*  ಹೆಲ್ಮೆಟ್‌ ಕಿತ್ತು ರಸ್ತೆಗೆ ಎಸೆದು, ಹಲ್ಲೆಗೈದ ವಿಡಿಯೋ ವೈರಲ್‌*  ಸಬ್‌ ಇನ್ಸ್‌ಪೆಕ್ಟರ್‌ ವರ್ತನೆಗೆ ಸಾರ್ವಜನಿಕರ ತೀವ್ರ ಆಕ್ರೋಶ*  ಬಲವಂತವಾಗಿ ಮುಚ್ಚಳಿಕೆ ಬರೆಸಿಕೊಂಡ ಪೊಲೀಸರು 

ಬೆಂಗಳೂರು(ಫೆ.10): ಟೋಯಿಂಗ್‌(Towing) ಗಲಾಟೆ ಮಾಸುವ ಮುನ್ನ ನಗರದಲ್ಲಿ ಸಂಚಾರ ಪೊಲೀಸ್‌(Traffic Police) ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಒಬ್ಬರು ಯುವಕನೊಬ್ಬನ ಮೇಲೆ ನಡು ರಸ್ತೆಯಲ್ಲಿ ಹಲ್ಲೆ(Assault) ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್‌ ಆಗಿದ್ದು, ಸಬ್‌ ಇನ್ಸ್‌ಪೆಕ್ಟರ್‌ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯುವಕನ ಮೇಲೆ ಹಲ್ಲೆ ಮಾಡಿದ್ದು ವಿಜಯನಗರ ಸಂಚಾರ ಪೊಲೀಸ್‌ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಚಂದ್ರಶೇಖರ್‌ ಎನ್ನಲಾಗಿದೆ.

ಸಂದರ್ಶನ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ(Bike) ತೆರಳುತ್ತಿದ್ದ ಯುವಕನನ್ನು ತಡೆದಿರುವ ಸಂಚಾರ ಪೊಲೀಸರು, ಈ ಹಿಂದೆ ಸಂಚಾರ ನಿಯಮ ಉಲ್ಲಂಘನೆಯ(Traffic Volation) ಬಾಕಿ 2,500 ರು. ಪಾವತಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಸದ್ಯಕ್ಕೆ ನನ್ನ ಬಳಿ ಹಣವಿಲ್ಲ. ಸಂಬಳ ಬಂದ ಕೂಡಲೇ ಕೋರ್ಟ್‌ಗೆ(Court) ಹೋಗಿ ದಂಡ ಪಾವತಿಸುತ್ತೇನೆ ಎಂದು ಯುವಕ ಹೇಳಿದ್ದಾನೆ. ಇದಕ್ಕೆ ಸಂಚಾರ ಪೊಲೀಸರು, ಸದ್ಯಕ್ಕೆ ಒಂದು ಸಾವಿರ ರು. ಪಾವತಿಸಿ ಹೋಗು ಎಂದಿದ್ದಾರೆ. ಸತ್ಯವಾಗಲೂ ನನ್ನ ಬಳಿ ಹಣವಿಲ್ಲ ಸಾರ್‌. ಸಂಬಳ ಬಂದಾಗ ಕಟ್ಟುವೆ ಎಂದು ಯುವಕ ಹೇಳಿದ್ದಾನೆ. ಇದರಿಂದ ಕೋಪಗೊಂಡ ಸಂಚಾರ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌, ಏಕಾಏಕಿ ಆ ಯುವಕ ಮೇಲೆ ಹಲ್ಲೆ ಮಾಡಿದ್ದಾರೆ. ಹೆಲ್ಮೆಟ್‌(Helmet0s ಕಿತ್ತು ರಸ್ತೆಗೆ ಬದಿಗೆ ಎಸೆದಿದ್ದಾರೆ. ಯುವಕ ಹೊಡೆಯ ಬೇಡಿ ಎಂದು ಪರಿಪರಿಯಾಗಿ ಕೇಳಿಕೊಂಡರೂ ಅವಾಚ್ಯಶಬ್ಧಗಳಿಂದ ನಿಂದಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಟೋಯಿಂಗ್‌ಗೆ ಬ್ರೇಕ್‌ ಹಾಕಿದ ಸರ್ಕಾರ: ನಿಟ್ಟುಸಿರು ಬಿಟ್ಟ ಸಿಲಿಕಾನ್‌ ಸಿಟಿ ಮಂದಿ..!

ಬೆದರಿಸಿ ಮುಚ್ಚಳಿಕೆ?

ಸಬ್‌ಇನ್ಸ್‌ಪೆಕ್ಟರ್‌ ಹಲ್ಲೆ ಮಾಡುವುದನ್ನು ಯುವಕ ಮೊಬೈಲ್‌ನಲ್ಲಿ ವಿಡಿಯೊ ಮಾಡಲು ಮುಂದಾದಾಗ ಅವಾಚ್ಯವಾಗಿ ನಿಂದಿಸಿದ್ದಾರೆ. ನೀನು ಜೀವನದಲ್ಲಿ ನನ್ನ ನೆನೆಸಿಕೊಳ್ಳುವ ಹಾಗೆ ಮಾಡುತ್ತಾನೆ. ಬಾ ಪೊಲೀಸ್‌ ಠಾಣೆಗೆ. ಆ ಮೇಲೆ ನಿನಗೆ ಗೊತ್ತಾಗುತ್ತೆ ಎಂದು ಸಬ್‌ಇನ್ಸ್‌ಪೆಕ್ಟರ್‌ ಬೆದರಿಕೆ ಹಾಕಿದ್ದಾರೆ. ಕೊನೆಗೆ ಆ ಯುವಕನನ್ನು ಠಾಣೆಗೆ ಕರೆಸಿಕೊಂಡು ಬಲವಂತವಾಗಿ ನನ್ನದೇ ತಪ್ಪು ಎಂದು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಅಲ್ಲದೆ, ಹಲ್ಲೆ ಮಾಡುವ ವಿಡಿಯೋಗಳನ್ನು ಯುವಕನ ಮೊಬೈಲ್‌ನಿಂದ ಡಿಲಿಟ್‌ ಮಾಡಿಸಿದ್ದಾರೆ ಎನ್ನಲಾಗಿದೆ.

ಪಂಕ್ಚರ್‌ ಆದ ಆ್ಯಂಬುಲೆನ್ಸ್‌ ಚಕ್ರ ಬದಲಿಸಿದ ಪೇದೆ: ಪೊಲೀಸಪ್ಪನ ಮಾನವೀಯ ಕೆಲಸಕ್ಕೆ ಬಹುಪರಾಕ್‌..!

ಬೆಂಗಳೂರು: ಪ್ರಸುತ್ತ ಟೋಯಿಂಗ್(Towing) ವ್ಯವಸ್ಥೆ ಮುಂದಿಟ್ಟು ಸಂಚಾರ ಪೊಲೀಸರ(Traffic Police) ಮೇಲೆ ನಾಗರಿಕರು ಟೀಕೆಗಳು ಸುರಿಸುತ್ತಿರುವ ಹೊತ್ತಿನಲ್ಲೇ ಸಂಚಾರ ಠಾಣೆ ಕಾನ್‌ಸ್ಟೇಬಲ್‌ವೊಬ್ಬರ(Constable) ಮಾನವೀಯ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಬಹುಪರಾಕ್‌ ಸಿಕ್ಕಿದೆ. ಘಟನ ಫೆ.02 ರಂದು ನಡೆದಿತ್ತು.

ಕಬ್ಬನ್‌ ಪಾರ್ಕ್ ಸಂಚಾರ ಠಾಣೆಯ ಕಾನ್‌ಸ್ಟೇಬಲ್‌ ಕಾಸಪ್ಪ ಕಲ್ಲೂರ್‌(Kasappa Kallur) ಅವರೇ ಪ್ರಶಂಸೆಗೆ ಪಾತ್ರವಾಗಿದ್ದು, ಆಸ್ಪತ್ರೆಗೆ ರೋಗಿಯನ್ನು(Patient) ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಪಂಕ್ಚರ್‌ ಆಗಿ ನಿಂತಿದ್ದ ಆ್ಯಂಬುಲೆನ್ಸ್‌ನ(Ambulance) ಚಕ್ರ ಬದಲಾಯಿಸಿ ಸಕಾಲಕ್ಕೆ ರೋಗಿ ಆಸ್ಪತ್ರೆ(Hospital) ಸೇರಲು ನೆರವಾಗಿದ್ದಾರೆ. ತನ್ಮೂಲಕ ಅವರ ಪ್ರಾಣ ರಕ್ಷಿಸಿ ಕಲ್ಲೂರ್‌ ಕರ್ತವ್ಯ ಪ್ರಜ್ಞೆ ಮೆರೆದಿದ್ದರು.

ಸಿಗ್ನಲ್‌ ಜಂಪ್‌ ಪ್ರಶ್ನಿಸಿದ್ದಕ್ಕೆ ASI ಕೊರಳಪಟ್ಟಿಗೇ ಕೈ ಹಾಕಿದ ಮಹಿಳೆ..! 

ಸಿಐಡಿ ಜಂಕ್ಷನ್‌ನಲ್ಲಿ ಮಂಗಳವಾರ ಕಾಸಪ್ಪ ಕಲ್ಲೂರ್‌ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಅದೇ ವೇಳೆ ಗ್ಲೋಬಲ್‌ ಆಸ್ಪತ್ರೆಯಿಂದ ತುರ್ತು ಚಿಕಿತ್ಸೆ ಸಲುವಾಗಿ ಬೇರೆ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್‌ ಸಿಐಡಿ ಜಂಕ್ಷನ್‌ ಬಳಿ ಪಂಕ್ಚರ್‌ ಆಗಿದೆ. ಇದರಿಂದ ರೋಗಿ ಜೊತೆಯಲ್ಲಿದ್ದ ಅವರ ಕುಟುಂಬದವರು ಕಂಗಲಾಗಿದ್ದರು.

ಅಲ್ಲದೆ ಆ್ಯಂಬುಲೆನ್ಸ್‌ನಲ್ಲಿದ್ದ ರೋಗಿಗೆ ಆಮ್ಲಜನಕ(Oxygen) ಪ್ರಮಾಣ ಸಹ ಕಡಿಮೆಯಾಗುತ್ತಿತ್ತು. ಆಗ ಅದೇ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಕಾಸಪ್ಪ ಅವರು, ಕೂಡಲೇ ಸಂಕಷ್ಟಕ್ಕೆ ಸಿಲುಕಿದ್ದವರ ನೆರವಿಗೆ ಧಾವಿಸಿದ್ದಾರೆ. ಕೆಲವು ಆ್ಯಂಬುಲೆನ್ಸ್‌ಗಳಿಗೆ ಕರೆ ಮಾಡಿದರೂ ಪ್ರಯೋಜನವಾಗಿಲ್ಲ. ಕೊನೆಗೆ ತಾವೇ ಖುದ್ದಾಗಿ ಚಕ್ರ(Wheel) ಬದಲಾಯಿಸಿ ಆ್ಯಂಬುಲೆನ್ಸ್‌ ಹೊರಡಲು ನೆರವಾಗಿದ್ದಾರೆ. ಕಾಸಪ್ಪ ಕಲ್ಲೂರ್‌ ಅವರ ಚಕ್ರ ಬದಲಾಯಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ(Social Media) ವೈರಲ್‌(Viral) ಆಗಿದೆ. ಅಲ್ಲದೆ, ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಡಾ. ಬಿ.ಆರ್‌.ರವಿಕಾಂತೇಗೌಡ ಅವರು ಕಲ್ಲೂರ್‌ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು .5 ಸಾವಿರ ನಗದು ಪುರಸ್ಕಾರ ಜೊತೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದರು.