ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಯ ಕ್ವಾರ್ಟರ್‌ ಫೈನಲ್‌ನಲ್ಲಿ ಗೆಲುವು ಸಾಧಿ​ಸಿದರೆ ಮುಂಬರುವ ವಿಧಾನಸಭೆ ಚುನಾವಣೆಯ ಫೈನಲ್‌ನಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ಶತಸಿದ್ಧ ಮುಂಬರುವ ವಿಧಾನಸಭಾ ಚುನಾವಣೆಗೆ ಉತ್ತಮ ತಾಲೀಮು ಸಿಗುತ್ತದೆ ಎಂದ ಶಾಸಕ ಪ್ರೀತಮ್‌ ಗೌಡ

 ಬೇಲೂರು (ನ.09):  ಮುಂಬರುವ ತಾಲೂಕು ಪಂಚಾಯ್ತಿ ಜಿಲ್ಲಾ ಪಂಚಾಯ್ತಿ ಚುನಾವಣೆಯ (Election) ಕ್ವಾರ್ಟರ್‌ ಫೈನಲ್‌ನಲ್ಲಿ ಗೆಲುವು ಸಾಧಿ​ಸಿದರೆ ಮುಂಬರುವ ವಿಧಾನಸಭೆ ಚುನಾವಣೆಯ (Assembly Election) ಫೈನಲ್‌ನಲ್ಲಿ ಬಿಜೆಪಿ (BJP) ಅಭ್ಯರ್ಥಿಯ ಗೆಲುವು ಶತಸಿದ್ಧ ಎಂದು ಶಾಸಕ ಪ್ರೀತಮ್‌ ಗೌಡ ವಿಶ್ವಾಸ ವ್ಯಕ್ತಪಡಿಸಿದರು.

ನೆಹರೂ ನಗರದಲ್ಲಿ ಬಿಜೆಪಿ (BJP) ಕಚೇರಿ ಉದ್ಘಾಟನೆ ನಂತರ ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಈಗ ಬಿಜೆಪಿಗೆ ಸಂಘರ್ಷ ಸಮಯವಾಗಿದ್ದು ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ದಕ್ಷಿಣ ಪದವೀಧರ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿದರೆ ಮುಂಬರುವ ವಿಧಾನಸಭಾ ಚುನಾವಣೆಗೆ ಉತ್ತಮ ತಾಲೀಮು ಸಿಗುತ್ತದೆ. ದಶಕಗಳ ಹಿಂದೆ ಜಿಪಂ, ತಾಪಂ ಹಾಗೂ ಎಪಿಎಂಸಿಯಲ್ಲಿ (APMC) ಅ​ಧಿಕಾರ ಚುಕ್ಕಾಣಿ ಹಿಡಿದಿತ್ತು. ಆದರೆ ಈಗ ಗತ ವೈಭವವನ್ನು ಮೆಲುಕು ಹಾಕುತ್ತಾ ಕೂರುವ ಬದಲು ಸಂಘಟನೆಯಲ್ಲಿ ತೊಡಗಿಸಿಕೊಂಡು ಇನ್ನೂ ಹೆಚ್ಚು ಸ್ಥಾನ ಗೆಲ್ಲಲು ಕಾರ್ಯಕರ್ತರು ಮುಂದಾಗಬೇಕು ಎಂದರು.

ಜೆಡಿಎಸ್‌ 3 ಸಿಎಂ ಕೊಟ್ಟರೂ ಅಭಿವೃದ್ಧಿಯಾಗಿಲ್ಲ:

ಜೆಡಿಎಸ್‌ (JDS) ಪಕ್ಷ 3 ಮುಖ್ಯಮಂತ್ರಿಗಳನ್ನು (CM) ಕಂಡಿದ್ದರೂ ಹಾಸನ (Hassan) ಜಿಲ್ಲೆ ಮಾತ್ರ ಬಡವಾಗಿದೆ. ಅಭಿವೃದ್ಧಿಯ ಹರಿಕಾರ ಎಂದು ಸ್ವಯಂ ಘೋಷಿತವಾಗಿ ಹೇಳಿಕೊಳ್ಳುವ ಎಚ್‌.ಡಿ.ರೇವಣ್ಣ (HD Revanna) ಅವರು ಹೊಳೆನರಸೀಪುರ ಅವರ ಪಾಲಿಗೆ ರಾಜ್ಯವಾಗಿದೆ. ಜಿಲ್ಲೆ ಸಂಪೂರ್ಣ ಅಭಿವೃದ್ಧಿಯಾಗಿದೆ ಎಂದು ಸಂತೆ ಭಾಷಣ ಬರೆದುಕೊಂಡು ಓದುವ ಬದಲು ನೀರಾವರಿಗೆ ಇವರ ಕೊಡುಗೆ ಏನು ಎಂದು ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.

ರಣ ಘಟ್ಟ ಯೋಜನೆ ಬಿಎಸ್‌ವೈ ಕೊಡುಗೆ: ಶಾಸಕ ಕೆ.ಎಸ್‌.ಲಿಂಗೇಶ್‌ (S Lingesh) ಅವರು ರಣಘಟ್ಟಯೋಜನೆ ತಮ್ಮ ಹಾಗೂ ಪಕ್ಷದ ಶ್ರಮ ಕಾರಣ ಎನ್ನುತ್ತಾರೆ. ಆದರೆ ರಣಘಟ್ಟಯೋಜನೆ ಬಜೆಟ್‌ನಲ್ಲಿ ಮಂಜೂರು ಮಾಡಿದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (BS Yediyurappa) ಅವರು. ಮಾಜಿ ಸಚಿವ ಸಿ.ಟಿ.ರವಿ (Ct Ravi) ಹಾಗೂ ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ್‌ ನೀರಾವರಿ ಸಚಿವರ ಪಾತ್ರ ಹೆಚ್ಚಾಗಿದ್ದು ಜೆಡಿಎಸ್‌ ಸಾಧನೆ ಶೂನ್ಯವಾಗಿದೆ ಎಂದು ಹೇಳಿದರು.

ಮತ್ತೆ ಪುರಸಭೆ ಫಲಿತಾಂಶ ಮರುಕಳಿಸಬಾರದು: ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ್‌ ಮಾತನಾಡಿ, ಈ ಬಾರಿ ನಡೆದ ಪುರಸಭೆ ಚುನಾವಣೆಯಲ್ಲಿ ಬಿಜೆಪಿ 1 ಸ್ಥಾನ ಪಡೆದಿದ್ದರು ಒಟ್ಟಾರೆ ಮತ ಗಳಿಕೆಯಲ್ಲಿ ಜೆಡಿಎಸ್‌ ಅತಿಹೆಚ್ಚಿನ ಹಿನ್ನಡೆ ಕಂಡಿದೆ . 3ವಾರ್ಡ್‌ ಗಳಲ್ಲಿ ಬಿಜೆಪಿಯು ಅತ್ಯಂತ ಕಡಿಮೆ ಅಂತರದಿಂದ ಸೋತಿದೆ . ಮುಂಬರುವ ಜಿಪಂ ತಾಪಂ ಚುನಾವಣೆಗಳಲ್ಲಿ ಮತ್ತೆ ಪುರಸಭೆಯ ಫಲಿತಾಂಶ ಮರುಕಳಿಸಬಾರದು ಎಂದು ಹೇಳಿದರು.

ಹಳೇಬೀಡು ಮಾದಿಹಳ್ಳಿ ಹೋಬಳಿಗೆ ಶಾಶ್ವತ ನೀರಾವರಿ ಒದಗಿಸುವ ರಣಘಟ್ಟ ಯೋಜನೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದರು. ಆದರೆ ಈಗ ಜೆಡಿಎಸ್‌ ಶಾಸಕ ತಮ್ಮ ಸಾಧನೆ ಎಂದು ಬಿಂಬಿಸಿ ಓಡಾಡುತ್ತಿದ್ದಾರೆ. ಮುಂದಿನ ವಾರ ನಡೆಯಲಿರುವ ರಣಘಟ್ಟಯೋಜನೆಗೆ ಶಂಕುಸ್ಥಾಪನಾ ಸಮಾರಂಭಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಆಗಮಿಸುವ ಮೂಲಕ ಇದು ಬಿಜೆಪಿ ಸರ್ಕಾರದ ಯೋಜನೆ ಎಂಬುದನ್ನು ಜೆಡಿಎಸ್‌ಗೆ ಮನದಟ್ಟು ಮಾಡಿಸಬೇಕು ಎಂದರು.

ಸಿದ್ದು ಜೆಡಿಎಸ್‌ಗೆ ಯಾಕೆ ವಲಸೆ ಬಂದಿದ್ದು?:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಲಿತರ ಶಾಸಕರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿರುವುದು ದಲಿತ ಶಾಸಕರ ಮೇಲೆ ಅವರಿಗಿರುವ ದ್ವೇಷವನ್ನು ತೋರಿಸುತ್ತದೆ . ಸಿದ್ದರಾಮಯ್ಯನವರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ (Congress) ವಲಸೆ ಬಂದಿದ್ದು ಯಾವ ಕಾರಣಕ್ಕೆ ಎಂಬುದನ್ನು ಯೋಚಿಸಬೇಕು. ಬಿಜೆಪಿಗೆ ವಲಸೆ ಬಂದಿರುವ ಶಾಸಕರು ನರೇಂದ್ರ ಮೋದಿ (Narendra Modi) ಅವರ ಸಾಧನೆ ನೋಡಿ ಬಂದಿದ್ದಾರೆ. ಹೊರತು ನಿಮ್ಮಂತೆ ಅಸ್ತಿತ್ವ ಉಳಿಸಿಕೊಳ್ಳಲು ಅಲ್ಲ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಎಂಎಲ್ಸಿ ಮುನಿರಾಜೇಗೌಡ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬೆಣ್ಣೂರು ರೇಣುಕುಮಾರ್‌, ತಾಲೂಕು ಅಧ್ಯಕ್ಷ ಅಡಗೂರು ಆನಂದ್‌, ಮಾಜಿ ಅಧ್ಯಕ್ಷ ಕೊರಟಿಕೆರೆ ಪ್ರಕಾಶ್‌, ಯುವ ಮೋರ್ಚಾ ಅಧ್ಯಕ್ಷ ನಂದಕುಮಾರ್‌, ಪುರಸಭೆ ಸದಸ್ಯ ಪ್ರಭಾಕರ್‌ ಸೇರಿದಂತೆ ಬಿಜೆಪಿಯ ಮುಖಂಡರು ಹಾಜರಿದ್ದರು.

ಚುನಾವಣೆ ಸಂದರ್ಭದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ ಪಕ್ಷದಲ್ಲಿ ಅವರ ಕಾಣಿಕೆ ಸಂಘಟನೆಯ ಶಕ್ತಿ ಏನು ಎಂಬುದರ ಮೇಲೆ ಟಿಕೆಟ್‌ ಕೊಡಲಾಗುತ್ತದೆ. ತಾವು ಚುನಾವಣೆಗೆ ಸ್ಪಧಿ​ರ್‍ಸುವಾಗ ಹತ್ತು ಮಂದಿ ಆಕಾಂಕ್ಷಿಗಳು ಇದ್ದರು. ಆದರೆ ಅಂತಿಮವಾಗಿ ತಮಗೆ ಟಿಕೇಟ್‌ ದೊರಕಿದ್ದು ನಿಜವಾದ ಸಂಘಟಕನನ್ನು ಪಕ್ಷ ಗುರುತಿಸುತ್ತದೆ.

- ಪ್ರೀತಂ ಜೆ.ಗೌಡ ಶಾಸಕ ಹಾಸನ