Asianet Suvarna News Asianet Suvarna News

ನಂಜನಗೂಡು ಗ್ರಾಮಾಂತರ ಪೊಲೀಸ್‌ ಠಾಣೆಗೂ ಕೊರೋನಾ ಭೀತಿ

ಬೆಂಗಳೂರು ಮೂಲದ ಸೋಂಕಿತನೊಬ್ಬನ ಪ್ರಾಥಮಿಕ ಸಂಪರ್ಕದಲ್ಲಿದ್ದ ವಕೀಲರೊಬ್ಬರು ನಂಜನಗೂಡು ಗ್ರಾಮಾಂತರ ಪೊಲೀಸ್‌ ಠಾಣೆಗೆ ಭೇಟಿ ನೀಡಿರುವ ಹಿನ್ನೆಲೆ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೂ ಆತಂಕ ಎದುರಾಗಿದೆ.

Public entry restricted to nanjanagud rural police station
Author
Bangalore, First Published Jun 18, 2020, 10:06 AM IST

ನಂಜನಗೂಡು(ಜೂ.18): ಬೆಂಗಳೂರು ಮೂಲದ ಸೋಂಕಿತನೊಬ್ಬನ ಪ್ರಾಥಮಿಕ ಸಂಪರ್ಕದಲ್ಲಿದ್ದ ವಕೀಲರೊಬ್ಬರು ನಂಜನಗೂಡು ಗ್ರಾಮಾಂತರ ಪೊಲೀಸ್‌ ಠಾಣೆಗೆ ಭೇಟಿ ನೀಡಿರುವ ಹಿನ್ನೆಲೆ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೂ ಆತಂಕ ಎದುರಾಗಿದೆ.

ಬೆಂಗಳೂರು ಮೂಲದ ಬಿಎಂಟಿಸಿ ಚಾಲಕರೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ ವಕೀಲರೂ ಆಗಿರುವ ಸೋಂಕಿತನ ಸ್ನೇಹಿತ ನಂಜನಗೂಡಿನ ಗ್ರಾಮಾಂತರ ಪೊಲೀಸ್‌ ಠಾಣೆಗೆ ಜಮೀನಿನ ವಿಚಾರವಾಗಿ ಬಂದೋಬಸ್‌್ತ ಕೋರಲು ಬಂದಿದ್ದರು ಎನ್ನಲಾಗಿದೆ. ಇದರಿಂದ ಕರ್ತವ್ಯದಲ್ಲಿದ್ದ ಪೊಲೀಸರಿಗೂ ಕೊರೋನಾ ಆತಂಕ ಎದುರಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರೇ ಸ್ವಯಂ ಪ್ರೇರಿತರಾಗಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದಾರೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಠಾಣೆಯ ಒಳಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಭಂಧಿಸಿದ್ದು, ದೂರು ದಾಖಲಿಸುವವರಿಗೆ ಠಾಣೆಯ ಮುಂಭಾಗದಲ್ಲೇ ದೂರು ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ.

ಗದಗ: ಕೊರೋನಾ ಸೋಂಕಿತ ಸಂಚಾರ ವದಂತಿ, ಸ್ವಯಂ ಲಾಕ್‌ಡೌನ್‌

ಬುಧವಾರ ನಂಜನಗೂಡು ಗ್ರಾಮಾಂತರ ಪೊಲೀಸ್‌ ಠಾಣೆಗೆ ರೋಗ ನಿರೋಧಕ ಔಷಧವನ್ನು ಸಿಂಪಡಿಸಿ ಸ್ಯಾನಿಟೈಸ್‌ ಮಾಡಲಾಗಿದೆ. ಅದೇ ವಕೀಲರು ಮಂಗಳವಾರ ನ್ಯಾಯಾಲಯದಲ್ಲೂ ಓಡಾಡಿರುವುದರಿಂದಾಗಿ ಮುಂಜಾಗ್ರತಾ ಕ್ರಮವಾಗಿ ನ್ಯಾಯಾಧೀಶರು ನ್ಯಾಯಾಲಯದ ಕಲಾಪಕ್ಕೆ ಸಂಬಂಧಿಸಿದವರನ್ನು ಒಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಿ ಗುಂಪು ಸೇರುವುದನ್ನು ನಿರ್ಬಂಧಿಸಿದ್ದಾರೆ.

Follow Us:
Download App:
  • android
  • ios