ಲಾಕ್‌ಡೌನ್ ಎಫೆಕ್ಟ್: ಪ್ರವಾಸಿ ಗೈಡ್‌ಗಳ ಆದಾಯಕ್ಕೂ ಸೋಂಕು..!
ಪ್ರವಾಸಿ ಗೈಡ್‌ಗಳ ಮೇಲೆ ಕೋವಿಡ್ ಕರಾಳತೆ| ಆಗ ಪ್ರವಾಹ, ಈಗ ಕೊರೋನಾದಿಂದಾಗಿ ಪ್ರವಾಸಿ ಗೈಡ್ ಜೀವನ ಭಾರಿ ದುಸ್ತರ| ಪ್ರವಾಸಿ ತಾಣಗಳು ಬಂದ್ ಆಗಿರುವುದರಿಂದ ಮಾರ್ಗದರ್ಶನ ನೀಡುವವರ ಬದುಕು ಬಹಳಷ್ಟು ಗಂಭೀರ|
ಶಂಕರ ಕುದರಿಮನಿ
ಬಾದಾಮಿ(ಮೇ.29): ಕೊರೋನಾ ಹರಡುವಿಕೆ ತಡೆಗೆ ಕೇಂದ್ರ ಸರ್ಕಾರ ಲಾಕ್‌ಡೌನ್ ಮಾಡಿತು. ಇದೀಗ ಲಾಕ್‌ಡೌನ್ ನಿಯಮಗಳನ್ನು ಸಡಿಲ ಮಾಡಿದ್ದು, ಆರ್ಥಿಕ ಚಟುವಟಿಕೆಗಳು ಈಗ ಒಂದೊಂದೆಯಾಗಿ ಮರು ಆರಂಭಿಸಿವೆ. ಆದರೆ, ದಿನಗೂಲಿಯನ್ನೇ ಅವಲಂಬಿಸಿದ ಬಡವರ ಬದುಕು ಮಾತ್ರ ಹೇಳತೀರದ್ದಾಗಿತ್ತು. ಹೀಗಾಗಿ ಎರಡು ತಿಂಗಳಿಂದ ಉಂಟಾಗಿದ್ದ ಲಾಕ್‌ಡೌನ್ ವೇಳೆ ಅವರು ಕಳೆದ ಕಠಿಣ ಜೀವನ ಈಗ ಸ್ವಲ್ಪ ನಿರಾಳತೆಯತ್ತ ಸಾಗುತ್ತಿದೆ.
ಅವರ ಬದುಕು ಮೊದಲಿನಂತೆ ಆಗಬೇಕಾದರೆ ಇನ್ನೂ ಎಷ್ಟುದಿನಗಳು ಬೇಕಾಗಬಹುದು ಎಂಬುವುದು ಈಗಲೇ ಹೇಳುವುದು ಕಠಿಣ. ಇಂತಹವರ ಸಾಲಿಗೆ ಈಗ ಪ್ರವಾಸಿ ತಾಣಗಳ ಪ್ರವಾಸಿ ಮಾರ್ಗದರ್ಶಕರೂ ಸೇರಿಕೊಂಡಿದ್ದಾರೆ. ಚಾಲುಕ್ಯರ ನಾಡು ಬಾದಾಮಿ, ಪಟ್ಟದಕಲ್ಲು, ಐಹೊಳೆ, ಮಹಾಕೂಟ, ಬನಶಂಕರಿ ದೇವಾಲಯ, ಶಿವಯೋಗಮಂದಿರದಲ್ಲಿ 36 ಪ್ರವಾಸಿ ಮಾರ್ಗದರ್ಶಕರು ಇದರಿಂದಲೇ ತಮ್ಮ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದರು. ಆದರೆ, ಕೊರೋನಾ ಬಂದಿದ್ದರಿಂದ ದೇಶ, ವಿದೇಶದಿಂದ ಬರುವ ಪ್ರವಾಸಿಗರು ಬರುವುದು ಸಂಪೂರ್ಣ ಸ್ಥಗಿತಗೊಂಡಿತು. ಇದರಿಂದಾಗಿ ನಿತ್ಯ ಜೀವನಕ್ಕೆ ಏನು ಮಾಡಬೇಕು ಎಂದು ಮಾರ್ಗದರ್ಶಕರಿಗೆ ತೋಚದಂತಾಯಿತು.
ಬಾದಾಮಿ: ಕೊರೋನಾಗೆ ಕೊಚ್ಚಿ ಹೋದ ಕುಂಚಿಕೊರವರ ಬದುಕು
ಪ್ರವಾಸಿ ಋುತುಮಾನದಲ್ಲಿ ಹೆಚ್ಚು ಗಳಿಕೆ:
ಚಾಲುಕ್ಯರ ನಾಡು ಬಾದಾಮಿ ತಾಲೂಕಿನಲ್ಲಿ ನಾನಾ ಐತಿಹಾಸಿಕ ಪ್ರವಾಸಿ ತಾಣಗಳಿವೆ. ಸಾಮಾನ್ಯವಾಗಿ ಅಕ್ಟೋಬರ್ ಮಧ್ಯಭಾಗದಿಂದ ಫೆಬ್ರುವರಿ ತನಕ ಪ್ರವಾಸಕ್ಕೆ ಹೇಳಿ ಮಾಡಿಸಿದ ಋುತುಮಾನ. ಈ ಸಂದರ್ಭದಲ್ಲಿ ಪ್ರವಾಸಿ ಮಾರ್ಗದರ್ಶಿಗಳಿಗೆ ಬಿಡುವಿಲ್ಲದ ಕೆಲಸ. ಶಾಲಾ ಮಕ್ಕಳು, ದೇಶ, ವಿದೇಶದ ಪ್ರವಾಸಿಗಳು ಹೆಚ್ಚಾಗಿ ಬರುತ್ತಾರೆ. ಪ್ರವಾಸಿ ಋುತುಮಾನದಲ್ಲಿ 150ರಿಂದ 500 ತನಕ ಮಾರ್ಗದರ್ಶಕರು ಸಂಭಾವನೆ ಪಡೆಯುತ್ತಾರೆ. ಆದರೆ, ಕೊರೋನಾ ದಾಳಿ ಮಾಡಿದ್ದರಿಂದಾಗಿ ಇಡೀ ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಲಾಯಿತು. ಇದರಿಂದಾಗಿ ಇದರಿಂದಲೇ ಉಪಜೀವನ ನಡೆಸುತ್ತಿದ್ದ ಸುಮಾರು 36 ಪ್ರವಾಸಿ ಮಾರ್ಗದರ್ಶಿಗಳ ಬದುಕಿನ ಮೇಲೂ ಪರಿಣಾಮ ಬೀರಿತು. ಪ್ರವಾಸಿ ಋುತುಮಾನ ಕಳೆದಿದ್ದರೂ ಇಂತಹ ಸಂದರ್ಭದಲ್ಲಿ ಯಾವುದೇ ದುಡಿಮೆ ಇಲ್ಲದೆ ಮನೆಯಲ್ಲಿಯೇ ಖಾಲಿ ಕೂಡುವಂತಾಯಿತು.
ಪ್ರವಾಹ ಆಯ್ತು ಈಗ ಕೊರೋನಾ:
2019-20ನೇ ವರ್ಷ ಪ್ರವಾಸಿ ಮಾರ್ಗದರ್ಶಿಗಳ ಪಾಲಿಕೆ ಕರಾಳ ವರ್ಷವಾಗಿದೆ. 2019ರಲ್ಲಿ ಎಂದೂ ಕಂಡು ಕೇಳರಿದಯಂತೆ ಪ್ರವಾಹ ಪರಿಸ್ಥಿತಿ ತಲೆದೋರಿತು. ಇದರಿಂದಾಗಿ ರಸ್ತೆಗಳು, ಪ್ರವಾಸಿಗಳ ತಾಣಗಳು ಮುಳುಗಡೆಯಾದವು. ಇದರಿಂದಾಗಿ ಸಹಜವಾಗಿ ಇತ್ತ ಪ್ರವಾಸಿಗರ ಸಂಖ್ಯೆಯಲ್ಲಿಯೂ ಇಳಿಮುಖಗೊಂಡಿತು. ಅಲ್ಲದೆ, ಪ್ರವಾಹದಿಂದಾಗಿ ರಸ್ತೆಗಳೆಲ್ಲವೂ ಕೊಚ್ಚಿ ಹೋಗಿದ್ದರಿಂದ ಪ್ರವಾಸಿಗರು ಇತ್ತ ಹೆಚ್ಚು ತಲೆ ಹಾಕಲಿಲ್ಲ ಎಂಬುವುದು ಪ್ರವಾಸಿ ಮಾರ್ಗದರ್ಶಿಗಳ ನೋವು.
ಇವೆಲ್ಲದರ ನಡುವೆ ಈಗ ಕೊರೋನಾ ದಾಳಿ ನಡೆಸಿದೆ. ರಾಜ್ಯದ ಇತಿಹಾಸವನ್ನು ದೇಶ, ವಿದೇಶದ ಪ್ರವಾಸಿಗಳಿಗೆ ತಿಳಿ ಹೇಳುವ ಕೆಲಸ ಮಾಡುತ್ತಿದ್ದ ಪ್ರವಾಸಿ ಮಾರ್ಗದರ್ಶಿಗಳ ಬದುಕು ಎರಡೂ ಅವಧಿಯಲ್ಲಿ ಕೊಚ್ಚಿ ಹೋಗಿದೆ. ಪ್ರವಾಸಿಗರು ನೀಡಿದ ಸಂಭಾವನೆಯಿಂದಲೇ ಇವರ ಜೀವನ ನಿರ್ವಹಣೆ ಆಗಬೇಕಿದೆ. ಕೊರೋನಾದಂತಹ ಸಂದರ್ಭದಲ್ಲಿಯಾದರೂ ಸರ್ಕಾರ ಸಹಾಯಕ್ಕೆ ಬರಬೇಕಿತ್ತು. ಅಗತ್ಯ ನೆರವನ್ನೂ ನೀಡಬೇಕಿತ್ತು ಎಂಬುವುದು ಇವರ ವಾದ. ಆದರೆ, ಇದು ಎಷ್ಟರಮಟ್ಟಿಗೆ ಅನುಕೂಲವಾಗಲಿದೆ ಎಂಬುವುದು ಮಾತ್ರ ತಿಳಿಯದ ವಿಚಾರ.
ಮೂದಲಿನಿಂದಲೂ ಪ್ರವಾಸಿ ಮಾರ್ಗದರ್ಶಕರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯವಿಲ್ಲ. ಅವರು ತಮ್ಮ ಸ್ವಂತ ದುಡಿಮೆಯಿಂದ ನಗರಕ್ಕೆ ಆಗಮಿಸುವ ಪ್ರವಾಸಿಗರು ನೀಡಿದ ಗೌರವಧನವನ್ನೇ ಸ್ವೀಕರಿಸಿ ಮಾಹಿತಿ ನೀಡುತ್ತಿದ್ದರು. ಆದರೆ ಎಂದು ಪುರಾತತ್ವ ಇಲಾಖೆ ಅಧಿಕಾಪ್ರವಾಸಿ ತಾಣಗಳು ಬಂದ್ ಆಗಿರುವುದರಿಂದ ಮಾರ್ಗದರ್ಶನ ನೀಡುವವರ ಬದುಕು ಬಹಳಷ್ಟು ಗಂಭೀರವಾಗಿದೆ ರಿ ಪ್ರಶಾಂತ ಕುಲಕರ್ಣಿ ಹೇಳಿದ್ದಾರೆ.
ಕಳೆದ 20 ವರ್ಷಗಳಿಂದ ಐತಿಹಾಸಿಕ ಬಾದಾಮಿ ಪಟ್ಟದಕಲ್ಲು ಐಹೊಳೆ ನಗರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ನಾನು ಪ್ರವಾಸಿ ಮಾರ್ಗದರ್ಶನ ನೀಡುತ್ತಾ ಬಂದಿದ್ದೇನೆ. ಹಾಗೆಯೇ ನನ್ನ ಜೊತೆಯಲ್ಲಿ ಇದೆ ರೀತಿ 36 ಜನ ಮಾರ್ಗದರ್ಶಕರು ಇದರಿಂದ ಜೀವನ ಸಾಗಿಸುತ್ತಿದ್ದರು. ಆದರೆ ಲಾಕ್‌ಡೌನ್ ಆದಮೇಲೆ ನಗರಕ್ಕೆ ಪ್ರವಾಸಿಗರ ಆಗಮನ ಇಲ್ಲದಿರುವುದಕ್ಕೆ ನಮ್ಮ ಜೀವನ ಸಾಗಿಸುವುದು ಕಷ್ಟವಾಗಿದೆ. ಸರ್ಕಾರದಿಂದ ನಮಗೆ ಯಾವುದೆ ಗೌರವ ಧನವಾಗಲಿ ಸಿಗುವುದಿಲ್ಲ ಎಂದು ಬಾಗಲಕೋಟೆ ಜಿಲ್ಲಾ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಅಧ್ಯಕ್ಷ ರಾಜು ಕಲ್ಮಠ ಅವರು ತಿಳಿಸಿದ್ದಾರೆ.