Gadag: PFI ನಲ್ಲಿ ಆ್ಯಕ್ಟಿವ್ ಇದ್ದ 25 ಜನರ ಪೈಕಿ ಕೆಲವ್ರು ಅರೆಸ್ಟ್ ಆಗ್ತಿದ್ದಂತೆ ಉಳಿದವರಿಗೆ ಢವಢವ..!

ಪಿಎಫ್ ಐ ಸಂಘಟನೆಯಲ್ಲಿ ಆ್ಯಕ್ಟಿವ್ ಇದ್ದ ಇಬ್ಬರು ಯುವಕರನ್ನ ಗದಗ ಶಹರ ಪೊಲೀಸರು ಬಂಧಿಸಿದ್ದಾರೆ. ಗದಗನ ರಹೆಮತ್ ನಗರದ ರುಸ್ತುಂ ಗೌಂಡಿ, ಕಾಗದಗಾರ್ ಬಡಾವಣೆಯ ಸರ್ಫರಾಜ್ ದಂಡೀನ್ ಬಂಧಿಸಲಾಗಿದ್ರೆ. ಬೆಟಗೇರಿಯ ಸನಾಉಲ್ಲಾ ಶಲವಡಿ  ಎಂಬುವವರನ್ನ ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿದ್ದಾರೆ.

PFI workers in police custody in Gadag rav

ಗದಗ (ಸೆ.27) : ಪಿಎಫ್ ಐ ಸಂಘಟನೆಯಲ್ಲಿ ಆ್ಯಕ್ಟಿವ್ ಇದ್ದ ಇಬ್ಬರು ಯುವಕರನ್ನ ಗದಗ ಶಹರ ಪೊಲೀಸರು ಬಂಧಿಸಿದ್ದಾರೆ. ಗದಗನ ರಹೆಮತ್ ನಗರದ ರುಸ್ತುಂ ಗೌಂಡಿ, ಕಾಗದಗಾರ್ ಬಡಾವಣೆಯ ಸರ್ಫರಾಜ್ ದಂಡೀನ್ ಬಂಧಿಸಲಾಗಿದ್ರೆ. ಬೆಟಗೇರಿಯ ಸನಾಉಲ್ಲಾ ಶಲವಡಿ  ಎಂಬುವವರನ್ನ ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿದ್ದಾರೆ. ಸರ್ಫರಾಜ್ ಮೆಕ್ಯಾನಿಕ್ ಕಾರ್ಮಿಕ(Mechanic worker)ರಾಗಿದ್ದು, ರುಸ್ತುಂ ಪ್ಲಂಬರ್ ಕೆಲಸ ಮಾಡಿಕೊಂಡಿದ್ದವರು. ಅಲ್ಲದೇ, ಪಿಎಫ್ಐ(PFI) ಸಂಘಟನೆ ಜೊತೆ ಗುರುತಿಸಿಕೊಂಡಿದ್ದು, ಜಿಲ್ಲೆಯಾದ್ಯಂತ ಸಂಘಟನೆ ಕಾರ್ಯದಲ್ಲಿ ತೊಡಗಿಕೊಂಡವರು ಎನ್ನಲಾಗಿದೆ.

ರಾತ್ರೋರಾತ್ರಿ ರಾಜ್ಯ ಪೊಲೀಸರ ಮೆಗಾ ಆಪರೇಷನ್, PFI ಗೆ ಮತ್ತೊಂದು ಶಾಕ್!

ಸೆಪ್ಟೆಂಬರ್ 22 ರಂದು ರಾಷ್ಟ್ರಿಯ ತನಿಖಾದಳ(NIA) ದೇಶಾದ್ಯಂತ ಪಿಎಫ್ಐ ಸಂಘಟನೆ ಕಾರ್ಯಕರ್ತರ ಮನೆ ಕಚೇರಿ ಮೇಲೆ ದಾಳಿ ನಡೆಸಿ ತನಿಖೆ ನಡೆಸಿತ್ತು. ದಾಳಿಯನ್ನ ಖಂಡಿಸಿ ಹುಬ್ಬಳ್ಳಿ ಕೌಲ್ ಬಜಾರ್ ಪೊಲೀಸ್ ಸ್ಟೇಷನ್(Hubli Kaul Bazar Police Station) ವ್ಯಾಪ್ತಿಯಲ್ಲಿ ಧರಣಿ ನಡೆದಿತ್ತು. ಧರಣಿಗೆ ಗದಗ(Gadag)ನಿಂದ ಜನರನ್ನಕರೆದುಕೊಂಡು ಹೋಗೋದಲ್ದೆ, ಜನರನ್ನ ಸಂಪರ್ಕಿಸುವ ಕೆಲಸವನ್ನ ಮೂವರು ಆರೋಪಿಗಳು ಮಾಡಿದ್ರು. ಸಂಘಟನೆ ವಿಷಯಗಳನ್ನ ಜನರಿಗೆ ತಲುಪಿಸುವ ಕೆಲಸ ಮಾಡಿದ್ದ ಮೂವರು ಸದಸ್ಯರನ್ನು ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ.

ಬೆಳ್ಳಂಬೆಳಗ್ಗೆ ವಶಕ್ಕೆ ಪಡೆದ ಪೊಲೀಸರು:

ರಾತ್ರಿಯಿಂದ ಕಾರ್ಯಾಚಾರಣೆ ನಡೆಸಿದ ಪೊಲೀಸರು ಬೆಳ್ಳಂಬೆಳಗ್ಗೆ ಸರ್ಫರಾಜ್, ರುಸ್ತುಂ, ಸನಾಉಲ್ಲಾ  ವಶಕ್ಕೆ ಪಡೆದಿದ್ದಾರೆ.. ಮನೆಯಲ್ಲಿ ಮಲಗಿಕೊಂಡಿದ್ದ ಸರ್ಫರಾಜ್ ನನ್ನ ಆಚೆ ಕರೆಸಿಕೊಂಡು ವಶಕ್ಕೆ ಪಡೆದ ಬಗ್ಗೆ ಕುಟುಂಬಗಳು ಮಾಹಿತಿ ನೀಡಿವೆ.

'ನಮ್ಮ ಮಗ ಮೆಕ್ಯಾನಿಕ್, ಪಿಎಫ್ಐ ಸಂಘಟನೆಯಲ್ಲಿ ಇಲ್ಲ'

ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಸರ್ಫರಾಜ್ ತಂದೆ ಅಬ್ದುಲ್ ವಹಾಬ್, ಬೆಳಗ್ಗೆ ಮನೆಯಲ್ಲಿದ್ದ 7 ಗಂಟೆ ಸುಮಾರಿಗೆ ಕ್ರಿಕೆಟ್ ಆಡೋದಕ್ಕೆ ಹೊರಗೆ ಹೋಗಿದ್ದ ಅದ್ಕೊಂಡಿದ್ವಿ. ಆದ್ರೆ ಮಾಧ್ಯಮದವರಿಂದಲೇ ಅರೆಸ್ಟ್ ಆಗಿರೋ ಬಗ್ಗೆ ಮಾಹಿತಿ ಗೊತ್ತಾಗಿದೆ.  ನಮ್ಮ ಮಗ ಸಂಘಟನೆಯಲ್ಲಿ ಇಲ್ಲ ಅಂತಾ ಹೇಳಿಕೊಂಡಿದ್ದಾರೆ. ಸಮಾಜಘಾತುಕ ಕೆಲಸದಲ್ಲಿ ನಮ್ಮ ಮಕ್ಕಳು ಭಾಗಿಯಾಗಿಲ್ಲ, ಆದ್ರೂ ಬಂಧನವಾಗಿರೋದು ಆಘಾತ ನೀಡಿದೆ ಅಂತಾರೆ ಸರ್ಫರಾಜ್ ತಂದೆ..  

25ಕ್ಕೂ ಹೆಚ್ಚು ಯುವಕರ ಮೇಲೆ ಪೊಲೀಸರ ಹದ್ದಿನ ಕಣ್ಣು;

ಹುಬ್ಬಳ್ಳಿಯಿಂದ ಆಪರೇಟ್ ಆಗ್ತಿರೋ ಸಂಘಟನೆಯನ್ನ ಗದಗನಲ್ಲಿ ಬಲಗೊಳಿಸಲು 25 ಕ್ಕೂ ಹೆಚ್ಚು ಯುವಕರು ಬಳಕೆಯಾಗ್ತಿದ್ದಾರೆ. ಅದ್ರಲ್ಲಿ ಪ್ರಮುಖವಾಗಿ ಮೂವರನ್ನ ವಶಕ್ಕೆ ಪಡೆದು ತೀವ್ರ ತನಿಖೆ ನಡೆಸಲಾಗ್ತಿದೆ.

ಸಿಎಎ(CAA) ಎನ್ ಆರ್ ಸಿ(NRC) ವಿರುದ್ಧದ ಧರಣಿಯಲ್ಲೂ ಇದ್ದ ಯುವಕರು:

ಎರಡು ವರ್ಷದ ಹಿಂದೆ ಸಿಎಎ ಎನ್ ಆರ್ ಸಿ ವಿರೋಧಿಸಿ ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆ, ಗದಗ ಮೂಲದ ಹುಡುಗ್ರನ್ನ ಕರೆದುಕೊಂಡು ಹೋಗಲಾಗಿತ್ತು.. ಆಗಿನಿಂದಲೂ ಈಗಿನವರೆಗೆ ಸಂಘಟನೆಯ ಯುವಕರ ಮೇಲೆ ಕಣ್ಣಿರಿಸಲಾಗಿತ್ತು.

ಎನ್‌ಐಎ ದಾಳಿಯೇ ಮುನ್ನುಡಿ, ಪಿಎಫ್‌ಐಗೆ ಶೀಘ್ರ ಕೇಂದ್ರ ನಿಷೇಧ?

ಇಬ್ಬರು ನ್ಯಾಯಾಂಗ ವಶಕ್ಕೆ, ಒಬ್ಬನ ವಿಚಾರಣೆ:

ಅನುಮಾನಾಸ್ಪದ ಚಟುವಟಿಯಲ್ಲಿ ಭಾಗಿಯಾಗಿದ್ದ ಸರ್ಫರಾಜ್, ರುಸ್ತು ಅವರನ್ನ ಏಳು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಚಾರಣೆ ನಡೆಸಿ ತಾಲೂಕು‌ ದಂಡಾಧಿಕಾರಿಗಳು ಕಿಶನ್ ಕಲಾಲ್ ಆದೇಶ ಹೊರಡಿಸಿದ್ದಾರೆ. ಸನಾಉಲ್ಲಾ ಎಂಬಾತನ ವಿಚಾರಣೆ ಮುಂದುವರೆದಿದೆ.. ಗದಗ, ನರಗುಂದಲ್ಲಿ ಆ್ಯಕ್ಟಿವ್ ಆಗಿರೋ ಸಂಘಟನೆಯ ಯುವಕರ ವಿಚಾರಣೆ ನಡೀತಿದೆ. ಅಮಾಯಕರನ್ನ ವಶಕ್ಕೆ ಪಡೆಯಲಾಗಿದೆ ಅಂತಾ ಪೋಷಕರು ಅಳಲು ತೋಡಿಕೊಂಡಿದ್ದಾರೆ. ಯುವಕರು ಸಂಘಟನೆ ಅಷ್ಟೇ ಮಾಡಿದ್ರಾ, ಗಲಾಟೆಯಲ್ಲಿ ಏನಾದ್ರೂ ಭಾಗಿಯಾಗಿದ್ರಾ ಅನ್ನೋ ಬಗ್ಗೆ ಸಮಗ್ರ ತನಿಖೆಯಾದ ನಂತರ ಸತ್ಯಾಸತ್ಯತೆ ಬಹಿರಂಗವಾಗಲಿದೆ.

Latest Videos
Follow Us:
Download App:
  • android
  • ios