Asianet Suvarna News Asianet Suvarna News

ಸ್ತ್ರೀಯರಿಗೆ 35 ಕ್ಷೇತ್ರಗಳಲ್ಲಿ ಜೆಡಿಎಸ್‌ ಟಿಕೆಟ್‌ : ಹಲವು ಕ್ಷೇತ್ರಗಳಿಗೆ ಸೆಲೆಕ್ಷನ್ ಫೈನಲ್

  • ಜೆಡಿಎಸ್‌ ಮಹಿಳಾ ಘಟಕಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ
  • 2023ರ ಚುನಾವಣೆಯಲ್ಲಿ 30-35 ವಿಧಾನಸಭೆ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್‌ ಮೀಸಲು
35 Tickets Reserved For ladies in JDS For Next Karnataka assembly election snr
Author
Bengaluru, First Published Sep 30, 2021, 8:29 AM IST
  • Facebook
  • Twitter
  • Whatsapp

ರಾಮನಗರ (ಸೆ.30): ಜೆಡಿಎಸ್‌ (JDS) ಮಹಿಳಾ ಘಟಕಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಿಳಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) 2023ರ ಚುನಾವಣೆಯಲ್ಲಿ 30-35 ವಿಧಾನಸಭೆ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್‌ (Ticket) ಮೀಸಲು ಇಡುತ್ತೇವೆ ಎಂದು ಘೋಷಿ​ಸಿದ್ದಾರೆ.

ಬುಧ​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಈಗಾಗಲೇ ಮೊದಲ ಹಂತದಲ್ಲಿ 7-8 ಜನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಮಹಿಳೆಯರಿಗೂ ಹೆಚ್ಚಿನ ಶಕ್ತಿ ತುಂಬಲು ಈ ಬಾರಿ 30-35 ಸೀಟುಗಳನ್ನು ಮೀಸ​ಲಿ​ಡ​ಲಾ​ಗು​ವುದು ಎಂದರು.

ಕುಮಾರಸ್ವಾಮಿಗೆ ಸಲಹೆ ನೀಡಿದ ಅನಿತಾ : ಬೇಡಿಕೆಗಳ ಪಟ್ಟಿ ಇಟ್ಟ ಶಾಸಕಿ

ಬಿಜೆಪಿ, ಕಾಂಗ್ರೆಸ್‌ (congress) ಪಕ್ಷಗಳಿಗೆ ಹೋಲಿಕೆ ಮಾಡಿದರೆ ನಮ್ಮ ಮಹಿಳಾ ಘಟಕ ಸ್ವಲ್ಪ ಹಿಂದೆ ಉಳಿದಿದೆ. ಇದನ್ನು ಸರಿ ಮಾಡುವ ಕೆಲಸ ಮಾಡಲಾಗುವುದು. ಮಹಿಳಾ ಘಟಕಕ್ಕೆ (women wing) ಹೆಚ್ಚಿನ ಶಕ್ತಿ ತುಂಬುವ ಕೆಲಸವನ್ನು ಈ ಕಾರ್ಯಾಗಾರದಿಂದ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದರು.

ಮಹಿಳಾ ಪ್ರತಿ​ನಿ​ಧಿ​ಗ​ಳಿಗೂ ಟಾಸ್ಕ್ :

ಬೂತ್‌ ಮಟ್ಟದಿಂದ ಮಹಿಳಾ ಘಟಕಕ್ಕೆ ಶಕ್ತಿ ತುಂಬುವ ಟಾಸ್ಕ್ ಕೊಡಲಾಗುವುದು. ಮಹಿಳಾ ಘಟಕದ ಸದಸ್ಯರಿಗೆ ಪಕ್ಷ ಹಾಗೂ ಚುನಾವಣೆಗಾಗಿ ಒಂದು ದಿಕ್ಸೂಚಿ ನಿಗದಿ ಮಾಡಲಾಗುವುದು. 30 ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದಿರುವ ಮಹಿಳಾ ಸದಸ್ಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿ​ದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಕರ್ನಾಟಕದಿಂದಲೇ ಮಹಿಳಾ ಮೀಸಲಾತಿಗೆ (Reservation) ಧ್ವನಿ ಎತ್ತುವ ಕೆಲಸ ನಾವು ಮಾಡುತ್ತೇವೆ. 2023ರಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ​ಶೇ.33 ಮೀಸಲಾತಿ ವಿಧೇಯಕಕ್ಕೆ ಜೀವ ತುಂಬುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

ಮಹಿಳಾ ಕಾರ್ಯಾಗಾರದಲ್ಲಿ ಪಂಚರತ್ನ ಪಾಠ:

ಜನತಾ ಪರ್ವ 1.0 ಹಾಗೂ ಜೆಡಿ​ಎಸ್‌ ಮಿಷನ್‌ -123 ಕಾರ್ಯಾ​ಗಾರದ ಎರಡನೇ ದಿನ ಜೆಡಿಎಸ್‌ ಜನಪ್ರತಿನಿಧಿಗಳಿಗೆ ಪಕ್ಷದ ‘ಪಂಚರತ್ನ’ ಕಾರ್ಯಕ್ರಮಗಳ ಬಗ್ಗೆ ಶಿಕ್ಷಕರಂತೆ ಪಾಠ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೂರನೇ ದಿನ​ ಮಹಿಳಾ ಪ್ರತಿ​ನಿ​ಧಿ​ಗಳಿಗೂ ಪಂಚ​ರತ್ನ ಕಾರ್ಯ​ಕ್ರ​ಮ​ಗಳ ಕುರಿತು ಮತ್ತೊಂದು ಪ್ರಾತ್ಯಕ್ಷಿಕೆ ನೀಡಿ ವಿವರಿಸಿದರು. ಮಂಗಳವಾರ ವೇದಿ​ಕೆ​ಯಲ್ಲಿ ಎಲ್‌ ಇಡಿ (LED) ಪರ​ದೆಯ ಮೇಲೆ ಮೂಡಿದ ಗ್ರಾಫಿಕ್ಸ್‌ ಮೂಲಕ ​ಕು​ಮಾ​ರ​ಸ್ವಾ​ಮಿ​ರ​ವರು, ರಾಜ್ಯದ ಎಲ್ಲಾ ಜಿಲ್ಲೆ​ಗ​ಳಿಂದ ಆಗ​ಮಿ​ಸಿದ್ದ 300ಕ್ಕೂ ಹೆಚ್ಚು ಮಹಿಳಾ ಪ್ರತಿ​ನಿ​ಧಿ​ಗ​ಳಿಗೆ ಪಕ್ಷ ಸಂಘ​ಟನೆ, ಮುಂದಿನ ಚುನಾ​ವಣೆ ಕಾರ್ಯ​ತಂತ್ರ, ಸವಾ​ಲು​ಗಳನ್ನು ಎದು​ರಿ​ಸು​ವುದು ಸೇರಿ​ದಂತೆ ಪ್ರಮುಖ ವಿಷ​ಯ​ಗಳ ಬಗ್ಗೆ ಒಂದು ಗಂಟೆಗೂ ಹೆಚ್ಚು ಕಾಲ ಪಾಠ ಮಾಡಿ​ದ​ರು. ಮಹಿಳಾ ಪ್ರತಿನಿಧಿಗಳೂ ವಿದ್ಯಾರ್ಥಿನಿಯರಂತೆ ತದೇಕಚಿತ್ತದಿಂದ ಆಲಿಸಿದರು.

ದೇವದುರ್ಗದ ಅಭ್ಯರ್ಥಿ ಕರಿಯಮ್ಮ

2023ರ ವಿಧಾನಸಭಾ ಚುನಾವಣೆಯಲ್ಲಿ ದೇವದುರ್ಗ ವಿಧಾನ ಸಭಾ ಕ್ಷೇತ್ರದಿಂದ ಕರಿಯಮ್ಮ(Kariyamma) ಅವರನ್ನು ಜೆಡಿಎಸ್‌ ಅಭ್ಯರ್ಥಿ ಎಂದು ವಿಧಾನ ಮುಂದಿನ ಅಭ್ಯರ್ಥಿ ಎಂದು ಎಂದು ಎಚ್‌.ಡಿ.ಕುಮಾ​ರ​ಸ್ವಾಮಿ ಜೆಡಎಸ್‌ ಮಹಿಳಾ ಕಾರ್ಯಾಗಾರದ ವೇದಿ​ಕೆ​ಯ​ಲ್ಲಿಯೇ ಘೋಷಣೆ ಮಾಡಿದರು. ಕರಿ​ಯಮ್ಮ ಬಡ ಕುಟುಂಬದಿಂದ ಬಂದವರು. ಆದರೆ ಜನಬಲವಿದೆ. ಅವರ ಗೆಲುವಿಗೆ ಎಲ್ಲಾ ಸಹಕಾರ ಕೊಡಲಾಗುವುದು ಎಂದ​ರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಸ್ಪರ್ಧಾಕಾಂಕ್ಷಿಯಾಗಿದ್ದ ಕರಿಯಮ್ಮ ಕಡೇಕ್ಷಣದಲ್ಲಿ ಟಿಕೆಟ್‌ ಕೈತಪ್ಪಿದ್ದರಿಂತ ಪಕ್ಷೇತರವಾಗಿ ಸ್ಪರ್ಧಿಸಿ ಸೋತಿದ್ದರು. ಆ ಬಳಿಕ ಮತ್ತೆ ಜೆಡಿಎಸ್‌ ಪಾಳಯವನ್ನು ಸೇರಿರುವ ಅವರು ಕ್ಷೇತ್ರದಲ್ಲಿ ಪಕ್ಷದ ಬಲ ಸಂವರ್ಧನೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

Follow Us:
Download App:
  • android
  • ios