ಮುಂದಿನ ವಾರ ಭಾರತದ ಮೊದಲ ಕೊರೋನಾ ಲಸಿಕೆ ವೆಬ್‌ಸೈಟ್ ಲಾಂಚ್!

ಭಾರತ ಸೇರಿದಂತೆ ಹಲವು ದೇಶಗಳು ಕೊರೋನಾ ವೈರಸ್ ಲಸಿಕೆ ಸಂಶೋಧನೆಯಲ್ಲಿ ತೊಡಗಿದೆ. ಹಲವು ಪ್ರಯೋಗದ ಹಂತದಲ್ಲಿದೆ. ಇನ್ನೂ ಕೆಲವು ಬಳಕೆಗೆ ಅಂತಿಮ ಮುದ್ರೆಗಾಗಿ ಕಾಯುತ್ತಿದೆ. ಆದರೆ ಲಸಿಕೆ ಜನಸಾಮಾನ್ಯರಿಗೆ ಯಾವಾಗ ಲಭ್ಯವಾಗುತ್ತೆ ಅನ್ನೋ ಕುರಿತು ಸ್ಪಷ್ಟ ಮಾಹಿತಿ ಮಾತ್ರ ಸಿಗುತ್ತಿಲ್ಲ. ಈ ಸಮಸ್ಯೆ ನಿವಾರಿಸಲು ಇದೀಗ ICMR ಹೊಸ ಸೂತ್ರ ಜಾರಿಗೆ ತರುತ್ತಿದೆ.

ICMR will launch india first coronavirus vaccine website by next week

ನವದೆಹಲಿ(ಆ.23): ಕೊರೋನಾ ಲಸಿಕೆ ಕುರಿತು ಸಂಪೂರ್ಣ ಮಾಹಿತಿಗಾಗಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR) ಕೊರೋನಾ ವ್ಯಾಕ್ಸಿನ್ ವೆಬ್‌ಸೈಟ್ ಬಿಡುಗಡೆ ಮಾಡುತ್ತಿದೆ. ಈ ವೆಬ್‌ಸೈಟ್‌ನಲ್ಲಿ ಭಾರತದ ಹಾಗೂ ವಿದೇಶದಲ್ಲಿ ತಯಾರಾಗುತ್ತಿರುವ ಕೊರೋನಾ ಲಸಿಕೆ, ಪ್ರಯೋಗ ಸೇರಿದಂತೆ ಎಲ್ಲಾ ಮಾಹಿತಿಗಳು ಲಭ್ಯವಾಗಲಿದೆ. 

ವರ್ಷಾಂತ್ಯಕ್ಕೆ ಕೊರೋನಾಗೆ ಭಾರತದ ಲಸಿಕೆ: ಗುಡ್‌ ನ್ಯೂಸ್‌ ಕೊಟ್ಟ ಕೇಂದ್ರ ಆರೋಗ್ಯ ಸಚಿವ!..

ಮುಂದಿನ ವಾರದ ನೂತನ ಕೊರೋನಾ ವ್ಯಾಕ್ಸಿನ್ ವೆಬ್‌ಸೈಟ್ ಬಿಡುಗಡೆಯಾಗಲಿದೆ. ವಿಶೇಷ ಅಂದರೆ ಈ ಮಾಹಿತಿಗಳು ಇಂಗ್ಲೀಷ್‌ನಲ್ಲಿ ಮಾತ್ರವಲ್ಲ, ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯವಾಗಲಿದೆ. ಮುಂದಿನ ವಾರದಿಂದ ಸಾರ್ವಜನಿಕರು ವೆಬ್‌ಸೈಟ್ ಮೂಲಕ ಮಾಹಿತಿ ಪಡೆಯಬಹುದು.  

ಭಾರತದ ಜೊತೆ ಸೇರಿ ಲಸಿಕೆ ಉತ್ಪಾದನೆಗೆ ರಷ್ಯಾ ಉತ್ಸುಕ!.

ನೂತನ ಕೊರೋನಾ ಲಸಿಕೆ ವೆಬ್‌ಸೈಟ್ ಮಾಹಿತಿ:

  • ಮೊದಲ ಹಂತದಲ್ಲಿ ಕೊರೋನಾ ವೈರಸ್ ಲಸಿಕೆ ವೆಬ್‌ಸೈಟ್‌ನಲ್ಲಿ ಭಾರತ ಹಾಗೂ ವಿದೇಶದಲ್ಲಿನ ಸಂಶೋಧನೆ, ಹಾಗೂ ತಯಾರಾಗುತ್ತಿರುವ ಕೊರೋನಾ ಲಸಿಕೆ ಕುರಿತ ಮಾಹಿತಿ ಲಭ್ಯವಾಗಲಿದೆ
  • ಭಾರತದಲ್ಲಿ ಸಂಶೋಧನೆಯಾಗುತ್ತಿರುವ ಕೊರೋನಾ ಲಸಿಕೆ, ಪ್ರಯೋಗದ ಹಂತ, ಮಾರುಕಟ್ಟೆ ಪ್ರವೇಶ ಕುರಿತ ಮಾಹಿತಿ ಲಭ್ಯವಾಗಲಿದೆ
  • ಭಾರತ್ ಬಯೋಟೆಕ್, ಹಾಗೂ ಝೈಡಸ್ ಕ್ಯಾಡಿಲಾ ಕೊರೋನಾ ಲಸಿಕೆ ಕುರಿತ ಮಾಹಿತಿಯೂ ಇದರಲ್ಲಿ ಲಭ್ಯವಾಗಲಿದೆ
  • ಇತರ ವೈರಸ್, ಖಾಯಿಲೆಗಳಿಗೆ ಸೂಕ್ತ ಲಸಿಕೆ ಹಾಗೂ ಆರೋಗ್ಯಕ್ಕಾಗಿ ಯಾವ ಲಸಿಕೆ ಉತ್ತಮ ಅನ್ನೋ ಮಾಹಿತಿ ಲಭ್ಯವಾಗಲಿದೆ
  • ವಿಶ್ವ ಆರೋಗ್ಯ ಸಂಸ್ಥೆಯ ಪ್ರಮುಖ ಮಾಹಿತಿ, ಮಾರ್ಗಸೂಚಿ, ಲಸಿಕೆ ಕುರಿತ ಮಾಹಿತಿಗಳು ನೂತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಭಾರತ ಕೊರೋನಾ ಲಸಿಕೆ ಲಭ್ಯತೆ ಕುರಿತು ಮಾಹಿತಿ ನೀಡಿದ್ದಾರೆ. ಈ ವರ್ಷಾಂತ್ಯದಲ್ಲಿ ಭಾರತದ ಕೊರೋನಾ ಲಸಿಕೆ ಸಿದ್ಧವಾಗಲಿದೆ ಎಂದು ಸಿಹಿ ಸುದ್ದಿ ನೀಡಿದ್ದಾರೆ. ಭಾರತದ 2 ಕೊರೋನಾ ವೈರಸ್ ಲಸಿಕೆ ತಯಾರಿಕಾ ಫಾರ್ಮಾ 2ನೇ ಹಂತದ ಪ್ರಯೋಗವನ್ನು ಯಶಸ್ವಿಯಾಗಿ ಮುಗಿಸಿದೆ. ಪ್ರಾಯೋಗಿಕ ಹಂತದ ಪರೀಕ್ಷೆಗಳು ಬಹುತೇಕ ಮುಗಿದೆ ಎಂದು ICMR ಇತ್ತೀಚೆಗೆ ಹೇಳಿದೆ.

Latest Videos
Follow Us:
Download App:
  • android
  • ios