ಕರ್ನಾಟಕದಲ್ಲಿ ಗೋಧ್ರಾ ರೀತಿ ದುರಂತಕ್ಕೆ ಹುನ್ನಾರ, ಮಾಹಿತಿ ಇದೆ: ಕಿಚ್ಚು ಹಚ್ಚಿದ ಬಿಕೆ ಹರಿಪ್ರಸಾದ್‌ ಹೇಳಿಕೆ

ಅಯೋಧ್ಯೆ ಉದ್ಘಾಟನೆ ಕಾರ್ಯಕ್ರಮ ವಿಚಾರವಾಗಿ , ಕರ್ನಾಟಕದಲ್ಲಿ ಗೋಧ್ರಾ ರೀತಿ ದುರಂತ ಸಂಭವಿಸಬಹುದು ಎನ್ನುವ ಮೂಲಕ ಹೊಸ ವಿವಾದಕ್ಕೆ ಎಂಎಲ್‌ಸಿ ಬಿಕೆ ಹರಿಪ್ರಸಾದ್ ನಾಂದಿ ಹಾಡಿದ್ದಾರೆ.

Godhra Riots  likely happen in Karnataka says MLC BK Hariprasad gow

ಬೆಂಗಳೂರು (ಜ.3): ಅಯೋಧ್ಯೆ ಉದ್ಘಾಟನೆ ಕಾರ್ಯಕ್ರಮ ವಿಚಾರವಾಗಿ  ಕಾಂಗ್ರೆಸ್ ಎಂಎಲ್‌ಸಿ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದು, ಇದೀಗ ಕರ್ನಾಟಕದಲ್ಲಿ ಗೋಧ್ರಾ ರೀತಿ ದುರಂತ ಸಂಭವಿಸಬಹುದು ಎನ್ನುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ರಾಮ ಮಂದಿರ ಉದ್ಘಾಟನೆ ಧಾರ್ಮಿಕ ಕಾರ್ಯಕ್ರಮ ಅಲ್ಲ. ಇದೊಂದು ರಾಜಕೀಯ ಕಾರ್ಯಕ್ರಮ ಆಗ್ತಿದೆ. ಧಾರ್ಮಿಕ ಕಾರ್ಯಕ್ರಮ ಆಗಿದ್ರೆ ನಾವೆಲ್ಲರೂ ಹೋಗುತ್ತಿದ್ದೆವು. ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ಧಾರ್ಮಿಕ ಮುಖಂಡರು ಭಾಗಿ ಆಗಬೇಕಿತ್ತು. ಶಂಕರಾಚಾರ್ಯರು ಮೂಲ ಗುರುಗಳು. ಅದೇ ರೀತಿ ಧರ್ಮ ಗುರುಗಳು ನಡೆಸಿಕೊಟ್ಟಿದ್ದರೆ ಅದು ಧಾರ್ಮಿಕ ಕಾರ್ಯಕ್ರಮ ಆಗುತ್ತಿತ್ತು. ಮೋದಿಯ ಧರ್ಮವೇ ಇನ್ನೂ ಯಾವುದು ಅಂತ ಗೊತ್ತಾಗಿಲ್ಲ. ಅಮಿತ್ ಶಾ ಧರ್ಮವೇ ಯಾವುದೂ ಅಂತ ಗೊತ್ತಾಗಿಲ್ಲ ಎಂದಿದ್ದಾರೆ.

ಅಯೋಧ್ಯೆಗೆ ಭೇಟಿ ನೀಡಲು ಬಯಸುವವರಿಗೆ ಬಿಜೆಪಿ ವ್ಯವಸ್ಥೆ

ಇನ್ನು ಮುಂದವರೆದು ಮಾತನಾಡಿ ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ಕೊಡಬೇಕು. ಗೋಧ್ರಾ ದುರಂತದ ರೀತಿ ಮತ್ತೊಮ್ಮೆ ಏನಾದರೂ ಆಗಬಹುದು ಈ ಬಗ್ಗೆ ನಮಗೆ ಮಾಹಿತಿ ಸಿಗ್ತಾ ಇದೆ. ಮಾಹಿತಿ ಇದ್ದೇ ನಾನು ಹೇಳ್ತಾ ಇದ್ದೇನೆ. ಕರ್ನಾಟಕದಲ್ಲಿ ಅಂಥ ಘಟನೆ ಸೃಷ್ಟಿಸಿಗೆ ಪ್ರಚೋದನೆ ಕೊಡುತ್ತಿದ್ದಾರೆ. ಸಂಘಟನೆಯ ಕೆಲ ಪ್ರಮುಖರು ಪ್ರಚೋದಿಸುತ್ತಿದ್ದಾರೆ. ಕರ್ನಾಟಕದಲ್ಲಿ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಬಿಕೆ ಹರಿಪ್ರಸಾದ್ ಹೇಳಿಕೆ ನೀಡಿರುವುದು ಈಗ ಅಯೋಧ್ಯೆ ರಾಮ ಮಂದಿರ ವಿಚಾರದಲ್ಲಿ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿಗೆ ಕಿಚ್ಚು ಇಟ್ಟಂತಾಗಿದೆ.

ಹೋರಾಟಕ್ಕೂ ಅಪರಾಧಕ್ಕೂ ವ್ಯತ್ಯಾಸ ಇದೆ. ಕರ ಸೇವಕ ಅಂತ ಯಾವುದೋ ಅಪರಾಧ ಪ್ರಕರಣದಲ್ಲಿ ಇರುವವರನ್ನು ಹಾಗೆಯೇ ಬಿಡಲು ಆಗುವುದಿಲ್ಲ. ಬಂಧಿತನ ಮೇಲೆ 13 ಕೇಸ್ ಇದೆ.  ಕಾನೂನು ಬಾಹಿರ ಅಪರಾಧ ಮಾಡಿದ್ದಾರೆ. ಧರ್ಮದ ಹೆಸರಲ್ಲಿ ಏನೇನು ಕೆಲಸ ಮಾಡಿದ್ದಾರೆ ಅಂತ ಗೊತ್ತಿದೆ. ಬಿಜೆಪಿಯವರು ಈಗ ಬೊಬ್ಬೆ ಹೊಡೆಯುತ್ತಿದ್ದಾರೆ. ಶಾಂತಿ ಕದಡುವ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲೇಬೇಕು. 30 ವರ್ಷ ಅವರನ್ನು ಬಿಟ್ಟಿದ್ದೇ ತಪ್ಪು. 

ಬಾಬರಿ ಮಸೀದಿ ಧ್ವಂಸ ಮಾಡಿದ್ದು ಕೂಡ ಅಪರಾಧವೇ. ಎಲ್ ಕೆ ಅಡ್ವಾಣಿಯವರ ಮೇಲೆ ಇರುವ ಕೇಸೇ ಇನ್ನೂ ಕ್ಲಿಯರ್ ಆಗಿಲ್ಲ. ಇದನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಇಷ್ಟು ದಿನ ಹಳೆ ಕೇಸ್ ಮೇಲೆ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಹಾಗೇ ಬಿಟ್ಟಿದ್ದೇ ತಪ್ಪು ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ರಾಮಲಲ್ಲಾ ವಿಗ್ರಹ ಆಯ್ಕೆ ಘೋಷಣೆ ಜ.17ಕ್ಕೆ, 11 ಟ್ರಸ್ಟಿಗಳಿಂದ ಮತದಾನ ಮೂಲಕ ವಿಗ್ರಹ ಆಯ್ಕೆ

ಇನ್ನು ಕರ್ನಾಟಕದಲ್ಲಿ ಮತ್ತೊಂದು ಗೋಧ್ರಾ ಹತ್ಯಾಕಾಂಡ ಆಗದಂತೆ ನೋಡಿಕೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್,  ರಾಜ್ಯದಲ್ಲಿ ಸರ್ಕಾರ ಎಲ್ಲಾ ರೀತಿಯ ಕಟ್ಟೆಚ್ಚರ ವಹಿಸಬೇಕು. ಯಾಕೆಂದರೆ ಗುಜರಾತ್‌ನಲ್ಲಿ ಇದೇ ಸಂದರ್ಭದಲ್ಲಿ ಕರಸೇವಕರಾದ ದಹನ ನಡೆದಿತ್ತು. ಗೋಧ್ರಾದಲ್ಲಿ ಆದ ಘಟನೆ ರೀತಿಯಲ್ಲೇ ಮತ್ತೊಂದು ಘಟನೆ ಸೃಷ್ಟಿ ಮಾಡಲು ಪ್ರಯತ್ನ ನಡಿತಾ ಇದೆ. 

ಕರ್ನಾಟಕದಲ್ಲಿ ಅಹಿತಕರ ಘಟನೆ ನಡೆಯುವ ಅವಕಾಶವನ್ನು ಕೊಡಬಾರದು. ಅಯೋಧ್ಯೆಗೆ ಹೋಗುವವರಿಗೆ ಎಲ್ಲಾ ರೀತಿಯ ಬಂದೋಬಸ್ತ್ ಮಾಡಬೇಕಾಗುತ್ತದೆ. ಕರ್ನಾಟಕದಲ್ಲಿ ಮತ್ತೊಂದು ಗೋಧ್ರಾ ಹತ್ಯಾಕಾಂಡ ನೋಡೋದಕ್ಕೆ ಆಗಲ್ಲ. ನಾನು ಸಂಪೂರ್ಣವಾಗಿ ಮಾಹಿತಿ ಜೊತೆಗೆ ಕೊಡಬಹುದು. ಕೆಲವು ಸಂಘಟನೆಗಳ ಪ್ರಮುಖರು ಕೆಲವು ರಾಜ್ಯಗಳಲ್ಲಿ ಹೋಗಿ ಸಭೆ ಮಾಡಿದ್ದಾರೆ. ಬಿಜೆಪಿಯವರು ಯಾವ ಪ್ರಚೋದನೆ ಮಾಡಿದ್ದಾರೆ ಎಂದು ನಾನು ಹೇಳಬಹುದು. ನಾನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಪ್ರಚೋದನೆಕಾರಿ ಕೆಲಸ ಮಾಡಲು ಕುಮ್ಮಕ್ಕು ನೀಡುತ್ತಿದ್ದಾರೆ ಇದನ್ನ ನಿಲ್ಲಿಸಬೇಕು.

ಜೊತೆಗೆ ಮೊನ್ನೆ ಒರಿಸ್ಸಾದಲ್ಲೂ ಕೂಡ ಈ ಬಗ್ಗೆ ಮೀಟಿಂಗ್ ಆಗಿದೆ. ಕೆಲ ಸಂಘಟನೆಯವರು, ಬಿಜೆಪಿಯ ಪದಾಧಿಕಾರಿಗಳನ್ನು ಕಾರ್ಯಕರ್ತರನ್ನ ಕರೆದು ಮಾತನಾಡಿದ್ದಾರೆ. ಯಾರು ಮಾತನಾಡಿದ್ದಾರೆ, ಏನು ಮಾತನಾಡಿದ್ದಾರೆ ಅನ್ನೋದನ್ನ ವಿಚಾರಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

2002 ಘನಘೋರ ದುರಂತ ಗೋಧ್ರಾ ಹತ್ಯಾಕಾಂಡ: 2002ರ, ಫೆಬ್ರವರಿ 27ರಂದು ಗುಜರಾತ್​ನ ಗೋಧ್ರಾದಲ್ಲಿ ಘನಘೋರ ಘಟನೆ ನಡೆದಿತ್ತು . ಫೈಜಾಬಾದ್‌ನಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ಸಬರ್‌ಮತಿ ಎಕ್ಸ್‌ಪ್ರೆಸ್ (Sabaramathi Express) ರೈಲಿನ ಮೇಲೆ ದಾಳಿ ನಡೆದಿತ್ತು. ಗೋಧ್ರಾ ಬಳಿ ನಡೆದ ಈ ದಾಳಿಯಲ್ಲಿ ಮಹಿಳೆಯರು, ಮಕ್ಕಳೂ ಸೇರಿದಂತೆ 58 ಜನರು ಸಜೀವ ದಹನವಾದರು.  ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ 59 ಹಿಂದೂ ಯಾತ್ರಿಕರು ಮತ್ತು ಕರಸೇವಕರು ಬೆಂಕಿಯಲ್ಲಿ ಜೀವಂತವಾಗಿ ದಹಿಸಿ ಹೋದರು. ಇಡೀ ದೇಶವೇ ಬೆಚ್ಚಿ ಬಿದ್ದ ಘಟನೆ ಇದು. 

Latest Videos
Follow Us:
Download App:
  • android
  • ios