ಬಳ್ಳಾರಿ ಜಲ್ಲೆಯಲ್ಲಿ ಕೊರೋನಾ ಮಹಾಸ್ಫೋಟ: ಬೆಚ್ಚಿಬಿದ್ದ ಜನತೆ

ಜಿಂದಾಲ್‌ನಲ್ಲಿ 32 ಕೊರೋನಾ ಪ್ರಕರಣ ದೃಢ| ಹೆಚ್ಚುತ್ತಿರುವ ಪ್ರಕರಣಗಳಿಂದ ಸಂಡೂರು ಸುತ್ತಮುತ್ತಲ ಹಳ್ಳಿಗಳು ಹಾಗೂ ಜಿಂದಾಲ್‌ಗೆ ಕೆಲಸಕ್ಕೆ ಹೋಗುವ ನೌಕರರ ಕುಟುಂಬಗಳು ಆತಂಕ| ಜಿಂದಾಲ್‌ ಸೀಲ್‌ಡೌನ್‌ ಆಗುವ ಮುನ್ನವೇ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ|

32 New Coronavirus Cases in Jindal Factory in Ballari District

ಬಳ್ಳಾರಿ(ಜೂ.18): ಕೊರೋನಾ ಹಾಟ್‌ಸ್ಪಾಟ್‌ ಆಗಿರುವ ಜಿಲ್ಲೆಯ ಸಂಡೂರಿನ ಜಿಂದಾಲ್‌ ಕಾರ್ಖಾನೆಯಿಂದ ಮತ್ತೆ 32 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಇದೀಗ ಜಿಂದಾಲ್‌ ಸೋಂಕಿತರ ಒಟ್ಟು ಸಂಖ್ಯೆ 178ಕ್ಕೇರಿದೆ. 

ಜಿಲ್ಲೆಯಲ್ಲಿ ಬುಧವಾರ ಒಟ್ಟು 69 ಜನರಿಗೆ ವೈರಾಣು ಹರಡಿಕೊಂಡಿರುವುದು ಖಚಿತವಾಗಿದ್ದು ಅವುಗಳಲ್ಲಿ 32 ಮಂದಿ ಜಿಂದಾಲ್‌ನವರೇ ಆಗಿದ್ದಾರೆ. ‘ಜಿಂದಾಲ್‌ ಸೀಲ್‌ಡೌನ್‌’ ಆಗುವ ಮುನ್ನವೇ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಜಿಲ್ಲಾಡಳಿತ ಜಿಂದಾಲ್‌ನಲ್ಲಿ ಹರಡಿರುವ ಸೋಂಕಿನ ಸಂಖ್ಯೆಯನ್ನು ಖಚಿತಪಡಿಸಿದೆ. 

ಬಳ್ಳಾರಿ: ಆಂಧ್ರಪ್ರದೇಶಕ್ಕೆ KSRTC ಬಸ್‌ ಸಂಚಾರ ಆರಂಭ

ಜಿಂದಾಲ್‌ ಕಾರ್ಖಾನೆಯಲ್ಲಿ ಹೆಚ್ಚುತ್ತಿರುವ ಪ್ರಕರಣಗಳಿಂದ ಸಂಡೂರು ಸುತ್ತಮುತ್ತಲ ಹಳ್ಳಿಗಳು ಹಾಗೂ ಜಿಂದಾಲ್‌ಗೆ ಕೆಲಸಕ್ಕೆ ಹೋಗುವ ನೌಕರರ ಕುಟುಂಬಗಳು ಆತಂಕಗೊಂಡಿವೆ. ದಿನದಿಂದ ದಿನಕ್ಕೆ ಕಂಪನಿಯ ನೌಕರರಿಗೆ ಸೋಂಕು ಹರಡುತ್ತಿದ್ದು ‘ಸೀಲ್‌ಡೌನ್‌’ ಬಳಿಕವಾದರೂ ನಿಯಂತ್ರಣಕ್ಕೆ ಬರುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.
 

Latest Videos
Follow Us:
Download App:
  • android
  • ios