Asianet Suvarna News Asianet Suvarna News

ನ್ಯೂ ಇಯರ್ ಸೆಲೆಬ್ರೇಷನ್‌ ಗೆ ಚಿತ್ರದುರ್ಗದ ಏಳು ಸುತ್ತಿನ ಕೋಟೆ ಕಲರ್ ಫುಲ್ ಮಯ

ಹೊಸ ವರ್ಷಾಚರಣೆಗೆ ಜನರು ವಿವಿಧ ಪ್ರವಾಸಿ ತಾಣಗಳಿಗೆ ತೆರಳೋದು ವಾಡಿಕೆ. ಆದ್ರೆ ರೂಂಪಾತರಿ ಕೊರೊನಾದಿಂದಾಗಿ ಬೇರೆಡೆ ಕೆಲ ಪ್ರವಾಸಿತಾಣಗಳು ಬಂದ್ ಆಗಿವೆ. ಆದ್ರೆ ಚಿತ್ರದುರ್ಗ‌ದ ಕಲ್ಲಿನ ಕೋಟೆಯಲ್ಲಿಂದು ಪ್ರವಾಸಿಗರು ಸಡಗರ ಸಂಭ್ರಮದಿಂದ ಕೇಕ್ ಕತ್ತರಿಸಿ ಹೊಸವರ್ಷವನ್ನು ಸ್ವಾಗತಿಸಿದ್ರು.  

tourist celebrate new year 2024 in Chitradurga Fort gow
Author
First Published Jan 1, 2024, 5:37 PM IST

ವರದಿ:‌ ಕಿರಣ್ಎಲ್ ‌ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜ.1): ಹೊಸ ವರ್ಷಾಚರಣೆಗೆ ಜನರು ವಿವಿಧ ಪ್ರವಾಸಿ ತಾಣಗಳಿಗೆ ತೆರಳೋದು ವಾಡಿಕೆ. ಆದ್ರೆ ರೂಂಪಾತರಿ ಕೊರೊನಾದಿಂದಾಗಿ ಬೇರೆಡೆ ಕೆಲ ಪ್ರವಾಸಿತಾಣಗಳು ಬಂದ್ ಆಗಿವೆ. ಹೀಗಾಗಿ ಯಾವುದೇ ಹೊಸ ನಿರ್ಭಂಧವಿಲ್ಲದೇ ಓಪನ್ ಇರುವ ಚಿತ್ರದುರ್ಗ‌ದ ಕಲ್ಲಿನ ಕೋಟೆಯಲ್ಲಿಂದು ಪ್ರವಾಸಿಗರು ಸಡಗರ ಸಂಭ್ರಮದಿಂದ ಕೇಕ್ ಕತ್ತರಿಸಿ ಹೊಸವರ್ಷವನ್ನು ಸ್ವಾಗತಿಸಿದ್ರು.  

ಚಿತ್ರದುರ್ಗ ಎಂದಾಕ್ಷಣ ತಟ್ಟನೆ ನೆನಪಾಗೋದು  ಏಳು ಸುತ್ತಿನ ಕೋಟೆ. ಆ ಕಲ್ಲಿನ ಕೋಟೆಗಿಂದು ಪ್ರವಾಸಿರ ದಂಡೇ ಹರಿದು ಬಂದಿತ್ತು. ಸಕುಟುಂಬ ಸಮೇತರಾಗಿ ಚಿಕ್ಕ ಚಿಕ್ಕ ಮಕ್ಕಳು,ಸ್ನೇಹಿತರು ಹಾಗು ಸಂಬಂಧಿಗಳೊಂದಿಗೆ ಆಗಮಿಸಿದ್ದ ಪ್ರವಾಸಿಗರು, ಕೋಟೆಯಲ್ಲಿ ಅಪಾರ‌ಜನಸ್ಥೋಮದ ನಡುವೇ ಕೇಕ್ ಕತ್ತರಿಸಿ ಸಡಗರ, ಸಂಭ್ರಮದಿಂದ  2022ಕ್ಕೆ ಗುಡ್ ಬೈ ಹೇಳಿ 2023 ನ್ನು ಸ್ವಾಗತಿಸಿದ್ರು. ಅಲ್ದೇ ಹೊರರಾಜ್ಯ, ಹೊರಜಿಲ್ಲೆ  ಸೇರಿದಂತೆ ವಿವಿದೆಡೆಗಳಿಂದಲೂ ಗುಂಪು ಗುಂಪಾಗಿ ಬಂದಿದ್ದ ಪ್ರವಾಸಿಗರು ಸಡಗರ ಸಂಭ್ರಮದಿಂದ ಹೊಸವರ್ಷಾಚರಣೆ ಮಾಡಿದ್ರು.

ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಮೊದಲ ಸರ್ಕಾರಿ ಪ್ರೀಮಿಯಂ ಮದ್ಯ ಮಾರಾಟ ಮಳಿಗೆ ಉದ್ಘಾಟನೆ

 ಇನ್ನು ನೂತನ ವರ್ಷಾಚರಣೆಗೆ ಎಲ್ಲರೂ ಹೈಟೆಕ್ ಸಿಟಿಗಳತ್ತ ಮುಖಮಾಡ್ತಾರೆ. ಆದ್ರೆ ಇಲ್ಲಿನ ಸ್ಥಳಿಯರು,ಏಳುಸುತ್ತಿನ ಕೋಟೆಯಲ್ಲಿ ಹೊಸ ವರ್ಷ ಆಚರಣೆ ಮಾಡುವ ಮೂಲಕ ಸ್ವಲ್ಪ ಡಿಫರೆಂಟ್ ಆಗಿ ನೂತನ ವರ್ಷವನ್ನು ಬರಮಾಡಿಕೊಂಡ್ರು. ಅಲ್ದೇ ಆಕರ್ಷಕ ಕಲ್ಲಿನ ಮದ್ಯೆ ನಿಂತು ಸೆಲ್ಫಿನಕ್ಲಿಕ್ಕಿಸಿಕೊಂಡ  ಪ್ರವಾಸಿಗರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿಯಲ್ಲಿ 300 ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ

ಒಟ್ಟಾರೆ ಕಲ್ಲಿನ ಕೋಟೆಯಲ್ಲಿ  ಅಪಾರ ಜನಸ್ಥೋಮದ ಮಧ್ಯೆ ಕೇಕ್ ಕತ್ತರಿಸಿದ ಪ್ರವಾಸಿಗರು 2023ಕ್ಕೆ ಗುಡ್ ಬೈ ಹೇಳಿ, 2024 ಕ್ಕೆ ಹಾಯ್ ಹೇಳುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದರು. ಈ ವೇಳೆ ಅವರ ಆಚರಣೆಯ ಆಕರ್ಷಕ ದೃಶ್ಯಗಳು ಎಲ್ಲರ ಕಣ್ಮನ ಸೆಳೆದವು. 

Follow Us:
Download App:
  • android
  • ios