ಮೈಸೂರಿನಲ್ಲಿ ಪ್ರಧಾನಿ ಪೊಲೀಸರಿಂದ ಎಲ್ಲೆಡೆ ಬಿಗಿಭದ್ರತೆ
ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ನಗರಕ್ಕೆ ಆಗಮಿಸಿರುವ ಹಿನ್ನಲೆಯಲ್ಲಿ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್‌್ತ ಕೈಗೊಳ್ಳಲಾಗಿದೆ. ಪ್ರಧಾನಿ ವಾಸ್ತವ್ಯ ಹೂಡಿರುವ ರಾಡಿಸನ್ ಬ್ಲೂ ಹೊಟೇಲ್ ಸೇರಿದಂತೆ ಅವರು ಸಂಚರಿಸುವ ಮಾರ್ಗ ಮತ್ತು ಭಾಗವಹಿಸುವ ಕಾರ್ಯಕ್ರಮದ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಮೈಸೂರು : ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ನಗರಕ್ಕೆ ಆಗಮಿಸಿರುವ ಹಿನ್ನಲೆಯಲ್ಲಿ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್‌್ತ ಕೈಗೊಳ್ಳಲಾಗಿದೆ. ಪ್ರಧಾನಿ ವಾಸ್ತವ್ಯ ಹೂಡಿರುವ ರಾಡಿಸನ್ ಬ್ಲೂ ಹೊಟೇಲ್ ಸೇರಿದಂತೆ ಅವರು ಸಂಚರಿಸುವ ಮಾರ್ಗ ಮತ್ತು ಭಾಗವಹಿಸುವ ಕಾರ್ಯಕ್ರಮದ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಅರೆಸೇನಾ ಪಡೆಯೊಂದಿಗೆ ನಗರ ಸಶಸ್ತ್ರ ಮೀಸಲು ಪಡೆ, ಕಮಾಂಡೋ ಪಡೆ, ಸಿವಿಲ್ ಮತ್ತು ಸಂಚಾರ ಪೊಲೀಸರು ಸೇರಿದಂತೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನೇಮಿಸಲಾಗಿದೆ. ಶನಿವಾರ ರಾತ್ರಿ ಮಂಡಕಳ್ಳಿಯಲ್ಲಿರುವ ಮೈಸೂರು ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿ ಪ್ರಧಾನಿಯವರು, ನಂತರ ರಸ್ತೆಯ ಮೂಲಕ ನಂಜನಗೂಡು ರಸ್ತೆ ಮೂಲಕ ರಾರಯಡಿಸನ್ ಬ್ಲೂ ತಲುಪಿ ವಾಸ್ತವ್ಯ ಹೂಡಿದ್ದಾರೆ.
ಏ.9ರ ಭಾನುವಾರ ಬೆಳಗ್ಗೆ 6.20 ಕ್ಕೆ ಹೋಟಲ್‌ನಿಂದ ನಂಜನಗೂಡು ಮಾರ್ಗವಾಗಿ ಮತ್ತೆ ಮೈಸೂರು ವಿಮಾನ ನಿಲ್ದಾಣಕ್ಕೆ ತಲುಪಲಿದ್ದು, ಅಲ್ಲಿಂದ ಬೆಳಗ್ಗೆ 7ಕ್ಕೆ ಸೇನಾ ಹೆಲಿಕಾಪ್ಟರ್‌ನಲ್ಲಿ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ತಾತ್ಕಾಲಿಕ ಹೆಲಿಪ್ಯಾಡ್ ತಲುಪುವರು. ನಂತರ ಬಂಡಿಪುರದಲ್ಲಿ ಸಫಾರಿ ನಡೆಸುವುದರೊಂದಿಗೆ ತಮಿಳುನಾಡಿನ ಮಧುಮಲೈ ಹುಲಿ ಮೀಸಲು ಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನಂತರ ಬೆಳಗ್ಗೆ 9.45ಕ್ಕೆ ಅಲ್ಲಿನ ತೆಪ್ಪಕಾಡು ಹೆಲಿಪ್ಯಾಡ್‌ನಿಂದ ಹೊರಟು ಬೆಳಗ್ಗೆ 10.20ಕ್ಕೆ ಮೈಸೂರು ವಿವಿ ಎದುರಿನ ಓವೆಲ್ ಮೈದಾನದಲ್ಲಿ ಬಂದಿಳಿಯಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಹುಣಸೂರು ರಸ್ತೆಯಲ್ಲಿನ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ನಡೆಯಲಿರುವ ಅರಣ್ಯ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮತ್ತೇ ಅಲ್ಲಿಂದ ರಸ್ತೆ ಮಾರ್ಗವಾಗಿ ಓವೆಲ್ ಮೈದಾನಕ್ಕೆ ವಾಪಸ್ ಆಗಿ ಹೆಲಿಕಾಪ್ಟರ್ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ. ಅಲ್ಲಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ಹಿಂದಿರುಗಲಿದ್ದಾರೆ.
ಪ್ರಧಾನಿ ಮೋದಿ ಅವರು ಆಗಮಿಸುವ ಮುನ್ನವೇ ರಾಡಿಸನ್ ಬ್ಲೂ ಹೊಟೇಲ್ ಅನ್ನು ಶ್ವಾನ ದಳ, ಬಾಂಬ್ ನಿಷ್ಕಿ್ರೕಯ ದಳದ ಸಿಬ್ಬಂದಿ ತೀವ್ರ ತಪಾಸಣೆ ನಡೆಸಿದರು. ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಹೆಜ್ಜೆ ಹೆಜ್ಜೆಗೂ ಭದ್ರತೆ ಕೈಗೊಂಡಿರುವ ಪೊಲೀಸರು, ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದಾರೆ.
ಕಾರ್ಯಕ್ರಮ ನಡೆಯುವ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲೂ ಬಿಗಿ ಬಂದೋಬಸ್‌್ತ ಕೈಗೊಳ್ಳಲಾಗಿದ್ದು, ತಪಾಸಣಾ ಕಾರ್ಯ ನಡೆಸಲಾಗಿದೆ. ಇದರೊಂದಿಗೆ ಪ್ರಧಾನಿಯವರು ಹೆಲಿಕಾಪ್ಟರ್‌ನಲ್ಲಿ ಬಂದಿಳಿಯುವ ಓವೆಲ್ ಮೈದಾನದ ಸುತ್ತಮುತ್ತ ಬಂದೋಬಸ್‌್ತ ಮಾಡಲಾಗಿದೆ.