ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಒಂದು ಸಣ್ಣ ಅಗ್ನಿ ಪರೀಕ್ಷೆಯಂತಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದ್ದ ಈ ಚುನಾವಣೆ ಫಲಿತಾಂಶದ ಆಧಾರದ ಮೇಲೆ ಲೋಕಸಭಾ ಚುನಾವಣೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕಾಂಗ್ರೆಸ್-ಜೆಡಿಎಸ್ ನಿರ್ಧರಿಸಲಿದೆ. ಡಿಸಿಎಂ ಉಸ್ತುವಾರಿ ಹೊತ್ತ ತುಮಕೂರು ಫಲಿತಾಂಶ ಹೇಗಿದೆ?

ತುಮಕೂರು: ಉಪಮುಖ್ಯಮಂತ್ರಿ ಪರಮೇಶ್ವರ್ ಉಸ್ತುವಾರಿ ಹೊತ್ತ ಈ ಜಿಲ್ಲೆಯಲ್ಲಿ ಕಾಂಗ್ರೆಸ್‌ ತೀವ್ರ ಮುಖಭಂಗ ಅನುಭವಿಸಿದೆ. ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಮೈತ್ರಿಯೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿದರೂ, ಉಳಿದ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ಗೆ ಮುಖಭಂಗವಾಗಿದೆ. ಅದರಲ್ಲಿಯೂ ಪರಮೇಶ್ವರ್ ಅವರ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಜೆಡಿಎಸ್ ಜಯಭೇರಿ ಸಾಧಿಸಿದ್ದು, ಕಾಂಗ್ರೆಸ್‌ ಅನ್ನು ಜನರು ತಿರಸ್ಕರಿಸಿರುವುದು ಸ್ಪಷ್ಟ.

ಮೈಸೂರಿನಲ್ಲಿಯೂ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಪಡೆದಿದ್ದು, ಅಧಿಕಾರ ಹಿಡಿಯಲು ವಿಫಲವಾದಂತೆ, ತುಮಕೂರು ಫಲಿತಾಂಶವೂ ಹೊರಬಿದ್ದಿದೆ. ಆದರೆ, ಇದು ಡಿಸಿಎಂ ಉಸ್ತುವಾರಿ ಹೊತ್ತ ಜಿಲ್ಲೆ ಎಂಬುವುದು ಬಹಳ ಮುಖ್ಯ. ಅಕಸ್ಮಾತ್ ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಇನ್ನೊಂದು ನಾಲ್ಕು ಕ್ಷೇತ್ರಗಳನ್ನು ಗೆದ್ದಿದ್ದರೆ ಮಾತ್ರ, ಕಾಂಗ್ರೆಸ್ ಮತ್ತಷ್ಟು ಮುಖಭಂಗ ಅನುಭವಿಸಬೇಕಾಗಿತ್ತು.

ಮಹಾನಗರ ಪಾಲಿಕೆ ಅಧಿಕಾರಕ್ಕೆ ಮೈತ್ರಿ:
ತುಮಕೂರು ಮಹಾನಗರ ಪಾಲಿಕೆ ಅತಂತ್ರವಾಗಿದ್ದು, ಜೆಡಿಎಸ್-ಕಾಂಗ್ರೆಸ್ ದೋಸ್ತಿ ಅಧಿಕಾರಕ್ಕೆ ಬರಲಿದೆ. ಎಂಟು ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ತನ್ನ ಬಲವನ್ನು 12ಕ್ಕೇರಿಸಿಕೊಂಡರೂ, ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ. 

ಗುಬ್ಬಿಯಲ್ಲಿ ಸಚಿವ ಶ್ರೀನಿವಾಸ್​ ಎಂದಿನಂತೆ ಜೆಡಿಎಸ್​​ಗೆ ಅಧಿಕಾರ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ ಬಿಜೆಪಿ ಶಾಸಕ ಮಾಧುಸ್ವಾಮಿಗೆ ಮುಖಭಂಗವಾಗಿದ್ದು, ಜೆಡಿಎಸ್ ಹೆಚ್ಚು ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. 

ಮಧುಗಿರಿಯಲ್ಲಿ ಸೋತಿದ್ದರೂ ಕಾಂಗ್ರೆಸ್​​ಗೆ ಅಧಿಕಾರ ತರುವಲ್ಲಿ ರಾಜಣ್ಣ ಯಶಸ್ವಿಯಾಗಿದ್ದಾರೆ. ಒಟ್ಟಾರೆ ಡಿಸಿಎಂ ಪರಮೇಶ್ವರ್ ಉಸ್ತುವಾರಿ ಹೊತ್ತ ಜಿಲ್ಲೆಯಲ್ಲಿ ಕಾಂಗ್ರೆಸ್ ಸುಸ್ತು ಹೊಡೆದಿದೆ

ತುಮಕೂರು ಮಹಾನಗರ ಪಾಲಿಕೆ - ಅತಂತ್ರ
ತುಮಕೂರು - 35
ಕಾಂಗ್ರೆಸ್​ - 10
ಜೆಡಿಎಸ್​ - 10
ಬಿಜೆಪಿ - 12
ಅತಂತ್ರ - 03

ಪಟ್ಟಣ ಪಂಚಾಯತ್ - 2

1. ಕೊರಟಗೆರೆ - ಜೆಡಿಎಸ್​​
2. ಗುಬ್ಬಿ - ಜೆಡಿಎಸ್​​

ಪುರಸಭೆ - 2
1. ಮಧುಗಿರಿ - ಕಾಂಗ್ರೆಸ್​
2. ಚಿಕ್ಕನಾಯಕನಹಳ್ಳಿ - ಜೆಡಿಎಸ್​​

ಸ್ಥಳೀಯ ಸಂಸ್ಥೆ ಚುನಾವಣಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಜ್ಯವಾರು ಲೆಕ್ಕಚಾರ:

ಪುರಸಭೆ - 53
ಕಾಂಗ್ರೆಸ್ - ​21
ಬಿಜೆಪಿ - 11
ಜೆಡಿಎಸ್​ - 11
ಅತಂತ್ರ - 10

ನಗರಸಭೆ - 29
ಕಾಂಗ್ರೆಸ್​ - 05
ಬಿಜೆಪಿ - 10
ಜೆಡಿಎಸ್ - ​03
ಅತಂತ್ರ - 11

ಪಟ್ಟಣ ಪಂಚಾಯಿತಿ - 20
ಕಾಂಗ್ರೆಸ್ -​ 07
ಬಿಜೆಪಿ -07
ಜೆಡಿಎಸ್​ - 02
ಅತಂತ್ರ - 04

ಮಹಾನಗರ ಪಾಲಿಕೆ - 3
ಶಿವಮೊಗ್ಗ - ಬಿಜೆಪಿ
ಮೈಸೂರು - ಅತಂತ್ರ
ತುಮಕೂರು - ಅತಂತ್ರ