ತುಮಕೂರು(ಆ.14): ಉತ್ತರ ಕರ್ನಾಟಕದ ನೆರೆಹಾವಳಿ ಸಂತ್ರಸ್ತರಿಗೆ ತಿಪಟೂರು ಲೈಫ್ ಎಂಪವರ್‌ಮೆಂಟ್‌ ಸಂಸ್ಥೆಯು ನಗರದಲ್ಲೆಡೆ ಅನುಕೂಲವಾಗುವಂತಹ ಬಟ್ಟೆ, ಊಟ, ನೀರು ಸೇರಿದಂತೆ ಎಲ್ಲಾ ಆಹಾರ ಹಾಗೂ ಹೊದಿಕೆ ಸಾಮಗ್ರಿಗಳನ್ನು ಸಂಗ್ರಹಿಸಿ ವಾಹನದ ಮೂಲಕ ಬಾಗಲಕೋಟೆಗೆ ಕೊಂಡೊಯ್ಯಲಾಯಿತು.

ನೇರವಾಗಿ ಅಲ್ಲಿನ ಸಂತ್ರಸ್ತರಿಗೆ ತಾವೇ ಸ್ವತಃ ನೀಡಲು ಸಂಸ್ಥೆಯ ಅಧ್ಯಕ್ಷ ಸಿ.ಎಸ್‌.ರೇಣುಕಾರಾಧ್ಯ, ಹರೀಶ್‌, ಮನು, ಕಿರಣ್‌, ಧನು, ಪ್ರಕಾಶ್‌, ರವಿ, ತೇಜು, ಜಯಾನಂದಯ್ಯ ಸೇರಿದಂತೆ ಇತರರು ತೆರಳಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಾಮಗ್ರಿಗಳನ್ನು ಸಂಗ್ರಹಿಸಲು ಹಾಗೂ ಸಂತ್ರಸ್ತರಿಗೆ ಎಲ್ಲಾ ರೀತಿಯ ಆಹಾರವನ್ನು ನೀಡಿರುವ ಜನರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ತುಮಕೂರು: ಬೋನಿಗೆ ಬಿತ್ತು 45 ಮಂಗಗಳು..!