Mandya: ಇಬ್ರಾಹಿಂರಿಂದಲೇ ಜೆಡಿಎಸ್‌ ಅವನತಿ: ಸಿ.ಪಿ.ಯೋಗೇಶ್ವರ್‌

ಇಬ್ರಾಹಿಂ ಅವರಿಗೆ ನಾಲಿಗೆ ಮೇಲೆ ಹತೋಟಿ ಇಲ್ಲ. ಹುಚ್ಚು ಬಂದಂತೆ ಮಾತನಾಡುತ್ತಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್‌ ಅವನತಿಗೆ ಅವರೇ ಕಾರಣರಾಗಲಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಎಚ್ಚರಿಸಿದರು. 

bjp mlc cp yogeshwar lashes out cm ibrahim at mandya gvd

ಮಂಡ್ಯ (ಜ.12): ಸಿಎಂ ಇಬ್ರಾಹಿಂ ಅವರಿಗೆ ನಾಲಿಗೆ ಮೇಲೆ ಹತೋಟಿ ಇಲ್ಲ. ಹುಚ್ಚು ಬಂದಂತೆ ಮಾತನಾಡುತ್ತಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್‌ ಅವನತಿಗೆ ಅವರೇ ಕಾರಣರಾಗಲಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಎಚ್ಚರಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ರಾಹಿಂ ಚರಿತ್ರೆ ಎಲ್ಲರಿಗೂ ಗೊತ್ತಿದೆ. ಜೆಡಿಎಸ್‌ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದೂ ಗೊತ್ತಿರುವ ವಿಚಾರವೇ. ಇಬ್ರಾಹಿಂ ಅದೇ ಪಕ್ಷದ ಅಧ್ಯಕ್ಷರು. ಅವರು ಪಂಚೆ ಬಗ್ಗೆ ಮಾತನಾಡುತ್ತಾರೆ. ದೇವೇಗೌಡರು, ಕುಮಾರಸ್ವಾಮಿ, ನಾವು ಹಾಕೋದು ಪಂಚೆಯನ್ನೇ. ಯೋಗಿ ಆದಿತ್ಯನಾಥ್‌ ಬಗ್ಗೆ ನಮಗೆಲ್ಲರಿಗೂ ಗೌರವವಿದೆ. ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ನಮಗೆಲ್ಲರಿಗೂ ತೀವ್ರ ನೋವುಂಟುಮಾಡಿದೆ ಎಂದರು.

ಹಿಂದೂ ಧರ್ಮದಲ್ಲಿ ಗುರುಗಳಿಗೆ, ಪೂಜ್ಯರಿಗೆ ಬಹಳ ಗೌರವವನ್ನು ಕೊಡುತ್ತೇವೆ. ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿ ಲವ್‌ಜಿಹಾದ್‌ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡುವುದು. ಹೆಣ್ಣು ಮಕ್ಕಳ ಬಗ್ಗೆ ಅಗೌರವದಿಂದ ಹೇಳಿಕೆ ನೀಡುವಂತಹದ್ದನ್ನು ಖಂಡಿಸುತ್ತೇನೆ. ಕುಮಾರಸ್ವಾಮಿ ಅವರಿಗೆ ಈ ವಿಚಾರ ಗೊತ್ತಿದ್ದರೂ ರಾಜ್ಯಾಧ್ಯಕ್ಷರ ಹೇಳಿಕೆ ಖಂಡಿಸದೆ ಮೌನ ವಹಿಸಿರುವುದು ಅವರ ಉದ್ಧಟತನವನ್ನು ತೋರಿಸುತ್ತದೆ. ಇಬ್ರಾಹಿಂ ವರ್ತನೆ ಹಿಂದೂ ವಿರೋಧಿಯಾಗಿದೆ. ತಕ್ಷಣವೇ ಕುಮಾರಸ್ವಾಮಿ ಮತ್ತು ಇಬ್ರಾಹಿಂ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಟಿಕೆಟ್‌ ನೀಡುವ ಬಗ್ಗೆ ಪಕ್ಷದ ವರಿಷ್ಠರ ತೀರ್ಮಾನ ಅಂತಿಮ: ಸಚಿವ ಎಂಟಿಬಿ ನಾಗರಾಜ್‌

ಸ್ಯಾಂಟ್ರೋ ರವಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಸ್ಯಾಂಟ್ರೋ ರವಿ ಯಾರೆನ್ನುವುದೇ ನನಗೆ ಗೊತ್ತಿಲ್ಲ ಎಂದು ಉತ್ತರಿಸಿದರು. ಕಾಂಗ್ರೆಸ್‌ ಬಸ್‌ ಯಾತ್ರೆ ಆರಂಭ ಕುರಿತಂತೆ, ಕಾಂಗ್ರೆಸ್‌ನವರು ಎಲ್ಲಾ ರೀತಿಯ ಯಾತ್ರೆ ಮಾಡುತ್ತಾರೆ. ಚುನಾವಣೆ ಹತ್ತಿರ ಬರುತ್ತಿದೆ ಎಂದು ಯಾತ್ರೆ ಮಾಡುತ್ತಿದ್ದಾರೆ. ಭಾರತ್‌ ಜೋಡೋ ಯಾತ್ರೆ ಮಾಡಿದ ಬಳಿಕ ಬಸ್‌ ಯಾತ್ರೆ ಬೇಕಿತ್ತಾ? ಎರಡೂ ಬಸ್‌ ಬಿಟ್ಟಿದ್ದಾರೆ. ಶಿವಕುಮಾರ್‌ ಒಂದು ಬಸ್‌, ಸಿದ್ದರಾಮಯ್ಯರದ್ದು ಮತ್ತೊಂದು ಬಸ್‌. ಈ ಬಸ್‌ಗಳು ಯಾವಾಗ ಎಲ್ಲಿ ಪಂಚರ್‌ ಆಗ್ತವೋ ನೋಡೋಣ. ಈಗ ಜೊತೆಯಲ್ಲಿ ಹೋಗುತ್ತಾರೆ. ಆಮೇಲೆ ಇಬ್ಬಾಗ ಆಗುತ್ತಾರೆ. ಇಬ್ಬರ ಕಿತ್ತಾಟ ಯಾವ ದಿಕ್ಕಿಗೆ ಹೋಗುವುದೋ ಕಾದುನೋಡಬೇಕು ಎಂದರು.

ಬೂತ್‌ ಮಟ್ಟದಲ್ಲಿ ಬಿಜೆಪಿ ಬಲಪಡಿಸಿ: ಬೂತ್‌ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸುವ ಮುಖಾಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಕಾರ‍್ಯಕರ್ತರು ಈಗನಿಂದಲೇ ಪಕ್ಷ ಸಂಘಟನೆ ಕಾರ‍್ಯವನ್ನು ಚುರುಕುಗೊಳಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಕರೆ ನೀಡಿದರು. ತಾಲೂಕಿನ ಜೆ.ಬ್ಯಾಡರಹಳ್ಳಿಯಲ್ಲಿ ತಾಲೂಕು ಬಿಜೆಪಿ ಹಮ್ಮಿಕೊಂಡಿದ್ದ ಬೂತ್‌ ವಿಜಯ್‌ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಗೆಲ್ಲಲು ಪ್ರತಿ ಬೂತ್‌ಮಟ್ಟದಲ್ಲಿ ಬೀಳುವ ಒಂದೊಂದು ಮತವೂ ಮಹತ್ವದಾಗಿದ್ದು, ಆ ನಿಟ್ಟಿನಲ್ಲಿ ಪಕ್ಷದ ಬಲವರ್ಧನೆ ಕಾರ‍್ಯಕರ್ತರು ಶ್ರಮಿಸಬೇಕು ಎಂದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಜನಪರ ಯೋಜನೆಗಳನ್ನು ಜಾರಿಗೊಳಿಸಿವೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದ ಅಭಿವೃದ್ಧಿಯ ಚಿತ್ರಣವೇ ಬದಲಾಗಿದೆ. ಸರ್ಕಾರಿ ಯೋಜನೆಗಳ ಕುರಿತು ಬೂತ್‌ ಮಟ್ಟದಲ್ಲಿ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.

ಸಿದ್ದುಗೆ ಕ್ಷೇತ್ರ ಬಿಟ್ಟುಕೊಡಲು ಯಾವುದೇ ಷರತ್ತು ವಿಧಿಸಿಲ್ಲ: ಶಾಸಕ ಶ್ರೀನಿವಾಸಗೌಡ

ಮಹತ್ವದ ಕಾರ‍್ಯಕ್ರಮ: ಗುಜರಾತ್‌ ವಿಧಾನಸಭೆಯಲ್ಲಿ ಚುನಾವಣೆ ಗೆಲುವಿಗೆ ಬಿಜೆಪಿ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ‍್ಯಗಳು ಎಷ್ಟುಮುಖ್ಯವೋ, ಅವುಗಳನ್ನು ಬೂತ್‌ಮಟ್ಟದಲ್ಲಿ ಜನರಿಗೆ ತಲುಪಿಸುವ ಕೆಲಸ ಮಾಡಿದ್ದೂ ಅಷ್ಟೇ ಮುಖ್ಯವಾಗಿತ್ತು. ಅದನ್ನು ಮನಗಂಡಿರುವ ಬಿಜೆಪಿ ವರಿಷ್ಠರು ರಾಜ್ಯದಲ್ಲೂ ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟಿಸುವಲ್ಲಿ ಬೂತ್‌ ವಿಜಯ್‌ ಒಂದು ಮಹತ್ವದ ಅಭಿಯಾನವಾಗಿದೆ. ಕಾರ‍್ಯಕರ್ತರು ಇದರ ಮಹತ್ವವನ್ನು ಅರಿತು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

Latest Videos
Follow Us:
Download App:
  • android
  • ios