ಬಾಲ್ ಎಸೆಯಿರಿ, ಕಸವನ್ನಲ್ಲ; ಸ್ವಚ್ಛ ನಗರಕ್ಕಾಗಿ BBMP ಹೊಸ ಐಡಿಯಾ
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯಾ ವಳಿ ಸಂದರ್ಭದಲ್ಲಿ ‘ಕ್ರಿಕೆಟ್ ಆಟವಾಡಲು 11 ಜನ ಬೇಕು- ನಗರ ಸ್ವಚ್ಛವಾಗಿಡಲು ಮೂರು ಕಸದ ಬುಟ್ಟಿ ಸಾಕು’, ‘ಬಾಲನ್ನು ಎಸೆಯಿರಿ- ಕಸವನ್ನಲ್ಲ’ಈ ರೀತಿಯ ಅಕರ್ಷಕ ಸಾಲುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಬಿಬಿಎಂಪಿ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿಯನ್ನು ಮೂಡಿಸುವ ಪ್ರಯತ್ನ ನಡೆಸಲಾಗಿದೆ.
ಬೆಂಗಳೂರು(ಜ.28): ಸ್ವಚ್ಛಸರ್ವೇಕ್ಷಣ ಅಭಿಯಾನದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಕುರಿತು ಮುಖ್ಯಮಂತ್ರಿ, ಮೇ ಯರ್ ಹಾಗೂ ಆಯುಕ್ತರ ಸಾರ್ವಜನಿಕರಿಗೆ ಮನವಿ ಸಂದೇಶವನ್ನು ನಗರದ ಚಲನಚಿತ್ರ ಮಂ ದಿರಗಳಲ್ಲಿ ಪ್ರದರ್ಶನಕ್ಕೆ ಬಿಬಿಎಂಪಿ ಮುಂದಾಗಿದೆ.
ಸ್ವಚ್ಛಸರ್ವೇಕ್ಷಣ ಅಭಿಯಾನದಲ್ಲಿ ಸಾರ್ವಜನಿ ಕರ ಭಾಗವಹಿಸುವಿಕೆಯ ಬಗ್ಗೆ ಜನ ಜಾಗೃತಿ ಮೂಡಿಸುವುದಕ್ಕೆ ಬಿಬಿಎಂಪಿ ಈ ಬಾರಿ ಸಾಕಷ್ಟು ಕಸರತ್ತು ನಡೆಸುತ್ತಿದೆ. ಕಳೆದ ಶನಿವಾರ ಶಾಲಾ ವಿದ್ಯಾರ್ಥಿಗಳೊಂದಿಗೆ ಜಾಗೃತಿ ಜಾಥಾ ನಡೆಸ ಲಾಗಿದೆ. ಬಿಬಿಎಂಪಿ ಆಯುಕ್ತರ ಹಾಗೂ ಇತರೆ ಅಧಿಕಾರಿಗಳು ಪಾಲಿಕೆಯ ಅಧಿಕೃತ ಟ್ವೀಟರ್ ಹಾಗೂ ಫೇಸ್‌ಬುಕ್ ಖಾತೆಗಳ ಮೂಲಕ ಭಿನ್ನ ವಿಭಿನ್ನ ರೀತಿಯಲ್ಲಿ ಸ್ವಚ್ಛಸರ್ವೇಕ್ಷಣದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ.
100 ರೂ. ಆಸೆಗೆ 70 ಸಾವಿರ ಹೋಯ್ತು.. ಪಾಪ ಪ್ರಾವಿಜನ್ ಸ್ಟೋರ್ ಮಾಲಕಿ!
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯಾ ವಳಿ ಸಂದರ್ಭದಲ್ಲಿ ‘ಕ್ರಿಕೆಟ್ ಆಟವಾಡಲು 11 ಜನ ಬೇಕು- ನಗರ ಸ್ವಚ್ಛವಾಗಿಡಲು ಮೂರು ಕಸದ ಬುಟ್ಟಿ ಸಾಕು’, ‘ಬಾಲನ್ನು ಎಸೆಯಿರಿ- ಕಸವನ್ನಲ್ಲ’ಈ ರೀತಿಯ ಅಕರ್ಷಕ ಸಾಲುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಬಿಬಿಎಂಪಿ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿಯನ್ನು ಮೂಡಿಸುವ ಪ್ರಯತ್ನ ನಡೆಸಲಾಗಿತ್ತು.
ಬೆಂಗಳೂರು ನಗರದ ಬಗ್ಗೆ ಒಂದು ಹಾಡನ್ನು ಚಿತ್ರೀಕರಿಸಲಾಗಿದೆ. ಇದೀಗ ನಗರದಲ್ಲಿರುವ ಎಲ್ಲ ಚಲನ ಚಿತ್ರಮಂದಿರ ಹಾಗೂ ಮಲ್ಟಿಫ್ಲೆಕ್ಸ್ ಪರದೆಗಳ ಮೇಲೆ ಸ್ವಚ್ಛಸರ್ವೇಕ್ಷಣ ಅಭಿಯಾನದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂ ರಪ್ಪ, ಮೇಯರ್ ಗೌತಮ್ ಕುಮಾರ್ ಹಾಗೂ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಅವರು ಮನವಿಯ ಸಂದೇಶದ ವಿಡಿಯೋವನ್ನು ಪ್ರದರ್ಶನ ಮಾಡಿಸುವಂತೆ ಕೋರಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿಗೆ ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ. ರಂದೀಪ್ ಪತ್ರ ಬರೆದಿದ್ದಾರೆ.
ಮದುವೆಯಾಗುವನಿಗೆ ಬಂತು ಹುಡುಗಿಯ ನ್ಯೂಡ್ ಪಿಕ್, ಕಳಿಸಿದ್ದು ಮಾಜಿ ಪ್ರಿಯಕರ!