ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಮರಗಳ ಮಾರಣ ಹೋಮ, ಶ್ರೀಗಂಧ ಕಳ್ಳತನ
ಜೋಗಿಮಟ್ಟಿ ಅಂದ್ರೆ ಎಲ್ಲರಿಗೂ ತಟ್ಟನೇ ನೆನಪಾಗೋದು ಅಲ್ಲಿನ ಮಂಜಿನ ನರ್ತನ. ಆ ನೈಸರ್ಗಿಕ ತಾಣದಲ್ಲಿನ ಬಗೆಬಗೆಯ ಔಶಧಿ ಸಸ್ಯಕಾಶಿ. ಆದ್ರೆ ಈ ತಾಣದಲ್ಲೀಗ ಶ್ರೀಗಂಧದ ಕಳ್ಳರ ಹಾವಳಿ ಹೆಚ್ಚಾಗಿದೆ. ಹೀಗಾಗಿ ಪರಿಸರ ಪ್ರೇಮಿಗಳು ಹಾಗು ಪ್ರವಾಸಿಗರಲ್ಲಿ ಆತಂಕ ಶುರುವಾಗಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜ.3): ಜೋಗಿಮಟ್ಟಿ ಅಂದ್ರೆ ಎಲ್ಲರಿಗೂ ತಟ್ಟನೇ ನೆನಪಾಗೋದು ಅಲ್ಲಿನ ಮಂಜಿನ ನರ್ತನ. ಆ ನೈಸರ್ಗಿಕ ತಾಣದಲ್ಲಿನ ಬಗೆಬಗೆಯ ಔಶಧಿ ಸಸ್ಯಕಾಶಿ. ಆದ್ರೆ ಈ ತಾಣದಲ್ಲೀಗ ಶ್ರೀಗಂಧದ ಕಳ್ಳರ ಹಾವಳಿ ಹೆಚ್ಚಾಗಿದೆ. ಹೀಗಾಗಿ ಪರಿಸರ ಪ್ರೇಮಿಗಳು ಹಾಗು ಪ್ರವಾಸಿಗರಲ್ಲಿ ಆತಂಕ ಶುರುವಾಗಿದೆ.
ಹೀಗೆ ಮರಗಳಿಗೆ ಬಿದ್ದಿರೊ ಕೊಡಲಿ ಪೆಟ್ಟು. ಕಣ್ಣಾಯಿಸಿದಷ್ಟು ದೂರಕ್ಕೆ ಕಾಣುವ ಮರಗಳ ಮಾರಣ ಹೋಮ. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗದ ಹೊರವಲಯದಲ್ಲಿರುವ ಜೋಗಿಮಟ್ಟಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ. ಚಿತ್ರದುರ್ಗ ನಗರದಿಂದ ಸುಮಾರು 10 ಕಿಲೋ ಮೀಟರ್ ದೂರವಿರುವ ಈ ಕಾಯ್ದಿಟ್ಟ ಅರಣ್ಯದಲ್ಲಿ ಶ್ರೀಗಂಧದ ಮರಗಳ ಕಳ್ಳರ ಹಾವಳಿ ಮಿತಿಮೀರಿದೆ. ಈ ಅರಣ್ಯ ಪ್ರವೇಶಿಸುವ ಮುನ್ನ ಚೆಕ್ ಪೋಸ್ಟ್ ಹಾಗು ತನಿಖಾ ಕೇಂದ್ರಗಳಿದ್ರು ಸಹ ಎಗ್ಗಿಲ್ಲದೇ ಶ್ರೀಗಂಧ ಕಳ್ಳತನ ಆಗ್ತಿದೆ.
ಕರ್ನಾಟಕದಲ್ಲಿ ಗೋಧ್ರಾ ರೀತಿ ದುರಂತಕ್ಕೆ ಹುನ್ನಾರ, ಮಾಹಿತಿ ಇದೆ: ಕಿಚ್ಚು ಹಚ್ಚಿದ ಬಿಕೆ ಹರಿಪ್ರಸಾದ್ ಹೇಳಿಕೆ
ಇದಕ್ಕೆ ಸಾಕ್ಷಿ ಎಂಬಂತೆ ಆಡುಮಲ್ಲೇಶ್ವರ ಹಾಗು ಹಿಮವತ್ ಕೆದಾರ ಫಾಲ್ಸ್ ಮದ್ಯೆ ಹಾದುಹೋಗಿರೊ ರಸ್ತೆಯಲ್ಲಿ ಬೃಹತ್ ಗಂಧದ ಮರಗಳನ್ನು ಕಳ್ಳರು ಕಡಿದುಹಾಕಿದ್ದು, ನಿರ್ಭಯವಾಗಿ ಬೇರೆಡೆಗೆ ಸಾಗಿಸಿರುವ ಕುರುಹುಗಳು ಪತ್ತೆಯಾಗಿದೆ. ಆದ್ರೆ ಅರಣ್ಯವನ್ನು ಸಂರಕ್ಷಿಸಬೇಕಾದ ಅರಣ್ಯ ಇಲಾಖೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿರೋದು ಪರಿಸರ ಪ್ರೇಮಿಗಳು ಹಾಗು ನಾಗರೀಕರಲ್ಲಿ ಬಾರಿ ಅನುಮಾನ ಮೂಡಿಸಿದೆ. ಹೀಗಾಗಿ ಶ್ರೀ ಗಂಧ ಕಳ್ಳತನದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಕೈ ಜೋಡಿಸಿರಬಹುದೆಂಬ ಆರೋಪ ಕೇಳಿಬಂದಿದೆ.
ರಾಮಲಲ್ಲಾ ವಿಗ್ರಹ ಆಯ್ಕೆ ಘೋಷಣೆ ಜ.17ಕ್ಕೆ, 11 ಟ್ರಸ್ಟಿಗಳಿಂದ ಮತದಾನ ಮೂಲಕ ವಿಗ್ರಹ ಆಯ್ಕೆ
ಇನ್ನು ದಿನಬೆಳಗಾದ್ರೆ ವಾಯು ವಿಹಾರಿಗಳು ಹಾಗು ಪ್ರವಾಸಿಗರಿಂದ ಭರ್ತಿಯಾಗಿರುತಿದ್ದ ಜೋಗಿಮಟ್ಟಿ ಗಿರಿಧಾಮ ಕಳೆದ ಎರಡು ದಿನಗಳಿಂದ ಜನರಿಲ್ಲದೇ ಬಿಕೊ ಎನ್ನುತ್ತಿದೆ. ಗಂಧದ ಕಳ್ಳರ ಹಾವಳಿಯಿಂದ ಬೆಚ್ಚಬಿದ್ದಿರೊ ಜನರು ಜೋಗಿಮಟ್ಟಿಗೆ ಬರಲು ಹಿಂದೇಟು ಹಾಕ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟವರು ಗಂಧದ ಮರಗಳ ಮಾರಣ ಹೋಮಕ್ಕೆ ಬ್ರೇಕ್ ಹಾಕಬೇಕಿದೆ. ನೈಸರ್ಗಿಕ ಸಂಪತ್ತನ್ನು ನಾಶಪಡಿಸಿ, ಲೂಟಿ ಮಾಟೋದನ್ನು ನಿಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.
ಒಟ್ಟಾರೆ ಜೋಗಿಮಟ್ಟಿ ಅರಣ್ಯದಲ್ಲಿ ಗಂಧರ ಮರಗಳ್ಳರ ಹಾವಳಿ ಮಿತಿಮೀರಿದೆ. ಹೀಗಾಗಿ ಕೋಟೆನಾಡಿನ ಜನರು ಹಾಗು ಪ್ರವಾಸಿಗರಲ್ಲಿ ಆತಂಕ ಮನೆ ಮಾಡಿದೆ. ಇನ್ನಾದ್ರು ಅರಣ್ಯ ಇಲಾಕೆ ಅಧಿಕಾರಿಗಳು ಎಚ್ಚೆತ್ತು ಗಂಧದ ಮರಗಳ್ಳತನಕ್ಕೆ ಬ್ರೇಕ್ ಹಾಕಿ, ಜನರ ಆತಂಕ ಶಮನಗೊಳಿಸಬೇಕಿದೆ.