗುಂಡಿಯ ಅಮ್ಮನಕೆರೆ ತುಂಬಿ ಹರಿದು ಕೋಡಿ ಬಿದ್ದಿದೆ.

ಈ ಕೋಡಿ ನೀರು ಗಿಳಾಲಗುಂಡಿ ಗದ್ದೆ ಹರುವಿನ ನಡುವೆ ಹಾದು ಹಳ್ಳೂರು ಕೆರೆ ಸೇರುತ್ತದೆ . ಇದರಿಂದಾಗಿ ಹಳ್ಳೂರು ಕೆರೆ ದಂಡೆ ಒಡೆದು ಕೆರೆ ನೀರು ತೋಟಕ್ಕೆ ನುಗ್ಗಿದೆ. ಕೆರೆ ಕೋಡಿಗೆ ಬಯಲುಸೀಮೇರ ಮನೆಯ ಶ್ರೀಕಂಠ ರವರ ಅಡಕೆ ತೋಟಕ್ಕೆ  ನೀರು ಪ್ರವಾಹದಂತೆ ಹರಿದಿದೆ.  ನೀರು ನುಗ್ಗಿದ ಪರಿಣಾಮ ಕೆರೆ ದಂಡೆಯ ಮಣ್ಣು , ಕಲ್ಲು ತೋಟದ ತುಂಬ ಹರಡಿ  ತೋಟ ಹಾಳಾಗಿದೆ. ತೋಟ ಹಾಳಾಗಿದ್ದರಿಂದ  ಪರಿಹಾರ ನೀಡುವಂತೆ ತೋಟದ ಮಾಲೀಕರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಧರ್ಮದ ಹೆಸರಿನಲ್ಲಿ ಭಾವನೆಗಳ ಕೆರಳಿಸುತ್ತಿರುವ ಬಿಜೆಪಿ: ಮಧು ಬಂಗಾರಪ್ಪ

ಮಳೆ ಆರ್ಭಟಕ್ಕೆ ಹಾನಿ: ಕಳೆದ ಮೂರ್ನಾಲ್ಕು ದಿನಗಳಿಂದ ಸಾಗರ ತಾಲೂಕಿನಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು ಸಾಗರ ನಗರಸಭೆ ವ್ಯಾಪ್ತಿಯ ನೆಹರು ನಗರಕ್ಕೆ ಹೋಗುವ ಮಾರ್ಗದಲ್ಲಿರುವ ಮನೆಯ ಗೋಡೆಯೊಂದು ಕುಸಿದು ಮೂರು ದ್ವಿಚಕ್ರ ವಾಹನ ಜಖಂಗೊಂಡಿರುವ ಘಟನೆ ರಾತ್ರಿ  ನಡೆದಿದೆ.ಸಾಗರ ತಾಲೂಕಿನಾದ್ಯಂತ ಸೇರಿದಂತೆ ನಗರ ವ್ಯಾಪ್ತಿಯಲ್ಲಿ  ಎಡ ಬಿಡದೆ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಟಿವಿಎಸ್ ಶೋರೂಮ್ ಬಳಿ ರಾತ್ರಿ  ಪ್ರದೀಪ್ ಎಂಬುವರ ಮನೆಯ ಗೋಡೆ ಬಿದ್ದಿರುವ ರಭಸಕ್ಕೆ ಮನೆಯ ಮುಂದೆ ನಿಲ್ಲಿಸಿದ ಮೂರು ದಿವ್ಚಕ್ರ ವಾಹನ ಸಂಪೂರ್ಣ ಜಖಂಗೊಂಡಿದೆ. 

ಘಟನೆ ಸಂದರ್ಭದಲ್ಲಿ ಪ್ರದೀಪ್ ಹಾಗೂ ಅವರ ಪತ್ನಿ ಮತ್ತು ಮೂವರು ಚಿಕ್ಕ ಮಕ್ಕಳು ಮನೆಯಲ್ಲಿ ವಾಸವಾಗಿದ್ದು ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಾತ್ರಿ ಸಂದರ್ಭದಲ್ಲಿ ಮಳೆಯ ಆರ್ಭಟ ಹೆಚ್ಚಾದರೆ ಮನೆ ಸಂಪೂರ್ಣ ಬೀಳುವ ಸ್ಥಿತಿಯಲ್ಲಿ ಇದ್ದು ಕುಟುಂಬಸ್ಥರು ಭಯದಲ್ಲಿ ಜೀವನ ನಡೆಸುವ ಸ್ಥಿತಿ ಉದ್ಭವವಾಗಿದೆ. ಸಾಗರ ನಗರಸಭೆ ಅಧಿಕಾರಿಗಳು ಇತ್ತ ಗಮನ ಹರಿಸಿ ಈ ಕುಟುಂಬಕ್ಕೆ ಸೂಕ್ತ ನೆಲೆಯೊದಗಿಸಬೇಕಿದೆ.

Latest Videos
Follow Us:
Download App:
  • android
  • ios