Asianet Suvarna News Asianet Suvarna News

ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿಯಲ್ಲಿ 300 ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ

ಭಾರತ ಸರ್ಕಾರದ ಮಾಲೀಕತ್ವದಲ್ಲಿ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್  ರು. 17,644 ಕೋಟಿಗಿಂತ ಹೆಚ್ಚಿನ ಪ್ರೀಮಿಯಂ ಹೊಂದಿದೆ. ಇಲ್ಲಿ ಖಾಲಿ ಇರುವ 300 ಸಹಾಯಕರ ಹುದ್ದೆಯ ನೇಮಕಾತಿಯ ಅಧಿಸೂಚನೆ ಹೊರಡಿಸಿದೆ.

UIIC Assistant Recruitment 2024  Notification Released for 300 Posts gow
Author
First Published Jan 1, 2024, 3:49 PM IST

ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಒಂದು ಪ್ರಮುಖ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿ. ಇದು ಭಾರತ ಸರ್ಕಾರದ ಮಾಲೀಕತ್ವದಲ್ಲಿ ರು. 17,644 ಕೋಟಿಗಿಂತ ಹೆಚ್ಚಿನ ಪ್ರೀಮಿಯಂ ಹೊಂದಿದೆ. ಇಲ್ಲಿ ಖಾಲಿ ಇರುವ 300 ಸಹಾಯಕರ ಹುದ್ದೆಯ ನೇಮಕಾತಿಯ ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಒಂದು ಪ್ರಮುಖ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಯಾಗಿದ್ದು, ಇದು ಭಾರತ ಸರ್ಕಾರದ ಮಾಲೀಕತ್ವದಲ್ಲಿ ರು. 17,644 ಕೋಟಿಗಿಂತ ಹೆಚ್ಚಿನ ಒಟ್ಟು ಪ್ರೀಮಿಯಂ ಅನ್ನು ಹೊಂದಿದೆ. ಇಲ್ಲಿ ಖಾಲಿ ಇರುವ 300 ಸಹಾಯಕರ ಹುದ್ದೆಯ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

85 ಲಕ್ಷ ಉದ್ಯೋಗ ಪ್ಯಾಕೇಜ್ ಪಡೆಯುವ ಮೂಲಕ ಇತಿಹಾಸ ಬರೆದ ಐಐಐಟಿ ವಿದ್ಯಾರ್ಥಿನಿ!

ಹುದ್ದೆಯ ವಿವರ:

ಸಹಾಯಕರು - 300 ಹುದ್ದೆ ( ಪ್ರಸ್ತುತ ಹುದ್ದೆಯು ಭಾರತದಾದ್ಯಂತ ಎಲ್ಲಾ ರಾಜ್ಯಗಳಿಗೂ ಅನ್ವಯಿಸುತ್ತಿದ್ದು, ಅದರಲ್ಲಿ ಕರ್ನಾಟಕಕ್ಕೆ 32 ಹುದ್ದೆಗಳನ್ನು ಮೀಸಲಿಡಲಾಗಿದೆ.)

ಪ್ರಮುಖ ದಿನಾಂಕಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 06-01-2024

ಅರ್ಜಿ ಶುಲ್ಕ:

ಎಸ್‌ ಸಿ/ ಎಸ್‌ ಟಿ/ಪಿಡಬ್ಲ್ಯೂಡಿ ಹೊರತುಪಡಿಸಿ ಎಲ್ಲಾ ಅಭ್ಯರ್ಥಿಗಳಿಗೆ : ರು.1000 (ಸೇವಾ ಶುಲ್ಕಗಳು ಮತ್ತು ಜಿ ಎಸ್‌ ಟಿ ಸೇರಿದಂತೆ)

ಎಸ್‌ ಸಿ/ ಎಸ್‌ ಟಿ/ ಪಿಡಬ್ಲ್ಯೂಡಿ (ಅಂಗವೈಕಲ್ಯ) ಹೊಂದಿರುವ ಅಭ್ಯರ್ಥಿಗಳಿಗೆ: ರು.250 (ಸೇವಾ ಶುಲ್ಕಗಳು ಮತ್ತು ಜಿ ಎಸ್‌ ಟಿ ಸೇರಿದಂತೆ)

ವಯಸ್ಸಿನ ಮಿತಿ (30-09-2023 ರಂತೆ):

ಕನಿಷ್ಠ ವಯಸ್ಸಿನ ಮಿತಿ: 21 ವರ್ಷಗಳು

ಗರಿಷ್ಠ ವಯಸ್ಸಿನ ಮಿತಿ: 30 ವರ್ಷಗಳು

ವೇತನ ಶ್ರೇಣಿ : ರು. 22405-1305(1)-23710-1425(2)-26560-1605(5)-34585-1855(2)-38295-2260(3)-45075-2345(2)-49765-2500(5)-62265

ನಿರುದ್ಯೋಗಿಗಳಿಗೆ 2024ರ ವರ್ಷ ಲಕ್‌, ಭಾರತದಲ್ಲಿ 3.9 ಮಿಲಿಯನ್ ಉದ್ಯೋಗ ಸೃಷ್ಟಿ

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕು ಮತ್ತು ಅಭ್ಯರ್ಥಿಗಳು ತಾವು ಆಯ್ಕೆ ಬಯಸುವ ರಾಜ್ಯದ ಪ್ರಾದೇಶಿಕ ಭಾಷೆಯನ್ನು ಓದುವ, ಬರೆಯುವ ಮತ್ತು ಮಾತನಾಡುವ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು.

ಪರೀಕ್ಷಣಾವಧಿ:

ಹೊಸದಾಗಿ ನೇಮಕಗೊಂಡ ನೌಕರರು ಕನಿಷ್ಠ 6 ಅವಧಿಗೆ ಪ್ರೊಬೇಷನ್‌ನಲ್ಲಿರುತ್ತಾರೆ. ಪರೀಕ್ಷಾ ಅವಧಿಯು ಮುಕ್ತಾಯಗೊಳ್ಳುವ ಮೊದಲು ಹೊಸದಾಗಿ ನೇಮಕಗೊಂಡ ಉದ್ಯೋಗಿಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಅಭ್ಯರ್ಥಿಗಳ ಕಾರ್ಯಕ್ಷಮತೆಯು ಕಂಪನಿಯ ನಿರೀಕ್ಷೆಯನ್ನು ಪೂರೈಸಲು ವಿಫಲವಾದರೆ, ನಿಯಮಗಳ ಪ್ರಕಾರ ಆ ಉದ್ಯೋಗಿಗಳ ಪರೀಕ್ಷಾ ಅವಧಿಯನ್ನು ವಿಸ್ತರಿಸಲಾಗುತ್ತದೆ ಮತ್ತು ಪರೀಕ್ಷಣಾವಧಿ ಮುಗಿದ ಬಳಿಕ ಅಭ್ಯರ್ಥಿಯು ಕನಿಷ್ಠ ಐದು ವರ್ಷಗಳ ಅವಧಿಗೆ ಆಯ್ಕೆಯಾದ ಸ್ಥಳದಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ.

ಆಯ್ಕೆ ವಿಧಾನ:

೧. ಅರ್ಹ ಅಭ್ಯರ್ಥಿಗಳು ನೋಂದಣಿಗೆ ಕೊನೆಯ ದಿನಾಂಕದ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

೨. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಪರೀಕ್ಷೆಗೆ ಹಾಜರಾಗಬೇಕು. ನಂತರ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಪ್ರಾದೇಶಿಕ ಭಾಷಾ ಪರೀಕ್ಷೆಗೆ ಕರೆಯಲಾಗುವುದು.

೩. ಅಭ್ಯರ್ಥಿಗಳು ಆನ್‌ಲೈನ್ ಪರೀಕ್ಷೆ ಮತ್ತು ಪ್ರಾದೇಶಿಕ ಭಾಷಾ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

ಪರೀಕ್ಷಾ ಮಾದರಿ: ಆನ್‌ಲೈನ್ ಪರೀಕ್ಷೆಯು ವಸ್ತುನಿಷ್ಠ ಪರೀಕ್ಷೆಯಾಗಿದ್ದು ರೀಸನಿಂಗ್, ಇಂಗ್ಲಿಷ್ ಭಾಷೆ, ಸಂಖ್ಯಾ ಸಾಮರ್ಥ್ಯ, ಸಾಮಾನ್ಯ ಜ್ಞಾನ/ಸಾಮಾನ್ಯ ಅರಿವು, ಕಂಪ್ಯೂಟರ್ ಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ 200 ಪ್ರಶ್ನೆಗಳಿರುತ್ತವೆ. ಪರೀಕ್ಷೆಯು ಎರಡು ಗಂಟೆಗಳ ಅವಧಿಗೆ 250 ಅಂಕಗಳಿಗೆ ನಡೆಯಲಿದೆ. ತಪ್ಪು ಉತ್ತರಕ್ಕೆ ಋಣಾತ್ಮಕ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಆನ್‌ಲೈನ್ ಪರೀಕ್ಷೆಯಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ. ಅಂತಹ ಅಭ್ಯರ್ಥಿಗಳು ಮಾತ್ರ ಪ್ರಾದೇಶಿಕ ಭಾಷಾ ಪರೀಕ್ಷೆಯಲ್ಲಿ ಅರ್ಹತೆಗೆ ಒಳಪಟ್ಟಿರುತ್ತಾರೆ.

ಪರೀಕ್ಷಾ ಕೇಂದ್ರದ ವಿವರ: ಪರೀಕ್ಷೆಯು ಭಾರತದಾದ್ಯಂತ ಇರುವ ಎಲ್ಲಾ ರಾಜ್ಯಗಳ ಪ್ರಮುಖ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ಬಳ್ಳಾರಿ, ಹುಬ್ಬಳ್ಳಿ/ಧಾರವಾಡ, ಗುಲ್ಬರ್ಗ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ, ಬಾಗಲಕೋಟ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ :  https://uiic.co.in/

Follow Us:
Download App:
  • android
  • ios