Asianet Suvarna News Asianet Suvarna News

ಲಾರಿಗೆ ಬೈಕ್‌ ಡಿಕ್ಕಿ: ಇಬ್ಬರು ಸೇರಿ 156ಕ್ಕೂ ಹೆಚ್ಚು ಮೇಕೆಗಳ ಸಾವು

ಬೈಕ್‌ಗೆ ಡಿಕ್ಕಿ ಹೊಡೆದ ಕುರಿ ತುಂಬಿದ್ದ ಲಾರಿ| ಇಬ್ಬರು ಸೇರಿ 156ಕ್ಕೂ ಹೆಚ್ಚು ಮೇಕೆಗಳ ಸಾವು| ಹೊಸಹಳ್ಳಿಯ ಹೊರಹೊಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದ ಘಟನೆ| ಲಾರಿಯಲ್ಲಿದ್ದ 10 ಜನರಿಗೆ ಗಾಯ|

Truck, Bike Accident Near Kudligi in Ballari District
Author
Bengaluru, First Published Jan 4, 2020, 8:36 AM IST
  • Facebook
  • Twitter
  • Whatsapp

ಕೂಡ್ಲಿಗಿ(ಜ.04): ಕುರಿ, ಮೇಕೆ ತುಂಬಿಕೊಂಡು ಹೋಗುತ್ತಿದ್ದ ಲಾರಿ ಹಾಗೂ ಬೈಕ್‌ಗೆ ಡಿಕ್ಕಿ ಹೊಡೆದ ಪರಿ​ಣಾ​ಮ ಪಾದಚಾರಿ ಹಾಗೂ ಲಾರಿ​ಯಲ್ಲಿದ್ದ ಒಬ್ಬ ಯುವಕ ಸೇರಿದಂತೆ 156 ಕ್ಕೂ ಹೆಚ್ಚು ಕುರಿ ಮೃತ​ಪಟ್ಟ ಘಟನೆ ತಾಲೂಕಿನ ಹೊಸಹಳ್ಳಿಯ ಹೊರಹೊಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಶುಕ್ರವಾರ ಮಧ್ಯಾಹ್ನ ಸಂಭ​ವಿ​ಸಿ​ದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಲಾರಿಯಲ್ಲಿದ್ದ 10 ಜನರಿಗೆ ಗಾಯಗಳಾಗಿದ್ದು, ಬೈಕ್‌ ಸವಾರರಾದ ನಾಗರಾಜ್‌ ಹಾಗೂ ಮೂಗೇಶ್‌ ಗಂಭೀರವಾಗಿ ಗಾಯ​ಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೊಪ್ಪಳ ಜಿಲ್ಲೆಯ ಕೂಕಲಪಲ್ಲಿಯಿಂದ ಶುಕ್ರವಾರ ಕುರಿ ಸಂತೆಯಿಂದ ತಮಿಳುನಾಡಿನ ಮೂಲದ ಲಾರಿ ಸುಮಾರು 500ಕ್ಕೂ ಹೆಚ್ಚು ಕುರಿ, ಮೇಕೆಗಳನ್ನು ತುಂಬಿಕೊಂಡು ತಮಿಳುನಾಡಿಗೆ ಹೋಗುತ್ತಿರುವಾಗ ತಾಲೂಕಿನ ಹೊಸಹಳ್ಳಿ ಸಮೀಪ, ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕಾಏಕಿ ಬೈಕ್‌ ಸವಾರರಿಬ್ಬರು ಲಾರಿಗೆ ಅಡ್ಡ ಬಂದಿದ್ದಾರೆ. ಆಗ ಅವರನ್ನು ತಪ್ಪಿಸಲು ಯತ್ನಿ​ಸಿದ ಲಾರಿ ಚಾಲಕ ಮತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆದು, ನಂತರ ಹೆದ್ದಾರಿ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದ ಪ​ರಿ​ಣಾಮ ಲಾರಿ ಪಲ್ಟಿಯಾಗಿದೆ. ಪಾದಾಚಾರಿ ಕರ್ನಾರ ಹಟ್ಟಿ ಬೋರಣ್ಣ (58) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತ​ಪ​ಟ್ಟಿ​ದ್ದಾನೆ. ಇನ್ನು ತಮಿಳುನಾಡು ಮೂಲದ ರಮೇಶ(32) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ. 

ಸತ್ತ ಕುರಿ ಖರೀದಿಗೆ ನೂಕುನುಗ್ಗಲು:

ಅಪಘಾತದಲ್ಲಿ ಸತ್ತ ಕುರಿ, ಮೇಕೆಗಳನ್ನು ಟ್ರ್ಯಾಕ್ಟರ್‌ನಲ್ಲಿ ಪೊಲೀಸ್‌ ಠಾಣೆಯ ಮುಂದೆ ತಂದಿದ್ದು, ಮಾಲೀಕರು ಕಡಿಮೆ ಬೆಲೆಗೆ 300 ರಿಂದ 500ಕ್ಕೆ ಕೊಡುತ್ತಾರೆ ಎನ್ನುವ ಸುದ್ದಿ ಕೇಳುತ್ತಲೇ ಪೊಲೀಸ್‌ ಠಾಣೆಯ ಮುಂದೆ ಸಾವಿರಾರು ಜನರು ಬಂದು ಕಡಿಮೆ ಬೆಲೆಗೆ ಕುರಿ, ಮೇಕೆ ತೆಗೆದುಕೊಂಡು ಹೋಗುವುದಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸಲು ಪೋಲೀಸರು ಹರಸಾಹಸ ಪಟ್ಟರು.
 

Follow Us:
Download App:
  • android
  • ios