Asianet Suvarna News Asianet Suvarna News

ಮೈಸೂರು: ಮಾವುತರಿಗೆ ಫ್ರೀ ಹೇರ್ ಸ್ಟೈಲ್..!

ಹೇರ್ ಸ್ಟೈಲ್ ಮಾಡಿಸೋದು ಎಷ್ಟು ಕಾಸ್ಟ್ಲಿ ಅನ್ನೋದು ಎಲ್ಲ ಫ್ಯಾಷನ್ ಪ್ರಿಯರಿಗೂ ತಿಳಿದಿರುತ್ತದೆ. ಮೈಸೂರಿನಲ್ಲಿ ಹಲವು ರೀತಿಯ ಹೇರ್‌ಸ್ಟೈಲ್ ಮಾಡಿಕೊಡಲಾಗುತ್ತಿದೆ. ಅದೂ ಉಚಿತವಾಗಿ. ಯಾಕೆ, ಏನು, ಎಲ್ಲಿ ಅಂತ ತಿಳಿಯಲು ಈ ಸುದ್ದಿ ಓದಿ.

mahouts get free hair style in Mysore
Author
Bangalore, First Published Sep 25, 2019, 3:25 PM IST
  • Facebook
  • Twitter
  • Whatsapp

ಮೈಸೂರು(ಸೆ.25): ದಸರಾ ಗಜಪಡೆಯ ಮಾವುತರು, ಕಾವಾಡಿಗಳು ಮತ್ತು ಅವರ ಮಕ್ಕಳಿಗಾಗಿ ಸಿದ್ದಾರ್ಥನಗರ ಸವಿತಾ ಸಮಾಜದವರು ಉಚಿತ ಕೇಶಾಲಂಕಾರ ಕಾರ್ಯಕ್ರಮವನ್ನು ಮೈಸೂರು ಅರಮನೆ ಆನೆ ಬಿಡಾರದಲ್ಲಿ ಮಂಗಳವಾರ ಆಯೋಜಿಸಿದ್ದರು.

ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು, ಇದೊಂದು ಉತ್ತಮ ಕಾರ್ಯ. ದಸರಾ ಎಂದರೆ ಇಷ್ಟೆಲ್ಲ ಕಾರ್ಯಕ್ರಮ ಇರುತ್ತದೆಂದು ಗೊತ್ತಿರಲಿಲ್ಲ. ಇಂತಹ ಕಾರ್ಯಕ್ರಮಗಳು ಒಳ್ಳೆಯದು. ಸವಿತಾ ಸಮಾಜ ಒಳ್ಳೆಯ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು. ದಸರಾ ಆನೆ ಮಾವುತರು, ಕಾವಾಡಿಗಳು ಮತ್ತು ಅವರ ಮಕ್ಕಳು ವಿವಿಧ ವಿನ್ಯಾಸದ ಕೇಶಾಲಂಕಾರ ಮಾಡಿಸಿಕೊಂಡು ಖುಷಿ ಪಟ್ಟರು.

ವಿಶ್ವವಿಖ್ಯಾತ ಮೈಸೂರು ದಸರಾ ಹೊಸ್ತಿಲಲ್ಲಿ KS ಭಗವಾನ್ ಹೊಸ ವಿವಾದ

ಸಂಸದ ಪ್ರತಾಪ್‌ ಸಿಂಹ, ಸಿದ್ದಾರ್ಥನಗರ ಸವಿತಾ ಸಮಾಜ ಅಧ್ಯಕ್ಷ ಎಂ. ರಾಮು, ಗೌರವ ಅಧ್ಯಕ್ಷ ಮಹದೇವು, ಪ್ರಧಾನ ಕಾರ್ಯದರ್ಶಿ ಶ್ರೀಧರ, ಉಪಾಧ್ಯಕ್ಷರಾದ ಎಸ್‌. ಪ್ರಕಾಶ್‌, ಎನ್‌. ಶಿವರಾಜು, ಖಜಾಂಚಿ ಸೋಮಶೇಖರ್‌ ಮೊದಲಾದವರು ಇದ್ದರು.

ದಸರಾದಲ್ಲಿ ಬಾಡಿವೋರ್ನ್‌, 11 ಸಾವಿರಕ್ಕೂ ಹೆಚ್ಚು CCTV ಕಣ್ಗಾವಲು

Follow Us:
Download App:
  • android
  • ios