ಎನ್‌ಐಎ ದಾಳಿ ಪ್ರತಿಕಾರಕ್ಕೆ ಸಂಚು, ತುಮಕೂರು ಪಿಎಫ್‌ಐ ಜಿಲ್ಲಾಧ್ಯಕ್ಷನ ಬಂಧನ

ಪಿಎಫ್‌ ಐ ಮುಖಂಡರು ಹಾಗೂ ಕಚೇರಿಗಳ ಮೇಲೆ ಎನ್‌ಐಎ ದಾಳಿಗೆ ಪ್ರತಿಕಾರವಾಗಿ ಶಾಂತಿ ಸುವ್ಯವಸ್ಥೆ ಕದಡಲು ತಯಾರಿ ನಡೆಸಿದ್ದ ಆರೋಪದ ಮೇಲೆ ತುಮಕೂರು ಜಿಲ್ಲಾ ಪಿಎಫ್‌ ಐ ಜಿಲ್ಲಾಧ್ಯಕ್ಷನನ್ನು  ಪೊಲೀಸರು ವಶಕ್ಕೆ ಪಡೆದಿದ್ದಾರೆ.

Tumakuru District PFI District President Rehan Khan Arrested gow

ವರದಿ : ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್  

ತುಮಕೂರು (ಸೆ.27): ಪಿಎಫ್‌ ಐ ಮುಖಂಡರು ಹಾಗೂ ಕಚೇರಿಗಳ ಮೇಲೆ ಎನ್‌ಐಎ ದಾಳಿಗೆ ಪ್ರತಿಕಾರವಾಗಿ ಶಾಂತಿ ಸುವ್ಯವಸ್ಥೆ ಕದಡಲು ತಯಾರಿ ನಡೆಸಿದ್ದ ಆರೋಪದ ಮೇಲೆ ತುಮಕೂರು ಜಿಲ್ಲಾ ಪಿಎಫ್‌ ಐ ಜಿಲ್ಲಾಧ್ಯಕ್ಷನನ್ನು  ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಬೆಳ್ಳಂಬೆಳಗ್ಗೆ 5 ಗಂಟೆ ವೇಳೆ ರಾಜ್ಯಾದ್ಯಂತ ಪಿಎಫ್‌ಐ ಮುಖಂಡರ ಮೇಲೆ ಪೊಲೀಸ್ ದಾಳಿ ನಡೆಸಲಾಗಿತ್ತು. ಅಂತೆಯೇ ತುಮಕೂರು ನಗರದಲ್ಲೂ ಪಿಎಫ್‌ಐ ಜಿಲ್ಲಾಧ್ಯಕ್ಷ ರಿಹಾನ್ ಖಾನ್‌ ಮನೆ ಮೇಲೆ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆಯಲಾಗಿದೆ. ತುಮಕೂರು ನಗರದ ಸದಾಶಿವನಗರದ ವಾಸಿಯಾದ ರಿಹಾನ್‌ ಖಾನ್‌ ಹೋಮ್‌ ಅಪ್ಲೈನ್ಸ್‌ ವ್ಯವಹಾರ ನಡೆಸುತ್ತಿದ್ದ,  ಜೊತೆಗೆ ಪಿಎಫ್‌ಐ ಸಂಘಟನೆಯಲ್ಲಿ ಜಿಲ್ಲಾಧ್ಯಕ್ಷನಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದ,  ಈತ ಪಿಎಫ್‌ಐ ಮುಖಂಡರ ಮನೆ ಮೇಲಿನ ಐಎನ್‌ಎ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲು  ಶಾಂತಿ ಸುವವ್ಯಸ್ಥೆಗೆ ಯತ್ನಿಸಿದ್ದರು ಎನ್ನಲಾಗಿದೆ. ತುಮಕೂರು ತಿಲಕ್‌ ಪಾರ್ಕ್‌ ಸ್ಟೇಷನ್‌ ವ್ಯಾಪ್ತಿಯ ಪೊಲೀಸರಿಂದ ತನಿಖೆ ಮುಂದುವರೆದಿದೆ. ಸುಮಾರು 5 ಗಂಟೆಗಳ ಕಾಲ  ಎಸ್ಪಿ ರಾಹುಲ್‌ ಕುಮಾರ್‌ ಶಹಪೂರ್‌ ವಾಡ್‌ ನಿರಂತರ ವಿಚಾರಣೆ ನಡೆಸಿದರು.

ತುಮಕೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಪೂರ್‌ ವಾಡ್‌ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ವಶಕ್ಕೆ ಪಡೆದ ಆರೋಪಿಯನ್ನು ಸಿಆರ್ಪಿಸಿ 107,151 ಅಡಿಯಲ್ಲಿ ಆರೋಪಿ ತಹಶೀಲ್ದಾರ್ ಎದುರು ಹಾಜರು ಪಡಿಸಿದ್ರು.  ತುಮಕೂರು ತಹಶೀಲ್ದಾರ್‌ ಮೋಹನ್‌  ಆರೋಪಿಯನ್ನು ಅಕ್ಟೋಬರ್‌ ಎರಡವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಿದ್ರು. 

Gadag: PFI ನಲ್ಲಿ ಆ್ಯಕ್ಟಿವ್ ಇದ್ದ 25 ಜನರ ಪೈಕಿ ಕೆಲವ್ರು ಅರೆಸ್ಟ್ ಆಗ್ತಿದ್ದಂತೆ ಉಳಿದವರಿಗೆ ಢವಢವ..!

ಈ ಕುರಿತು ಪ್ರತಿಕ್ರಿಯೆ ನೀಡಿದ ತುಮಕೂರು ಪೊಲೀಸ್‌ ವರಿಷ್ಟಾಧಕಾರಿ ರಾಹುಲ್‌ ಕುಮಾರ್‌ ಶಹಪೂರ್‌ ವಾಡ್‌,  ಇತ್ತೀಚ್ಛೆಗೆ ಪಿಎಫ್ಐ ಮುಖಂಡರ ಮನೆ ಹಾಗೂ ಕಚೇರಿ ಮೇಲೆ ಎನ್ಐಎ ದಾಳಿಗೆ ಪ್ರತಿಯಾಗಿ  ಗಲಭೆ ಸೃಷ್ಟಿಗೆ ಪ್ರಯತ್ನ ನಡೆದಿತ್ತು. ಶಾಂತಿ ಸುವ್ಯವಸ್ಥೆಗೆ ಭಂಗ ತರುವ ದೃಷ್ಟಿಯಿಂದ ಸಂಘಟಿತರಾಗುತ್ತಿದ್ದರು,   ಜನರನ್ನು ಎತ್ತಿ ಕಟ್ಟುವ ಅನ್ನುವ ಕಾರಣದಿಂದ, ಪಿಎಫ್ಐ ರಿಹಾನ್ ಖಾನ್ ಅವರನ್ನು  ಬೆಳಗ್ಗೆ ಬಂಧಿಸಿದ್ದೇವೆ.

ಎಸ್‌ಡಿಪಿಐ ಸಂಘಟನಾ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹಾಸನದಲ್ಲಿ ಬಂಧನ

ಸಿಆರ್ಪಿಸಿ 107, 151 ಅಡಿಯಲ್ಲಿ ತಹಶೀಲ್ದಾರ್ ಎದುರು  ಹಾಜರು ಪಡಿಸಿದಾಗ, ಒಂದು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂಬ ಕಾರಣದಿಂದ ನಾವು  ಒಬ್ಬರನ್ನು ಬಂಧಿಸಿದ್ದೇವೆ. ಇನ್ನು ಬೇರೆ ಡಿಟೈಲ್ಸ್ ತೆಗೆದುಕೊಳ್ಳುತ್ತಿದ್ದೇವೆ. ಮೊಬೈಲ್, ಕಂಪ್ಯೂಟರ್ ವಶಕ್ಕೆ ಪಡೆದಿಲ್ಲ ಎಂದು  ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios