BBMP: ಬರಲಿದೆ ಕಸದ ವಾಹನ ಎಲ್ಲಿದೆ ಎಂದು ತಿಳಿಸುವ ಆ್ಯಪ್‌!

ಪಾಲಿಕೆಯ ಕಸದ ವಾಹನಕ್ಕೆ ಇನ್ನು ಮುಂದೆ ರಸ್ತೆ ಬದಿ ನಿಂತು ಕಾಯುವ ಅವಶ್ಯಕತೆ ಇಲ್ಲ! ಕಸದ ವಾಹನ ಈಗ ಎಲ್ಲಿದೆ? ನಿಮ್ಮ ಮನೆ ಬಳಿಕೆ ಯಾವ ಸಮಯಕ್ಕೆ ಬರಲಿದೆ ಎಂಬ ಮಾಹಿತಿಯು ಮೊಬೈಲ್‌ನಲ್ಲೇ ಸಿಗಲಿದೆ.

Track Garbage Vehicles BBMP Comes up with App gvd

ಸಂಪತ್‌ ತರೀಕೆರೆ

ಬೆಂಗಳೂರು (ಫೆ.14): ಪಾಲಿಕೆಯ ಕಸದ ವಾಹನಕ್ಕೆ (Garbage Vehicles) ಇನ್ನು ಮುಂದೆ ರಸ್ತೆ ಬದಿ ನಿಂತು ಕಾಯುವ ಅವಶ್ಯಕತೆ ಇಲ್ಲ! ಕಸದ ವಾಹನ ಈಗ ಎಲ್ಲಿದೆ? ನಿಮ್ಮ ಮನೆ ಬಳಿಕೆ ಯಾವ ಸಮಯಕ್ಕೆ ಬರಲಿದೆ ಎಂಬ ಮಾಹಿತಿಯು ಮೊಬೈಲ್‌ನಲ್ಲೇ (Mobile) ಸಿಗಲಿದೆ. ಹೌದು, ಅಂತಹದೊಂದು ಅತ್ಯಾಧುನಿಕ ತಂತ್ರಾಂಶ (ಆ್ಯಪ್‌) ಅಭಿವೃದ್ಧಿಗೆ ಬಿಬಿಎಂಪಿ (BBMP) ಸಿದ್ಧತೆ ನಡೆಸಿದೆ. ಶೀಘ್ರದಲ್ಲೇ ಆ್ಯಪ್‌ (App) ಜನರ ಕೈಸೇರಲಿದೆ.

ಕಸ ಸಮಸ್ಯೆ ನಿವಾರಣೆಗೆ ಹಲವು ಪ್ರಯತ್ನಗಳನ್ನು ಮಾಡುತ್ತಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ತ್ಯಾಜ್ಯ ವಿಲೇವಾರಿ ವಾಹನಗಳಿಗೆ ಜಿಪಿಎಸ್‌ ಅಳವಡಿಸಿದಂತೆ ನಮ್ಮ ಏರಿಯಾಗೆ ಬರುವ ತ್ಯಾಜ್ಯ ವಿಲೇವಾರಿ ವಾಹನ ಎಲ್ಲಿದೆ ಎಂದು ಪತ್ತೆ ಮಾಡಲು ಆ್ಯಪ್‌ ಅಭಿವೃದ್ಧಿಪಡಿಸಲು ಚಿಂತನೆ ನಡೆಸಿದೆ.

ಪ್ರಸ್ತುತ ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಟ್ರಕ್‌ ಹಾಗೂ ಆಟೋ ಟಿಪ್ಪರ್‌ಗಳು, ಗುತ್ತಿಗೆದಾರರು ಅಧಿಕಾರಿಗಳ ಕಣ್ಗಾವಲಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲಿ ಕಸ ಸಂಗ್ರಹಿಸಿವೆ, ಎಲ್ಲಿ ವಿಲೇವಾರಿ ಮಾಡುತ್ತಿವೆ ಎಂಬಿತ್ಯಾದಿ ಮಾಹಿತಿಗಳು ಕ್ಷಣಾರ್ಧದಲ್ಲಿ ಬಿಬಿಎಂಪಿ ಐಟಿ ವಿಭಾಗದ ಅಧಿಕಾರಿಗಳು ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ತಿಳಿಯುವಂತೆ ಜಿಪಿಎಸ್‌ಗಳನ್ನು 198 ವಾರ್ಡ್‌ಗಳ ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ವಾಹನಗಳಿಗೆ ಅಳವಡಿಸಲಾಗಿದೆ.

ಹೈಕೋರ್ಟ್‌ ಛೀಮಾರಿ ಹಾಕಿದ್ರೂ ಬುದ್ಧಿ ಕಲಿಯದ BBMP: ರಸ್ತೆಗುಂಡಿಗಳಿಗೆ ಮುಕ್ತಿ ಎಂದು?

ಜಿಪಿಎಸ್‌ ಅಳವಡಿಕೆಯಿಂದ ಈ ವಾಹನಗಳ ಚಲನವಲನಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ಈ ವಾಹನಗಳು ವ್ಯಾಪ್ತಿಯ ಹೊರ ಬಂದರೆ ಅಲರ್ಟ್‌ ಮೆಸೇಜ್‌ಗಳು ಅಧಿಕಾರಿಗಳಿಗೆ ತಲುಪುವಂತೆ ವ್ಯವಸ್ಥೆಯನ್ನೂ ಮಾಡಲಾಗಿದೆ. ಅದಕ್ಕಾಗಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಮಾಂಡ್‌ ಕಂಟ್ರೋಲ್‌ ಸೆಂಟರ್‌ ಇದ್ದು ಅಲ್ಲಿಂದಲೇ ಮೇಲ್ವಿಚಾರಣೆ ಮಾಡಲಾಗುತ್ತಿದೆ. 

ವಾಹನ ನಿಲ್ಲಿಸಿದ ಸ್ಥಳ, ಚಾಲಕ ಸಾಗುವ ಮಾರ್ಗ, ವಾಹನದ ವೇಗ ಇತ್ಯಾದಿ ಮಾಹಿತಿಗಳು ಜಿಪಿಎಸ್‌ (GPS) ಮೂಲಕ ಮಾಹಿತಿಯು ಮೇಲ್ವಿಚಾರಕರ ಕೊಠಡಿಗೆ ಕ್ಷಣಾರ್ಧದಲ್ಲಿ ರವಾನೆಯಾಗುತ್ತದೆ. ಜೊತೆಗೆ ಈ ವಾಹನಗಳು ಮತ್ತು ಚಾಲಕ ಸಿಬ್ಬಂದಿಗೆ ಮೇಲ್ವಿಚಾರಣೆ ಕೊಠಡಿಯಿಂದ ಪಡೆದ ವರದಿ ಆಧರಿಸಿಯೇ ವೇತನ ನೀಡಲಾಗುತ್ತಿದೆ ಎಂದು ಪಾಲಿಕೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Bengaluru Karaga 2022: ಕರಗ ಮಹೋತ್ಸವಕ್ಕೆ ಪಾಲಿಕೆ ಹಸಿರು ನಿಶಾನೆ!

ಸಮಗ್ರ ಮಾಹಿತಿಯ ಆ್ಯಪ್‌: ಪಾಲಿಕೆ ಅಭಿವೃದ್ಧಿ ಪಡಿಸಲಿರುವ ಆ್ಯಪ್‌ನಲ್ಲಿ ಕಸ ಸಂಗ್ರಹಿಸಿ ವಿಲೇವಾರಿ ವಾಹನದ ಟ್ರಿಪ್‌ ಸಾರಾಂಶ, ವೇಳಾಪಟ್ಟಿಗ್ರಾಫ್‌, ಕೆಲಸದ ಸಮಯದ ಸಾರಾಂಶ ಮತ್ತು ವಾಹನ ಸಂಚರಿಸುವ ಮಾರ್ಗ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಜೊತೆಗೆ ಓಲಾ, ಊಬರ್‌ ಆ್ಯಪ್‌ನಲ್ಲಿ ಗ್ರಾಹಕ ಹೇಗೆ ವಾಹನ ಎಲ್ಲಿ ಬರುತ್ತಿದೆ ಎಂದು ಪತ್ತೆ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆಯೇ ಹಾಗೆಯೇ ಈ ಆ್ಯಪ್‌ನಲ್ಲಿ ಕಸದ ವಾಹನ ಎಲ್ಲಿಗೆ, ಎಷ್ಟುಹೊತ್ತಿಗೆ ತಮ್ಮ ಮನೆ ಬಳಿ ಬರಲಿದೆ ಎಂಬ ಮಾಹಿತಿ ಲಭ್ಯವಾಗಲಿದೆ. ಇದರಿಂದ ಗಂಟೆ ಗಟ್ಟಲೆ ಕಸ ಹಿಡಿದುಕೊಂಡು ಮನೆ ಬಾಗಿಲಲ್ಲಿ ಕಸದ ವಾಹನಕ್ಕಾಗಿ ಕಾಯುವ ಅಗತ್ಯ ಇರುವುದಿಲ್ಲ. ಅಂತಹ ತಂತ್ರಾಂಶವುಳ್ಳ ಆ್ಯಪ್‌ ಸಿದ್ಧಪಡಿಸಲಾಗುತ್ತಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios