Asianet Suvarna News Asianet Suvarna News

ಹಳಿಗೆ ಗುಡ್ಡಕುಸಿತ: ಕೇರಳ-ಮಂಗಳೂರು-ಮುಂಬಯಿ ರೈಲು ಸಂಚಾರ ವ್ಯತ್ಯಯ

ಮಂಗಳೂರಿನ ಪಡೀಲ್‌ ಮತ್ತು ಕುಲಶೇಖರ ನಡುವೆ ರೈಲು ಹಳಿಯಲ್ಲಿ ಶುಕ್ರವಾರ ಭೂ ಕುಸಿತ ಸಂಭವಿಸಿದ್ದು, ಕೇರಳ- ಮಂಗಳೂರು- ಮುಂಬಯಿ ನಡುವಿನ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಳ್ಳಲು ಶುಕ್ರವಾರ ಬೆಳಗ್ಗೆಯಿಂದ 72 ಗಂಟೆ ಅವಧಿ ಕಾಲಾವಕಾಶ ಅಗತ್ಯವಿರುವುದಾಗಿ ದಕ್ಷಿಣ ರೈಲ್ವೆಯವರು ತಿಳಿಸಿದ್ದಾರೆ.

 

Train service from mangalore to mumbai and kerala interrupted  as landslide on track
Author
Bangalore, First Published Aug 24, 2019, 1:13 PM IST

ಮಂಗಳೂರು(ಆ.24): ನಗರದ ಪಡೀಲ್‌ ಮತ್ತು ಕುಲಶೇಖರ ನಡುವೆ ರೈಲು ಹಳಿಯಲ್ಲಿ ಶುಕ್ರವಾರ ಭೂ ಕುಸಿತ ಸಂಭವಿಸಿದ್ದು, ಕೇರಳ- ಮಂಗಳೂರು- ಮುಂಬಯಿ ನಡುವಿನ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.

ಕುಸಿದ ಮಣ್ಣು ತೆರವುಗೊಳಿಸುವ ಮತ್ತು ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಳ್ಳಲು ಶುಕ್ರವಾರ ಬೆಳಗ್ಗೆಯಿಂದ 72 ಗಂಟೆ ಅವಧಿ ಕಾಲಾವಕಾಶ ಅಗತ್ಯವಿರುವುದಾಗಿ ದಕ್ಷಿಣ ರೈಲ್ವೆಯವರು ತಿಳಿಸಿದ್ದಾರೆ. ದುರಸ್ತಿ ಪೂರ್ಣಗೊಳ್ಳುವ ತನಕ ಮಂಗಳೂರು- ಮುಂಬಯಿ ನಡುವೆ ಸಂಚರಿಸುವ ರೈಲುಗಳು ಸುರತ್ಕಲ್‌ ನಿಲ್ದಾಣದಿಂದಲೇ ಕಾರ್ಯಾಚರಿಸಲಿದೆ ಎಂದು ಕೊಂಕಣ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

ನಿರಂತರ ಮಳೆಯಿಂದ ಗುಡ್ಡ ಕುಸಿತ:

ಶುಕ್ರವಾರ ಬೆಳಗ್ಗೆ 8.20ರ ಸುಮಾರಿಗೆ ಶಕ್ತಿನಗರ ಬಳಿ ರೈಲು ಹಳಿಗೆ ಗುಡ್ಡ ಕುಸಿದುಬಿದ್ದಿದೆ. ಕಳೆದ ರಾತ್ರಿಯಿಂದ ಸಾಧಾರಣ ನಿರಂತರ ಮಳೆಯ ಹಿನ್ನೆಲೆಯಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು. ಬಳಿಕ ಮೂರ್ನಾಲ್ಕು ಹಿಟಾಚಿ ಮೂಲಕ ಹಳಿಗೆ ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಗುಡ್ಡಕುಸಿತದಿಂದಾಗಿ ಮಂಗಳೂರು-ಗೋವಾ ನಡುವಿನ ಇಂಟರ್‌ ಸಿಟಿ ರೈಲು ಸಂಚಾರ ಸ್ಥಗಿತಗೊಳಿಸಬೇಕಾಯಿತು.

ಮಂತ್ರಿ ಸ್ಥಾನ ಸಿಗದ ಶಾಸಕರ ಜೊತೆ ಮಾತನಾಡುತ್ತೇವೆ: ಸಚಿವ ಕೋಟ

ಮಂಗಳೂರು ಸೆಂಟ್ರಲ್‌- ಮಡ್‌ಗಾಂವ್‌ ಪ್ಯಾಸೆಂಜರ್‌ (ನಂ.56640 ಮತ್ತು 56641) ಹಾಗೂ ಮಂಗಳೂರು ಸೆಂಟ್ರಲ್‌- ಮಡ್‌ಗಾಂವ್‌ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ (ನಂ.22636 ಮತ್ತು 22635) ಶುಕ್ರವಾರ ರದ್ದುಪಡಿಸಲಾಗಿದೆ.

ಸುರತ್ಕಲ್‌ನಿಂದ ರೈಲು ಸಂಚಾರ:

ಮಂಗಳೂರು ಜಂಕ್ಷನ್‌- ಮುಂಬಯಿ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ಮಂಗಳೂರು ಜಂಕ್ಷನ್‌ ಬದಲು ಸುರತ್ಕಲ್‌ ನಿಲ್ದಾಣದಿಂದ ಪ್ರಯಾಣ ಆರಂಭಿಸಿದೆ. ಇದಕ್ಕೆ ಎದುರಾಗಿ ಬರುವ ರೈಲು ಸುರತ್ಕಲ್‌ ನಿಲ್ದಾಣದಲ್ಲಿ ಪ್ರಯಾಣ ಅಂತಿಮಗೊಳಿಸಿದೆ ಎಂದು ದಕ್ಷಿಣ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ.ಕೆ.ಗೋಪಿನಾಥ್‌ ತಿಳಿಸಿದ್ದಾರೆ.

ಪ್ರಮುಖ ರೈಲು ಸಂಚಾರ ರದ್ದು:

ದುರಸ್ತಿ ಕಾಮಗಾರಿ ಪೂರ್ಣಗೊಳ್ಳುವ ತನಕ ಮಡ್‌ಗಾಂವ್‌- ಮಂಗಳೂರು ಸೆಂಟ್ರಲ್‌ ಮೆಮು ರೈಲು, ಲೋಕಮಾನ್ಯ ತಿಲಕ್‌-ಕುಚ್ಚುವೇಲಿ ಗರೀಬ್‌ರಥ್‌,ಎರ್ನಾಕುಲಂ-ಒಕಾಮಾ, ಹಝರತ್‌ ನಿಜಾಮುದ್ದೀನ್‌,-ತಿರುವನಂತಪುರಂ ಎಕ್ಸ್‌ಪ್ರೆಸ್‌, ಜಾಮ್‌ನಗರ್‌-ತಿರುನೇಲ್ವಿ ಎಕ್ಸ್‌ಪ್ರೆಸ್‌, ತಿರುವನಂತಪುರಂ-ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌, ಒಕಾಮಾ-ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರವನ್ನು ಶನಿವಾರವೂ ರದ್ದುಪಡಿಸಲಾಗಿದೆ.

ತಿರುವನಂತಪುರಂ-ಹಝರತ್‌ ನಿಜಾಮುದ್ದೀನ್‌ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಕುಚ್ಚುವೇಲಿ-ಇಂದೋರ್‌ ಎಕ್ಸ್‌ಪ್ರೆಸ್‌ ವಯಾ ಶೋರ್ನೂರು ಮಾರ್ಗವಾಗಿ ಸಂಚರಿಸಲಿದೆ.

ಚಾರ್ಮಾಡಿ ಘಾಟ್‌: ಪ್ರಕೃತಿ ಸೊಬಗಿಗಿಂತ ಕುಸಿತದ ಆತಂಕವೇ ಹೆಚ್ಚು...!

ತ್ರಿವೆಂಡ್ರಂ-ಲೋಕಮಾನ್ಯತಿಲಕ್‌ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲನ್ನು ಶುಕ್ರವಾರ ಎರ್ನಾಕುಲಂ ಜಂಕ್ಷನ್‌ನಿಂದ ತಿರುಗಿಸಲಾಗಿದೆ. ನಾಗರಕೊಯಿಲ್‌-ಮುಂಬಯಿ ಸಿಎಸ್‌ಎಂಟಿ ಎಕ್ಸ್‌ಪ್ರೆಸ್‌ ರೈಲನ್ನು ಶುಕ್ರವಾರ ದಿಂಡಿಗಲ್‌-ಮುಂಬಯಿ ಸಿಎಸ್‌ಟಿ ಮಧ್ಯೆ ಭಾಗಶಃ ಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Follow Us:
Download App:
  • android
  • ios