ಕೋಲಾರ(ಜೂ.18): ಟೊಮೆಟೋ ಬೆಳೆ ಏರಿಕೆಯಾಗಿದ್ದು ರೈತರ ಮೊಗದಲ್ಲಿ ಸಂತಸ ಕಂಡಿದೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ನಾಲ್ಕೈದು ದಿವಸಗಳಿಂದ 15 ಕೆಜಿ ತೂಕದ ಒಂದು ಬಾಕ್ಸ್‌ ಟೊಮೆಟೋ ಬೆಲೆ 200 ರೂಗಳಿಂದ 400 ರೂಗಳಿಗೆ ಏರಿಕೆ ಆಗಿದೆ.ಅಂಗಡಿಗಳಲ್ಲಿ ಒಂದು ಕೆ.ಜಿ.ಟೊಮೆಟೋ ಬೆಲೆ 15 ರಿಂದ 25 ರೂಪಾಯಿಗಳಾಗಿದೆ.

ವಿದೇಶಗಳಿಗೆ ಟೊಮೆಟೋ ರಫ್ತು

ಸಾಮಾನ್ಯವಾಗಿ ಜೂನ್‌ ಮೊದಲ ವಾರದಿಂದ ಟೊಮೆಟೋ ಬೆಲೆಯಲ್ಲಿ ಏರಿಕೆಯಾಗುತ್ತದೆ, ಜೂನ್‌ ತಿಂಗಳಿಂದ ಆಗಸ್ಟ್‌ ತಿಂಗಳವರೆಗೆ ಉತ್ತಮ ಬೆಲೆ ಇರುತ್ತದೆ. ಈ ಸೀಸನ್‌ನಲ್ಲಿ ಕೋಲಾರದ ಟೊಮೆಟೋ ಹೊರ ರಾಜ್ಯ ಮತ್ತು ಹೊರ ದೇಶಗಳಿಗೂ ಸಾಗಣೆ ಆಗುತ್ತದೆ, ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮಬಂಗಾಳ, ದೆಹಲಿ ಮುಂತಾದ ರಾಜ್ಯಗಳಿಗೆ ಸಾಗಣೆ ಆಗುತ್ತದೆ, ಅಲ್ಲದೆ ಪಾಕಿಸ್ತಾನ ಹಾಗು ಬಾಂಗ್ಲಾ ದೇಶಗಳಿಗೆ ಇಲ್ಲಿನ ಟೊಮೆಟೋ ರಫ್ತು ಆಗುತ್ತದೆ. ಇದರಿಂದಾಗಿ ಈ ಸೀಸನ್‌ನಲ್ಲಿ ಸ್ಥಳೀಯ ಟೊಮೆಟೋಗೆ ಉತ್ತಮ ಬೆಲೆ ಸಿಗುತ್ತದೆ.

ನಂಜನಗೂಡು ಗ್ರಾಮಾಂತರ ಪೊಲೀಸ್‌ ಠಾಣೆಗೂ ಕೊರೋನಾ ಭೀತಿ

ಮಾಚ್‌ರ್‍ ತಿಂಗಳಿನಿಂದ ಮೇ ತಿಂಗಳವರೆಗೆ ತಮಿಳುನಾಡು ಮತ್ತು ಆಂಧ್ರಪ್ರದೇಶ ಹಾಗು ಮಹಾರಾಷ್ಟ್ರ ರಾಜ್ಯಗಳಲ್ಲಿ ಟೊಮೆಟೋ ಬೆಳೆಯಲು ಕಷ್ಟವಾಗುತ್ತದೆ, ಈ ರಾಜ್ಯಗಳಲ್ಲಿ ಹೆಚ್ಚು ಬಿಸಿಲು ಇರುವುದರಿಂದ ಟೊಮೆಟೋ ಬೆಳೆಯಲು ಪೂರಕ ವಾತಾವರಣ ಇರುವುದಿಲ್ಲ ಹೀಗಾಗಿ ಕೋಲಾರ ಜಿಲ್ಲೆಯ ಈ ಅವದಿಯಲ್ಲಿ ಹೆಚ್ಚಿಗೆ ಬೆಳೆಯಲಾಗುತ್ತದೆ. ಇದರ ಜತೆಗೆ ಜೂನ್‌ ತಿಂಗಳಿನಿಂದ ಬೇರೆ ಬೇರೆ ರಾಜ್ಯಗಳಲ್ಲಿ ಮುಂಗಾರು ಮಳೆ ಬೀಳುವುದರಿಂದ ಮಳೆಯಿಂದ ಬೆಳೆಗಳಿಗೆ ಹಾನಿ ಆಗುತ್ತದೆ ಇದರಿಂದಲೂ ಕೋಲಾರದ ಟೊಮೆಟೋಗೆ ಹೆಚ್ಚಿನ ಬೆಲೆ ಸಿಗುತ್ತದೆ ಎಂದು ಟೊಮೆಟೋ ವ್ಯಾಪಾರಿಗಳು ಹೇಳುತ್ತಾರೆ.

ಈ ಬಾರಿ ಬಿಸಿಲು ಹೆಚ್ಚಾಗಿದ್ದರಿಂದ ಬೆಳೆಗೆ ರೋಗಗಳು ಬಂದು ಹಾಳಾಗಿವೆ, ಇದರಿಂದಲೂ ಬೆಲೆ ಏರಿಕೆ ಆಗುವ ಸಂಭವ ಇದೆ, ಆದರೆ ಹೊರ ರಾಜ್ಯಗಳಲ್ಲಿ ಕೊರೊನಾ ಭೀತಿ ಇದ್ದುದ್ದರಿಂದ ಬೆಲೆ ಏರಿಕೆ ನಿಧಾನಗತಿಯಲ್ಲಿ ಏರುತ್ತಿದೆ ಇನ್ನು 15 ದಿವಸಗಳ ನಂತರ ಟೊಮೆಟೋ ಬೆಲೆ ಒಂದು ಬಾಕ್ಸ್‌ಗೆ 600 ರೂಗಳಿಗೆ ಏರಿಕೆ ಆಗುವ ಸಂಭವ ಇದೆ ಎಂದು ಟೊಮೆಟೋ ವ್ಯಾಪಾರಿಗಳು ಹೇಳುತ್ತಿದ್ದಾರೆ.

ಗದಗ: ಕೊರೋನಾ ಸೋಂಕಿತ ಸಂಚಾರ ವದಂತಿ, ಸ್ವಯಂ ಲಾಕ್‌ಡೌನ್‌

ಜಿಲ್ಲೆಯಲ್ಲಿ ಸೀಡ್ಸ್‌ ಮತ್ತು ನಾಟಿ ಟೊಮೆಟೋವನ್ನು ಬೆಳೆಯಲಾಗುತ್ತದೆ, ಈ ಎರಡು ಉತ್ತಮ ತಳಿಗಳು ಒಂದು ವಾರ ಕಾಲ ಟೊಮೆಟೋ ಇರುತ್ತದೆ, ಇದರಿಂದಾಗಿ ಸಾಗಣೆಗೆ ಅನುಕೂಲ ಆಗುತ್ತದೆ, ಕೋಲಾರದಿಂದ ಲಾರಿಗಳಲ್ಲಿ ಪಶ್ಚಿಮ ಬಂಗಾಳದವರೆಗು ಸಾಗಣೆ ಆಗತ್ತದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಬಳ್ಳಾರಿ ಜಲ್ಲೆಯಲ್ಲಿ ಕೊರೋನಾ ಮಹಾಸ್ಫೋಟ: ಬೆಚ್ಚಿಬಿದ್ದ ಜನತೆ

ಕಳೆದ ಮೂರ್ನಾಲ್ಕು ತಿಂಗಳಿಂದ ಬೆಲೆ ಇಲ್ಲದೆ ಟೊಮೆಟೋ ಬೆಳೆದ ರೈತರಿಗೆ ಬೆಲೆ ಸಿಗದ ಕಷ್ಟಅನುಭವಿಸಿದ್ದಾರೆ ಸಧ್ಯ ಉತ್ತಮ ಬೆಲೆ ಇರುವುದು ರೈತರಲ್ಲಿ ಸಂತಸ ತಂದಿದೆ. ಕೋಲಾರ ಜಿಲ್ಲೆಯಲ್ಲಿ ಉತ್ತಮ ತಳಿಯ ಟೊಮೆಟೋವನ್ನು ರೈತರು ಬೆಳೆಯುತ್ತಾರೆ, ಜಿಲ್ಲೆಯಲ್ಲಿ ನೀರಿನ ಅಭಾವ ಇದೆ, ಅಂತರ್ಜಲ ಮಟ್ಟಕುಸಿದಿದೆ, 1500 ಆಳಕ್ಕೆ ತೋಡಿದರೂ ಕೊಳವೆ ಬಾವಿಗಳಲ್ಲಿ ನೀರು ಸಿಗುವುದಿಲ್ಲ ಇಂತಹ ಪರಿಸ್ಥಿತಿಯಲ್ಲೂ ನಮ್ಮ ರೈತರು ಕಷ್ಟಪಟ್ಟು ಬೆಳೆ ಮಾಡುತ್ತಾರೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಡಿ.ಎಲ್‌.ನಾಗರಾಜ್‌ ತಿಳಿಸಿದ್ದಾರೆ.