Asianet Suvarna News Asianet Suvarna News

Davanagere: ಸಂಚಾರಿ ನಿಯಮಗಳ ಜಾಗೃತಿಗೆ ಟ್ರಾಫಿಕ್‌ ಪಾರ್ಕ್: ಸಿ.ಬಿ.ರಿಷ್ಯಂತ್‌

ಮಕ್ಕಳು, ಸಾರ್ವಜನಿಕರು, ಪಾದಚಾರಿಗಳಿಗೆ ಸಂಚಾರಿ ನಿಯಮಗಳ ಜಾಗೃತಿ ಮೂಡಿಸುವ ಸಲುವಾಗಿ ಟ್ರಾಫಿಕ್‌ ಪಾರ್ಕ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ಹೇಳಿದರು. 

Traffic Park for Awareness of Traffic Rules Says City Police Commissioner CB Rishyanth gvd
Author
First Published Jan 12, 2023, 11:19 PM IST

ದಾವಣಗೆರೆ (ಜ.12): ಮಕ್ಕಳು, ಸಾರ್ವಜನಿಕರು, ಪಾದಚಾರಿಗಳಿಗೆ ಸಂಚಾರಿ ನಿಯಮಗಳ ಜಾಗೃತಿ ಮೂಡಿಸುವ ಸಲುವಾಗಿ ಟ್ರಾಫಿಕ್‌ ಪಾರ್ಕ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ಹೇಳಿದರು. ನಗರದ ಎಸ್‌ಎಸ್‌ ಬಡಾವಣೆಯಲ್ಲಿರುವ ಗಂಗೂಬಾಯಿ ಹಾನಗಲ್‌ ಪಾರ್ಕ್‌ನಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ, ಸ್ಮಾರ್ಟ್‌ಸಿಟಿ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ ಸಂಚಾರ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಪಾಲನೆ ಜಾಗೃತಿ ಕುರಿತ ನಿಯಮಗಳ ಬೋರ್ಡ್‌ ಅಳವಡಿಸಿದ ಪಾರ್ಕ್ ಉದ್ಘಾಟಿಸಿ ಮಾತನಾಡಿ, ಈ ಟ್ರಾಫಿಕ್‌ ಪಾರ್ಕ್ನಲ್ಲಿ ಪ್ರತಿಯೊಂದು ಸಂಚಾರಿ ನಿಯಮಗಳ ಕುರಿತು ಬೋರ್ಡ್‌ಗಳನ್ನು ಅಳವಡಿಸಲಾಗಿದೆ. 

ಇದರ ಮುಖ್ಯ ಉದ್ದೇಶ ಪಾರ್ಕ್ಗೆ ಮಕ್ಕಳನ್ನು ಕರೆ ತಂದರೆ ಇಲ್ಲಿ ಸಂಚಾರಿ ನಿಯಮಗಳ ಬೋರ್ಡ್‌ಗಳಲ್ಲಿನ ಮಾಹಿತಿ ನೀಡಬಹುದು. ಮಕ್ಕಳಿಂದ ಹಿಡಿದು ಎಲ್ಲರಿಗೂ ಸಂಚಾರಿ ನಿಯಮಗಳ ಜಾಗೃತಿ ಮೂಡಿಸುವ ಉದ್ದೇಶವಿದೆ. ಎಲ್ಲಾ ಶಾಲೆ ಮಕ್ಕಳು ಈ ಪಾರ್ಕ್ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದರು. ಈ ಕಾರ್ಯಕ್ಕೆ ಸ್ಮಾರ್ಟ್‌ಸಿಟಿ, ಮಹಾನಗರ ಪಾಲಿಕೆ ಸಹಕಾರ ಸಿಕ್ಕಿದೆ. ಡಿಎಸ್‌ಪಿ ಹೆಚ್ಚುವರಿ ಎಸ್‌ಪಿ, ಹಾಗೂ ಇನ್ಸ್‌ಪೆಕ್ಟರ್‌, ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳು ಸೇರಿ ಈ ಟ್ರಾಫಿಕ್‌ ಪಾರ್ಕ್ ಕಾನ್ಸೆಪ್‌್ಟಮಾಡಿದ್ದಾರೆ. ಈ ಟ್ರಾಫಿಕ್‌ ಪಾರ್ಕ್ಗೆ ವಿವಿಧ ಶಾಲೆಯ ವಿದ್ಯಾರ್ಥಿಗಳು ಭೇಟಿ ನೀಡಿ ಸಂಚಾರಿ ನಿಯಮಗಳ ಬಗ್ಗೆ ತಿಳಿಸುವುದು ಅವಶ್ಯಕ ಎಂದು ತಿಳಿಸಿದರು.

Mandya: ಇಬ್ರಾಹಿಂರಿಂದಲೇ ಜೆಡಿಎಸ್‌ ಅವನತಿ: ಸಿ.ಪಿ.ಯೋಗೇಶ್ವರ್‌

ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ ಮಲ್ನಾಡ್‌ ಮಾತನಾಡಿ, ಪೊಲೀಸ್‌ ಅಧಿಕಾರಿಗಳು, ಸಾರ್ವಜನಿಕರು ಪ್ರತಿಯೊಬ್ಬರೂ ತಮ್ಮ ಮೊಬೈಲ್‌ಗಳಲ್ಲಿ ಎಂ-ಪರಿವಾಹನ ಎನ್ನುವ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿರಿ. ನಿಮ್ಮ ಬಡಾವಣೆಗಳಲ್ಲಿ ಅನಧಿಕೃತ ವಾಹನ ಅಥವಾ ಅನುಮಾನಾಸ್ಪದ ವಾಹನ ಕಂಡು ಬಂದರೆ 112 ಸಹಾಯವಾಣಿಗೆ ಮಾಹಿತಿ ನೀಡಿದರೆ ತಕ್ಷಣದಲ್ಲಿ ಮುಂದಾಗುವ ಅನಾಹುತಗಳನ್ನು ತಡೆಯಲು ಅನುಕೂಲವಾಗಲಿದೆ. ಆ್ಯಪ್‌ನಲ್ಲಿ ಯಾವ ವಾಹನ ಅದರ ಮಾಹಿತಿ ಸಿಗುತ್ತದೆ. ಅದರಲ್ಲಿ ಮಿಸ್‌ ಮ್ಯಾಚ್‌ ಕಂಡು ಬಂದರೆ ಸಮೀಪದ ಪೊಲೀಸ್‌ ಠಾಣೆ ಅಥವಾ 112ಗೆ ಮಾಹಿತಿ ನೀಡಲು ತಿಳಿಸಿದರು.

ಸಂಚಾರಿ ವೃತ್ತ ನಿರೀಕ್ಷಕ ಆರ್‌.ಪಿ.ಅನಿಲ್‌ ಮಾತನಾಡಿ, ಪ್ರತಿ ವರ್ಷ ಜನವರಿಯಲ್ಲಿ ಸಂಚಾರಿ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತಿದೆ. ನಾವು ಮಕ್ಕಳಿಗೆ ಕಳ್ಳತನ ಮಾಡಬೇಡ, ಸುಳ್ಳು ಹೇಳಬೇಡ ಎಂದು ಪಾಠ ಮಾಡುತ್ತೇವೆ ಆದರೆ ಸಂಚಾರಿ ನಿಯಮಗಳನ್ನು ಪಾಲಿಸಿರಿ ಎಂದು ಯಾರೂ ತಿಳಿಸಲ್ಲ. ಈ ಕಾರಣದಿಂದ ಮಕ್ಕಳಿಗೆ ರಸ್ತೆಗೆ ಕರೆದುಕೊಂಡು ಹೋಗಿ ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ ನೀಡಲು ಆಗಲ್ಲ, ಆದ್ದರಿಂದ ಸಂಚಾರಿ ನಿಯಮಗಳ ಈ ಪಾರ್ಕ್ನಲ್ಲಿ ಅಳವಡಿಸಿದ್ದು, ಇದರ ಮೂಲಕ ಮಕ್ಕಳಿಗೆ ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ರಾಮಗೊಂಡ ಬಿ. ಬಸರಗಿ, ಡಿಸಿಆರ್‌ಬಿ ಡಿವೈಎಸ್‌ಪಿ ಬಸವರಾಜ, ಪ್ರಕಾಶ, ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ಪ್ರಸಾದ, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿರ್ದೇಶಕ ರವೀಂದ್ರ ಮಲ್ಲಾಪುರ, ಪ್ರಧಾನ ವ್ಯವಸ್ಥಾಪಕ ಎಸ್‌.ಕೆ.ಚಂದ್ರಶೇಖರ, ಪೊಲೀಸ್‌ ಅಧಿಕಾರಿಗಳು, ಸ್ಮಾರ್ಟ್‌ಸಿಟಿ ಅಧಿಕಾರಿಗಳು, ಎಜು ಎಷ್ಯಾ ಶಾಲೆ ಮುಖ್ಯಸ್ಥರು, ಮಕ್ಕಳು ಭಾಗವಹಿಸಿದ್ದರು.

ಟಿಕೆಟ್‌ ನೀಡುವ ಬಗ್ಗೆ ಪಕ್ಷದ ವರಿಷ್ಠರ ತೀರ್ಮಾನ ಅಂತಿಮ: ಸಚಿವ ಎಂಟಿಬಿ ನಾಗರಾಜ್‌

ಬೇರೆ ದೇಶಕ್ಕೆ ನಮ್ಮವರು ಹೋದರೆ ಎಲ್ಲಾ ರೀತಿಯ ಸಂಚಾರಿ ನಿಯಮ ಪಾಲಿಸುತ್ತಾರೆ. ಆದರೆ ನಮ್ಮಲ್ಲಿ ಪಾಲಿಸಲ್ಲ, ಹೆಲ್ಮೆಟ್‌ ಹಾಕ್ರಿ ಎಂದರೆ ಹಾಕಲ್ಲ, ರಾಂಗ್‌ ಸೈಡ್‌ ಹಾಗೂ ವಾಹನಗಳ ವೇಗವಾಗಿ ಚಲಾಯಿಸುತ್ತಾರೆ. ಕೆಲವರು ಸಂಚಾರಿ ನಿಯಮಗಳ ಉಲ್ಲಂಘಿಸುವುದೇ ಅಭ್ಯಾಸ ಮಾಡಿಕೊಂಡಿದ್ದಾರೆ. ಮುಂದಿನ ಪೀಳಿಗೆ ಯುವಕರಾಗುವ ನೀವು ಈ ಸಂಚಾರಿ ನಿಯಮಗಳ ಬಗ್ಗೆ ತಿಳಿಯುವುದು ಅವಶ್ಯ.
-ಸಿ.ಬಿ.ರಿಷ್ಯಂತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Follow Us:
Download App:
  • android
  • ios