ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ತ್ರಿಶೂಲ ದೀಕ್ಷಾ ಕಾರ್ಯಕ್ರಮ: ಗಂಗಾಧರ ಕುಲಕರ್ಣಿ

ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ತ್ರಿಶೂಲ ದೀಕ್ಷಾ ಕಾರ್ಯಕ್ರಮ ಆಯೋಜನೆ ಮಾಡಲು ಶ್ರೀರಾಮ ಸೇನೆ ನಿರ್ಧಾರ ಕೈಗೊಂಡಿದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದರು. 

Trishul Deeksha program to boost self confidence among women Says Gangadhar Kulakarni gvd

ವರದಿ: ಪರಮೇಶ್ವರ ಅಂಗಡಿ, ಏಷ್ಯನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ (ಜೂ.06): ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ತ್ರಿಶೂಲ ದೀಕ್ಷಾ ಕಾರ್ಯಕ್ರಮ ಆಯೋಜನೆ ಮಾಡಲು ಶ್ರೀರಾಮ ಸೇನೆ ನಿರ್ಧಾರ ಕೈಗೊಂಡಿದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದರು. ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು  ಇದೇ ರವಿವಾರ 50 ಮಹಿಳೆಯರಿಗೆ ತ್ರಿಶೂಲ ದೀಕ್ಷಾ ನೀಡಲಾಗುವುದು ಪೂಜ್ಯರಾದ ಬಿಳಗಿ ಮಠದ ವಚನಶ್ರೀ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಸಚಿನ್ನ ಕುಲಕರ್ಣಿ ಕಾನೂನು ಸಲಹೆ ನೀಡಲಿದ್ದಾರೆ ಎಂದರು.

ಶ್ರೀರಾಮ ಸೇನೆಯ ಆರಂಭಿಸಿರುವ ಸಹಾಯವಾಣಿ ಸದ್ದುಪಯೋ ಪಡೆಯಬೇಕು ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗಾಗಿ ಎಲ್ಲಾ ರೀತಿಯಲ್ಲೂ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು ಈಗೀನ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಿಂದೂ ಹೆಣ್ಮಕ್ಕಳಿಗೆ ರಕ್ಷಣೆ ನೀಡುತ್ತಿಲ್ಲ ಈ ಕುರಿತು ಗಂಭೀರವಾಗಿ ಪರಿಗಣಿಸಬೇಕು ಇಲ್ಲವೇ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಚ್ಚರಿಕೆ ನೀಡಿದರು. ಶ್ರಿರಾಮ ಸೇನಾ ಕಳೆದ ತಿಂಗಳು ಹೆಲ್ಪಲೈನ್ ನನ್ನ ತರೆಯಲಾಗಿತ್ತು ಹೆಲ್ಪಲೈನ್ ನಂಬರ 9090443444 ಇದರಿಂದ ಸುಮಾರು ರಾಜ್ಯದ ಮೂಲೆ ಮೂಲೆಯಿಂದಲೂ 600 ಕರೆಗಳು ಬಂದಿವೆ.

ಅದರಲ್ಲೂ 400 ಕ್ಕೂ ಹೆಚ್ಷು ಮಹಿಳೆಯರು ಕರೆ ಮಾಡಿದ್ದಾರೆ ಪ್ರಮುಖವಾಗಿ 100 ಲವ್ ಜಿಹಾದ್ ಕೇಸ್ ಗಳ ಬಗ್ಗೆ ಕರೆ ಬಂದಿವೆ..ನಾವು ಅದರಲ್ಲಿ 12 ಪ್ರಕಣಗಳನ್ನ ಇತ್ಯರ್ಥ ಮಾಡಿದ್ದೆವೆ.ಶ್ರಿರಾಮ ಸೇನೆ ಹಿಂದೂ ಮಹಿಳೆಯರ ಪರವಾಗಿ ರಕ್ಷಣೆ ಮಾಡುವ ಕೆಲಸವನ್ನ ಮಾಡುತ್ತಿದೆ ಇದಕ್ಕೆ ರಾಜ್ಯದಿಂದ ಉತ್ತಮವಾರ ರಿಸ್ಪಾನ್ಸ್ ಸಿಗ್ತಾ ಇದೆ ಎಂದು ಗಂಗಾಧರ ಕುಲಕರ್ಣಿ ಅವರು ಹೇಳಿದರು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಹ ಬಹಳಷ್ಟು ಲೋಪಗಳು ಆಗುತ್ತಿದೆ ಮತಾಂತರ ಪ್ರಕ್ರಿಯೆ ಸದ್ದಿಲ್ಲದೇ ಸಾಗುತ್ತಿದ್ದು ಈ ಕುರಿತು ಶ್ರೀ ರಾಮ ಸೇನೆ ಧ್ವನಿ ಎತ್ತುವ ಕೆಲಸ ಮಾಡಲಿದೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದವರನ್ನು ಪಾಕಿಸ್ತಾನಕ್ಕೆ ಕಳುಹಿಸುವ ಕೆಲಸ ಆಗಬೇಕು.

ತನ್ನ ಪ್ರಮಾದದಿಂದ ಲೋಕಸಭೆಯಲ್ಲಿ 6 ಕಡೆ ಸೋತ ಬಿಜೆಪಿ?: ಬಿ.ವೈ.ವಿಜಯೇಂದ್ರ ಹೇಳಿದ್ದೇನು?

ಯಾರು ಘೋಷಣೆ ಕೂಗುತ್ತಾರೋ ಅಂತವರ ಮನೆಗಳಿಗೆ ಮೇಲೆ ದಾಳಿ ಮಾಡಿ, ಬೆಂಕಿ ಹಚ್ಚುವ ಕೆಲಸ ಶ್ರೀರಾಮ ಸೇನೆ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು. ಕಾಂಗ್ರೇಸ್ ಪಕ್ಷಕ್ಕೆ ಗಂಡಸ್ಥನ ಇದ್ದರೆ ದುಷ್ಟ ಶಕ್ತಿಗಳ ವಿರುದ್ದ ಕ್ರಮ ಕೈಗೊಳ್ಳಲಿ ಎಂದು ಸವಾಲ್ ಹಾಕಿದರು ಇನ್ನು ತ್ರಿಶೂಲ ದೀಕ್ಷಾ ಮಾಡಲು ಕಾಳಿಯ ಆರಾಧನೆ ಅವಳ ಶಕ್ತಿ ಮಹಿಳೆಯರಲ್ಲಿ ಬರಲಿ ಎಂಬುವುದಕ್ಕೆ ತ್ರಿಶೂಲ ದೀಕ್ಷಾ ನೀಡಲಾಗುತ್ತಿದೆ ಎಂದರು. ಸುದ್ದಿಗೋಷ್ಢಿಯಲ್ಲಿ  ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಟಕರ, ಧಾರವಾಡ ಗ್ರಾಮೀಣ ಅಧ್ಯಕ್ಷ ಮೈಲಾರ ಗುಡ್ಡಪ್ಪನರ, ಹುಬ್ಬಳ್ಳಿ ನಗರ ಉಪಾಧ್ಯಕ್ಷ ಗುಣಧರ ದಡೌತಿ, ಪುಟ್ಟು ಜೋಶಿ ಸೇರಿದಂತೆ ಹಲವರು ಇದ್ದರು.

Latest Videos
Follow Us:
Download App:
  • android
  • ios