Asianet Suvarna News Asianet Suvarna News

ಎರಡೇ ತಾಸಲ್ಲಿ ಬೆಂಗಳೂರಿಂದ ಮೈಸೂರಿಗೆ ಹೋಗಿ..!

119 ಕಿ.ಮೀ. ಉದ್ದದ ಈ ಹೆದ್ದಾರಿಯಲ್ಲಿ ಈವರೆಗೆ ರಾಮನಗರ, ಚನ್ನಪಟ್ಟಣ, ಮದ್ದೂರು, ಶ್ರೀರಂಗಪಟ್ಟಣ ಬೈಪಾಸ್‌ ರಸ್ತೆ ಸಂಚಾರಕ್ಕೆ ಮುಕ್ತವಾಗಿತ್ತು. ಆದರೆ, ಮಂಡ್ಯ ಬೈಪಾಸ್‌ ರಸ್ತೆ ಕಾಮಗಾರಿ ಮಾತ್ರ ಬಾಕಿ ಉಳಿದಿತ್ತು. ಇದೀಗ ಈ ಬೈಪಾಸ್‌ ಕೂಡ ಸಂಚಾರಕ್ಕೆ ಮುಕ್ತವಾಗಿದ್ದರಿಂದ ಈ ಹೆದ್ದಾರಿಯಲ್ಲಿ ವಾಹನ ಸಂಚಾರ ಬಹುತೇಕ ಸಲೀಸಾದಂತಾಗಿದೆ.

Travel From Bengaluru To Mysuru in Just Two Hours grg
Author
First Published Jan 26, 2023, 5:30 AM IST

ಮಂಡ್ಯ(ಜ.26): ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಇದೀಗ ಬಹುತೇಕ ಸಂಚಾರಕ್ಕೆ ಮುಕ್ತವಾದಂತಾಗಿದೆ. ಹಲವು ಸಮಯದಿಂದ ಬಾಕಿ ಉಳಿದಿದ್ದ ಮಂಡ್ಯ ಬೈಪಾಸ್‌ ರಸ್ತೆ ಕೂಡ ಬುಧವಾರ ಸಂಜೆಯಿಂದ ವಾಹನ ಸಂಚಾರಕ್ಕೆ ಮುಕ್ತವಾಗಿದ್ದು, ಕೇವಲ ಒಂದೂವರೆಯಿಂದ 2 ಗಂಟೆಯಲ್ಲಿ ಬೆಂಗಳೂರಿಂದ ಮೈಸೂರು ತಲುಪುವುದು ಸಾಧ್ಯವಾಗಲಿದೆ.

ಐದು ಬೈಪಾಸ್‌ ರಸ್ತೆಗಳು: 

119 ಕಿ.ಮೀ. ಉದ್ದದ ಈ ಹೆದ್ದಾರಿಯಲ್ಲಿ ಈವರೆಗೆ ರಾಮನಗರ, ಚನ್ನಪಟ್ಟಣ, ಮದ್ದೂರು, ಶ್ರೀರಂಗಪಟ್ಟಣ ಬೈಪಾಸ್‌ ರಸ್ತೆ ಸಂಚಾರಕ್ಕೆ ಮುಕ್ತವಾಗಿತ್ತು. ಆದರೆ, ಮಂಡ್ಯ ಬೈಪಾಸ್‌ ರಸ್ತೆ ಕಾಮಗಾರಿ ಮಾತ್ರ ಬಾಕಿ ಉಳಿದಿತ್ತು. ಇದೀಗ ಈ ಬೈಪಾಸ್‌ ಕೂಡ ಸಂಚಾರಕ್ಕೆ ಮುಕ್ತವಾಗಿದ್ದರಿಂದ ಈ ಹೆದ್ದಾರಿಯಲ್ಲಿ ವಾಹನ ಸಂಚಾರ ಬಹುತೇಕ ಸಲೀಸಾದಂತಾಗಿದೆ.

ಬೆಂಗಳೂರು-ಮೈಸೂರು ದಶಪಥ ರಸ್ತೆಗೆ ದೇವೇಗೌಡರ ಹೆಸರು: ಕೇಂದ್ರ ಸಚಿವ ಗಡ್ಕರಿ ಭೇಟಿಯಾಗಿ ಮನವಿ ಸಲ್ಲಿಸಿದ ಶರವಣ

ಫೆಬ್ರವರಿ ಅಂತ್ಯದಲ್ಲಿ ಉದ್ಘಾಟನೆ: ಫೆಬ್ರವರಿ ಅಂತ್ಯದಲ್ಲಿ ಈ ರಸ್ತೆಯನ್ನು ಪ್ರಧಾನಿ ಮೋದಿ ಅವರೇ ಉದ್ಘಾಟಿಸಲಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಬಾಕಿ ಉಳಿದಿರುವ ಕೆಲಸ-ಕಾರ್ಯಗಳು ಬಿರುಸಿನಿಂದ ಸಾಗಿವೆ. ಬೆಂಗಳೂರು-ಮೈಸೂರು ನಡುವೆ ಈ ಹಿಂದೆ ಮೂರು ತಾಸಿಗೂ ಹೆಚ್ಚು ಸಮಯ ಬೇಕಿತ್ತು. ಆದರೆ, ಇದೀಗ ನಿರ್ಮಿಸಲಾಗಿರುವ ದಶಪಥ ಹೆದ್ದಾರಿಯಿಂದಾಗಿ ವಾಹನ ಸವಾರರಿಗೆ ಸುಮಾರು ಒಂದರಿಂದ ಒಂದೂವರೆ ಗಂಟೆಗಳಷ್ಟುಸಮಯ ಉಳಿತಾಯವಾಗಲಿದೆ.

ಸಣ್ಣ ಪುಟ್ಟ ಕಾಮಗಾರಿ ಬಾಕಿ:

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಯೋಜನೆ ಅಡಿ ಪ್ಯಾಕೇಜ್‌ 1ರಲ್ಲಿ ಬೆಂಗಳೂರಿನಿಂದ ನಿಡಘಟ್ಟವರೆಗೆ ಬೆಂಗಳೂರು ನಗರದಲ್ಲಿ 3 ಕಿರುಸೇತುವೆ, ರಾಮನಗರ-12 ಕಿರುಸೇತುವೆ, 4 ಬೃಹತ್‌ ಸೇತುವೆ, 31 ಅಂಡರ್‌ಪಾಸ್‌, ಮಂಡ್ಯ-2 ಕಿರುಸೇತುವೆ-1 ಅಂಡರ್‌ಪಾಸ್‌, ನಿಡಘಟ್ಟದಿಂದ ಮೈಸೂರು ವಿಭಾಗದವರೆಗೆ ಮಂಡ್ಯ ಜಿಲ್ಲೆಯಲ್ಲಿ 23 ಕಿರುಸೇತುವೆ, 5 ಬೃಹತ್‌ ಸೇತುವೆ, 43 ಅಂಡರ್‌ಪಾಸ್‌, ಮೈಸೂರು ಜಿಲ್ಲೆಯಲ್ಲಿ 2 ಕಿರುಸೇತುವೆ, 2 ಅಂಡರ್‌ಪಾಸ್‌ಗಳನ್ನು ನಿರ್ಮಾಣ ಮಾಡಲಾಗಿದೆ.

ರಸ್ತೆ ದುರಸ್ತಿ ಮಾಡದಿದ್ದರೆ ಮನೆ ಮುಂದೆ ಪ್ರತಿಭಟನೆ: ಶಾಸಕ ಪುಟ್ಟರಾಜು ಎಚ್ಚರಿಕೆ

ಮಂಡ್ಯ ನಗರದ ಉಮ್ಮಡಹಳ್ಳಿ ಬಳಿ ಮಂಡ್ಯ ನಗರ ಪ್ರವೇಶಿಸಲು ಹಾಗೂ ಇಂಡುವಾಳು ಬಳಿ ನಿರ್ಗಮಿಸಲು ಅವಕಾಶ ಕಲ್ಪಿಸಲಾಗಿದೆ. ಪ್ಯಾಕೇಜ್‌ 1ರ ಬೆಂಗಳೂರು-ನಿಡಘಟ್ಟಭಾಗದ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಪ್ಯಾಕೇಜ್‌ 2ರ ನಿಡಘಟ್ಟ-ಮೈಸೂರು ಭಾಗದ ಹೆದ್ದಾರಿ ಕಾಮಗಾರಿ ಫೆ.27ರೊಳಗೆ ಪೂರ್ಣಗೊಳ್ಳಲಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಮಂಡ್ಯ ನಗರದಲ್ಲಿ ವಾಹನ ದಟ್ಟಣೆ ಇಳಿಕೆ

ಈ ಹಿಂದೆ ಬೆಂಗಳೂರಿನಿಂದ ಹೋಗುತ್ತಿದ್ದ ವಾಹನಗಳು ಮಂಡ್ಯ ನಗರವಾಗಿಯೇ ಸಾಗಬೇಕಿತ್ತು. ಆದರೆ, ಇದೀಗ ಹೊಸ ದಶಪಥ ಹೆದ್ದಾರಿಯಿಂದಾಗಿ ವಾಹನ ಸವಾರರು ಮಂಡ್ಯಕ್ಕೆ ಹೋಗದೆ ಬೈಪಾಸ್‌ ರಸ್ತೆ ಮೂಲಕ ಮೈಸೂರಿಗೆ ತೆರಳಬಹುದಾಗಿದೆ. ಇದರಿಂದ ಮಂಡ್ಯ ನಗರದಲ್ಲಿ ಆಗುತ್ತಿದ್ದ ವಾಹನ ದಟ್ಟಣೆ ಕಡಿಮೆಯಾಗಲಿದೆ.

Follow Us:
Download App:
  • android
  • ios