Asianet Suvarna News Asianet Suvarna News

ಪ್ರಕೃತಿ ಮನುಷ್ಯನಿಗೆ ಮತ್ತಷ್ಟು ಭಯಾನಕ ಪಾಠ ಕಲಿಸಲಿದೆ : ಸ್ವಾಮೀಜಿ ಭವಿಷ್ಯ

ಮನುಷ್ಯನ ದುರಾಸೆಯಿಂದಲೇ ಅನಾಹುತಗಳು ಸಂಭವಿಸುತ್ತಿದ್ದು, ವಿಕೋಪಗಳು ಇನ್ನಷ್ಟು ಹೆಚ್ಚಾಗಲಿದೆ ಎಂದು ಸ್ವಾಮೀಜಿಯೋರ್ವರು ಭಯಾನಕ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

Tumakuru Swamiji Predicts About People Life
Author
Bengaluru, First Published Aug 24, 2020, 7:18 AM IST

ತಿಪಟೂರು (ಆ.24):  ಮನುಷ್ಯರ ದುರಾಸೆ ಮತ್ತು ಅತಿ ಬುದ್ಧಿವಂತಿಕೆಯಿಂದ ಪ್ರಕೃತಿ ವಿಕೋಪ, ಸಮಾಜದಲ್ಲಿ ಅಶಾಂತಿ, ಅಜಾಗರೂಕತೆ ತಾಂಡವವಾಡುತ್ತಿದೆ. ಇದು ಮುಂದುವರೆದರೆ ಪ್ರಕೃತಿಯೇ ಮನುಷ್ಯನಿಗೆ ಮತ್ತಷ್ಟುಭಯಾನಕ ಪಾಠ ಕಲಿಸಲಿದೆ ಎಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಬನ್ನೀಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ನಡೆದ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವರ ರೈತರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಹತ್ತಾರು ಯೋಜನೆಗಳಲ್ಲದೆ ಕೆರೆ ಅಭಿವೃದ್ಧಿ, ಪಶುಸಂಗೋಪನೆಯಂತಹ ಹತ್ತು ಹಲವು ಮಾನವೀಯತೆಯ ಕಾರ್ಯಕ್ರಮಗಳನ್ನು ಜಾರಿಗೆ ತಂದು ಸರ್ಕಾರ ಹಮ್ಮಿಕೊಳ್ಳಲಾಗದಂತಹ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕೊರೋನಾ ಭೀತಿ: ರಾಜ್ಯ ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ಸಿದ್ದು

ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗಲೆಂಬ ದೃಷ್ಟಿಯಿಂದ ಕೆರೆ-ಕಟ್ಟೆಗಳನ್ನು ಅಭಿವೃದ್ಧಿಗೊಳಿಸಿ ರೈತರಿಗೆ ಕೆರೆಯನ್ನು ಹಸ್ತಾಂತರಗೊಳಿಸುತ್ತಿರುವುದು ಪವಿತ್ರ ಕಾರ್ಯವಾಗಿದೆ. ಸಕಲ ಜೀವರಾಶಿಗಳಿಗೆ ನೀರು ಮುಖ್ಯ. ರೈತರು ಸಹ ಇದರ ಪ್ರಯೋಜನ ಪಡೆದುಕೊಳ್ಳಬೇಕು. ಹಾಗೆಯೇ ಪ್ರಕೃತಿಗೆ ವಿರುದ್ಧವಾಗಿ ನಡೆಯದೆ ಕೆರೆ ಕಟ್ಟೆಗಳನ್ನು ಉಳಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಶಾಸಕ ಬಿ.ಸಿ. ನಾಗೇಶ್‌ ಮಾತನಾಡಿ, ನೈಸರ್ಗಿಕ ಸಂಪತ್ತಿನಲ್ಲಿ ಅತಿ ಅಮೂಲ್ಯವಾದುದು ಜಲ ಸಂಪತ್ತು. ಪ್ರತಿ ಜೀವ ರಾಶಿಗೂ ನೀರು ಬೇಕಾಗಿದ್ದು, ನಾಡಿನ ಜಲಮೂಲಗಳಲ್ಲಿ ಒಂದಾದ ಕೆರೆಗಳ ಹೂಳೆತ್ತಿ ಅಭಿವೃದ್ಧಿಪಡಿಸುವ ಕೆಲಸ ನಮ್ಮದಾಗಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿರುವ ಕೆಲಸ ಕಾರ್ಯಗಳಿಗೆ ಜನರು ಸಹಕಾರ ನೀಡುವ ಮೂಲಕ ಅದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.

ಮುಂದಿನ ವಾರ ಭಾರತದ ಮೊದಲ ಕೊರೋನಾ ಲಸಿಕೆ ವೆಬ್‌ಸೈಟ್ ಲಾಂಚ್!.

ಕಾರ್ಯಕ್ರಮದಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕಿ ದಯಾಶೀಲ, ತಾಲೂಕು ಯೋಜನಾಧಿಕಾರಿ ಶಾಂತ ನಾಯಕ್‌, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿಧರ್‌, ವಲಯಾಧ್ಯಕ್ಷ ಯೋಗಾನಂದ, ಆರ್ಥಿಕ ಸಾಕ್ಷರತಾ ಕೇಂದ್ರದ ರೇಖಾ, ಮೇಲ್ವಿಚಾರಕರಾದ ಅಣ್ಣಪ್ಪ, ಸಂತೋಷ್‌, ಎ.ಜಿ. ಪ್ರವೀಣ್‌, ಪುಷ್ಪ, ಕೃಷಿ ಮೇಲ್ವಿಚಾರಕ ಮಹೇಂದ್ರ, ಪ್ರಸನ್ನಕುಮಾರ್‌ ಇದ್ದರು.

Follow Us:
Download App:
  • android
  • ios