Asianet Suvarna News Asianet Suvarna News

ತನ್ನ ಪ್ರಮಾದದಿಂದ ಲೋಕಸಭೆಯಲ್ಲಿ 6 ಕಡೆ ಸೋತ ಬಿಜೆಪಿ?: ಬಿ.ವೈ.ವಿಜಯೇಂದ್ರ ಹೇಳಿದ್ದೇನು?

ಗೆಲ್ಲಬಹುದಾಗಿದ್ದ ಆರು ಕ್ಷೇತ್ರಗಳನ್ನು ತನ್ನದೇ ಪ್ರಮಾದಗಳಿಂದ ಕಳೆದುಕೊಳ್ಳುವಂತಾಯಿತು ಎಂಬ ಚರ್ಚೆ ಬಿಜೆಪಿಯದಲ್ಲಿ ಕೇಳಿಬರುತ್ತಿದೆ. ಬೀದರ್, ರಾಯಚೂರು, ಚಿಕ್ಕೋಡಿ, ಕೊಪ್ಪಳ, ದಾವಣಗೆರೆ ಹಾಗೂ ಗುಲ್ಬರ್ಗಾ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಗೆಲ್ಲುವ ಸಾಮರ್ಥ್ಯ ಇದ್ದರೂ ಕಳೆದುಕೊಂಡೆವು. ಪರಿಣಾಮ ನಮ್ಮ ಸಂಖ್ಯಾಬಲ ಇಳಿಕೆಯಾಯಿತು. 

BJP lost 6 seats in the Lok Sabha due to its mistake What did BY Vijayendra say gvd
Author
First Published Jun 6, 2024, 12:37 PM IST

ಬೆಂಗಳೂರು (ಜೂ.06): ಗೆಲ್ಲಬಹುದಾಗಿದ್ದ ಆರು ಕ್ಷೇತ್ರಗಳನ್ನು ತನ್ನದೇ ಪ್ರಮಾದಗಳಿಂದ ಕಳೆದುಕೊಳ್ಳುವಂತಾಯಿತು ಎಂಬ ಚರ್ಚೆ ಬಿಜೆಪಿಯದಲ್ಲಿ ಕೇಳಿಬರುತ್ತಿದೆ. ಬೀದರ್, ರಾಯಚೂರು, ಚಿಕ್ಕೋಡಿ, ಕೊಪ್ಪಳ, ದಾವಣಗೆರೆ ಹಾಗೂ ಗುಲ್ಬರ್ಗಾ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಗೆಲ್ಲುವ ಸಾಮರ್ಥ್ಯ ಇದ್ದರೂ ಕಳೆದುಕೊಂಡೆವು. ಪರಿಣಾಮ ನಮ್ಮ ಸಂಖ್ಯಾಬಲ ಇಳಿಕೆಯಾಯಿತು. ಕನಿಷ್ಠ 22ರಿಂದ 23 ಸ್ಥಾನಗಳಾದರೂ ಗಳಿಸಬಹುದಾಗಿತ್ತು ಎಂದು ಬಿಜೆಪಿಯ ಮೂಲಗಳು ತಿಳಿಸಿವೆ. ಚುನಾವಣಾ ಫಲಿತಾಂಶದ ಬೆನ್ನಲ್ಲೇ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬುಧವಾರ ಆಪ್ತರೊಂದಿಗೆ ಅವಲೋಕನ ಸಭೆ ನಡೆಸಿದರು ಎನ್ನಲಾಗಿದೆ.

ಪ್ರಸಕ್ತ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ಗೆ ಅಧಿಕಾರ, ಪ್ರಬಲ ನಾಯಕತ್ವ ಹಾಗೂ ಎಲ್ಲ ಸಂಪನ್ಮೂಲ ಇರುವಾ ಗಲೂ ಬಿಜೆಪಿ 17 ಸ್ಥಾನಗಳನ್ನು ಪಡೆದಿದೆ. ಜೆಡಿಎಸ್ ಸೇರಿದರೆ ಒಟ್ಟು 19 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಇದು ಸಣ್ಣ ಸಂಗತಿಯಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ಚಿಕ್ಕೋಡಿ ಸಂಸದರಾಗಿದ್ದ ಅಣ್ಣಾ ಸಾಹೇಬ್ ಜೊಲ್ಲೆ, ಬೀದ‌ ಸಂಸದರಾಗಿದ್ದ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ರಾಯಚೂರಿನ ಸಂಸದರಾಗಿದ್ದ ಅಮರೇಶ್ ನಾಯಕ್ ಅವರಿಗೆ ಈ ಬಾರಿ ಟಿಕೆಟ್ ನೀಡಿದರೆ ಗೆಲ್ಲುವುದು ಕಷ್ಟ ಎಂಬ ಅಭಿಪ್ರಾಯ ಆಂತರಿಕ ಸಮೀಕ್ಷೆಯಲ್ಲಿ ವ್ಯಕ್ತವಾಗಿತ್ತು. 

ಮೋದಿ ಹೊಸ ಸಂಪುಟದಲ್ಲಿ ರಾಜ್ಯದ ಯಾರಿಗೆ ಸಚಿವಗಿರಿ?: ಎಚ್‌ಡಿಕೆಗೆ ಮಂತ್ರಿ ಸ್ಥಾನ?

ಕಾರ್ಯಕರ್ತರ ವಿರೋ ಧವೂ ಇತ್ತು. ಹೀಗಾಗಿಯೇ ಅವರಿಗೆ ಟಿಕೆಟ್ ಬೇಡ ಎಂಬ ಅಭಿಪ್ರಾಯವನ್ನು ರಾಜ್ಯ ನಾಯಕರು ವರಿಷ್ಠರಿಗೆ ಹೇಳಿದರೂ ಪ್ರಯೋಜನವಾಗಲಿಲ್ಲ. ಪರಿಣಾಮ ಸೋಲು ಅನುಭವಿಸಬೇಕಾಯಿತು ಎನ್ನಲಾಗಿದೆ. ಇನ್ನು ಕೊಪ್ಪಳದಲ್ಲಿ ಹಿಂದಿನ ಸೋಲಿನಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಅವರ ಪರ ಅನುಕಂಪದ ಅಲೆ ಇತ್ತು. ಹಾಲಿ ಸಂಸದ ಕರಡಿ ಸಂಗಣ್ಣ ಬದಲಿಗೆ ಡಾ.ಬಸವರಾಜ ಕ್ಯಾವಟ‌ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದರಿಂದ ಕಾಂಗ್ರೆಸ್ ಅಲ್ಪ ಅಂತರದಿಂದ ಗೆದ್ದಿತು. ಕರಡಿ ಸಂಗಣ್ಣ ಅವರನ್ನೇ ಮುಂದುವರಿಸಿದ್ದರೆ ಬಿಜೆಪಿ ಗೆಲುವು ಸಾಧ್ಯವಾಗುತ್ತಿತ್ತು ಎಂಬ ಅಭಿಪ್ರಾಯ ಹೊರಬಿದ್ದಿದೆ. ದಾವಣಗೆರೆಯಲ್ಲಿ ಅತಿ ಕಡಿಮೆ ಅಂತರದಲ್ಲಿ ಬಿಜೆಪಿ ಸೋತಿದೆ. 

ರೇಪ್ ಕೇಸ್: ಪ್ರಜ್ವಲ್ ರೇವಣ್ಣಗೆ ಪುರುಷತ್ವ ಪರೀಕ್ಷೆ ನಡೆಸಿದ ವೈದ್ಯರು

ಪಕ್ಷದ ಮಾಜಿ ರೇಣುಕಾಚಾರ್ಯ, ಎಸ್.ಎ.ರವೀಂದ್ರನಾಥ್ ಅವರು ಬಹಿರಂಗವಾಗಿಯೇ ಅಧಿಕೃತ ಅಭ್ಯರ್ಥಿ ವಿರುದ್ಧ ಅಸಮಾಧಾನ ಹೊರಹಾಕಿದರು.ಚನ್ನಗಿರಿಯ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಅವರೂ ಕೆಲಸ ಮಾಡಲಿಲ್ಲ ಎಂಬ ಮಾತು ಕೇಳಿಬಂದಿದೆ. ಗುಲ್ಬರ್ಗಾದ ಸಂಸದರಾಗಿದ್ದ ಡಾ.ಉಮೇಶ್ ಜಾಧವ್ ಅವರು ಮತದಾನದ ಒಂದು ವಾರ ಮುನ್ನವಷ್ಟೇ ಪ್ರಚಾರ ಆರಂಭಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಮೊದಲ ಚುನಾವಣಾ ರಾಲಿ ಆ ಕ್ಷೇತ್ರದಿಂದಲೇ ಆರಂಭಿಸಿದರೂ ಜಾಧವ್‌ ಈ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಮೇಲಾಗಿ ಜನರಿಗೆ ಸುಲಭವಾಗಿ ಸಿಗುವವರಲ್ಲ, ಮತದಾರರ ಸಂಪರ್ಕವಿಲ್ಲ ಎಂಬ ಟೀಕೆಗಳು ಅವರ ಮೇಲಿತ್ತು ಎನ್ನಲಾಗಿದೆ.

Latest Videos
Follow Us:
Download App:
  • android
  • ios