ದಸರಾ ಆಹಾರ ಮೇಳದಲ್ಲಿ ಏಡಿ ಸಾರು, ಬಿದಿರು ಕಳ್ಳೆ ಪಲ್ಯ..!

ಮೈಸೂರು ದಸರಾ ಪ್ರಯುಕ್ತ ಆಯೋಜಿಸಲಾಗುವ ಆಹಾರ ಮೇಳದಲ್ಲಿ ಬಹಳಷ್ಟು ವಿಧದ ಬುಡಕಟ್ಟು ಜನಾಂಗದ ಖಾದ್ಯಗಳನ್ನು ತಯಾರಿಸಲು ನಿರ್ಧರಿಸಲಾಗಿದೆ. ವಿಶೇಷವಾಗಿ ಮೇಳದಲ್ಲಿ ಏಡಿ ಸಾರು, ಬಂಬೂ ಬಿರಿಯಾನಿ, ಬಿದಿರು ಅಕ್ಕಿಯ ಪಾಯಸ ಸೇರಿ ಇತರ ಖಾದ್ಯಗಳನ್ನು ಪ್ರವಾಸಿಗರು ಸವಿಯಬಹುದು.

Tribal Traditional Recipes in dasara Food mela at Mysore

ಮೈಸೂರು(ಸೆ.27): ದಸರಾ ಮಹೋತ್ಸವ ಅಂಗವಾಗಿ ನಗರದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಆಯೋಜಿಸುವ ಆಹಾರ ಮೇಳದಲ್ಲಿ ಆದಿವಾಸಿಗಳ ಪಾರಂಪರಿಕ ಬುಡಕಟ್ಟು ಆಹಾರ ಪದ್ಧತಿಯ ಪದಾರ್ಥಗಳ ಮಳಿಗೆಯನ್ನು ತೆರೆಯಲಾಗುವುದು ಎಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತಿನ ರಾಜ್ಯಾಧ್ಯಕ್ಷ ಎಂ. ಕೃಷ್ಣಯ್ಯ ಮಾಹಿತಿ ನೀಡಿದರು.

ಪ್ರತಿ ವರ್ಷ ದಸರಾ ಹಬ್ಬದ ಆಹಾರ ಮೇಳದಲ್ಲಿ ನಮ್ಮ ಬುಡಕಟ್ಟು ಆಹಾರ ಪದ್ಧತಿಯ ಗುಣ ಮಟ್ಟದ ಆಹಾರಗಳನ್ನು ಜನರಿಗೆ ನೀಡುತ್ತ ಬಂದಿದ್ದೇವೆ. ಈ ಸ್ಕೌಟ್ಸ್‌ ಗೈಡ್ಸ್‌ ಮೈದಾನದ ಆಲದ ಮರದ ಅಡಿ ಹಾಡಿ ಮನೆ ಊಟ ಎಂಬ ಹೆಸರಿನಲ್ಲಿ ಮಳಿಗೆ ತೆರೆದಿದ್ದು, ನಮ್ಮಲ್ಲಿ ಬಿದಿರಿನಿಂದ ಮಾಡಿದ ಬಂಬೂ ಬಿರಿಯಾನಿ, ಬಿದಿರು ಅಕ್ಕಿ ಪಾಯಸ, ಜೇನು ತುಪ್ಪ ಮಿಶ್ರಿತ ಕಾಡು ಗೆಣಸು, ಬಿದಿರು ಕಳ್ಳೆ ಪಲ್ಯ, ಮಾಕಳಿ ಬೇರಿನ ಟೀ, ಕಾಡು ಬಾಳೆಹಣ್ಣು, ಏಡಿ ಸಾರು, ರಾಗಿಮುದ್ದೆ ಮುಂತಾದ ವಿವಿಧ ಬಗೆಯ ರುಚಿಕರ ಆಹಾರವನ್ನು ತಯಾರಿಸಲಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವವಿಖ್ಯಾತ ಮೈಸೂರು ದಸರಾ ಹೊಸ್ತಿಲಲ್ಲಿ KS ಭಗವಾನ್ ಹೊಸ ವಿವಾದ

ಯಾವ್ಯಾವ ಆಹಾರಕ್ಕೆ ಎಷ್ಟೆಷ್ಟು..?

ಬಂಬೂ ಬಿರಿಯಾನಿ 100, ಬಿದಿರು ಅಕ್ಕಿಯ ಪಾಯಸ, 50, ಕಾಡು ಗೆಣಸು ಜೇನು ತುಪ್ಪ ಮಿಶ್ರಿತ 50, ಮುದ್ದೆ ಸಾಂಬಾರು 100 ನಿಗದಿ ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದು ರುಚಿಕರ ಆಹಾರವನ್ನು ಸವಿಯಬೇಕು ಎಂದು ಕೋರಿದರು.

ದಸರಾದಲ್ಲಿ ಬಾಡಿವೋರ್ನ್‌, 11 ಸಾವಿರಕ್ಕೂ ಹೆಚ್ಚು CCTV ಕಣ್ಗಾವಲು

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಕಾವೇರ, ರಾಜ್ಯ ಜಂಟಿ ಕಾರ್ಯದರ್ಶಿ ಸಾವಿತ್ರಮ್ಮ, ಅಡುಗೆ ತಯಾರಕ ಕುಮಾರ ಮತ್ತು ರಾಮು ಇದ್ದರು.

ಮೈಸೂರು: ಮಾವುತರಿಗೆ ಫ್ರೀ ಹೇರ್ ಸ್ಟೈಲ್..!

Latest Videos
Follow Us:
Download App:
  • android
  • ios