100 ರೂ. ಆಸೆಗೆ 70 ಸಾವಿರ ಹೋಯ್ತು.. ಪಾಪ ಪ್ರಾವಿಜನ್ ಸ್ಟೋರ್ ಮಾಲಕಿ!
ಅಂಗಡಿ ಮಾಲಕಿಗೆ 70 ಸಾವಿರ ರೂ. ವಂಚಿಸಿದ ಚಾಲಾಕಿ ಕಳ್ಳರು/ ವ್ಯಾಪಾರ ಮಾಡುವ ನೆಪದಲ್ಲಿ ದರೋಡೆ/ ಪೇಪರ್ ಪ್ಲೇಟ್ ಖರೀದಿ ಮಾಡಲು ಬಂದಿದ್ದ ಕಳ್ಳ
ಬೆಂಗಳೂರು[ ಜ. 27] 100 ರೂಪಾಯಿ ಹೆಚ್ಚಿಗೆ ಸಿಗತ್ತೆ ಅನ್ನೊ ಆಸೆಗೆ ಹೋಯ್ತು ಪ್ರಾವಿಜನ್ ಸ್ಟೋರ್ ಮಾಲಕಿ 70 ಸಾವಿರ ರೂ. ಕಳೆದುಕೊಂಡಿದ್ದಾರೆ. ಡಬಲ್ ರೇಟ್ ಬೇಕಾದ್ರು ಕೊಡ್ತಿನಿ ಅಂತ ಪ್ರಾವಿಜನ್ ಸ್ಟೋರ್ ಮಹಿಳೆಗೆ ವಂಚನೆ ಮಾಡಿದ ಕಳ್ಳ ಹಣ ಎಗರಿಸಿ ಪರಾರಿಯಾಗಿದ್ದಾನೆ
ಗಾರೆಬಾವಿ ಪಾಳ್ಯದ ಪೂಜಾ ಪ್ರಾವಿಷನ್ ಸ್ಟೊರ್ ಮಾಲಕಿ ಮೋಸ ಹೋದವರು. ಅಂಗಡಿಯಲ್ಲಿ ಊಟದ ಎಲೆ ಹಾಗೂ ಪೇಪರ್ ಗ್ಲಾಸ್ ಕೇಳಿರೋ ಆರೋಪಿ ಅಂಗಡಿಯಲ್ಲಿ ನೂರು ಊಟದ ಪ್ಲೇಟ್ ಖರೀದಿಸಿ ಮೊದಲಿಗೆ 2 ಸಾವಿರ ನೀಡ್ತಾನೆ. ಚಿಲ್ಲರೆ ಇಲ್ಲ ಅಂದಿದ್ದಕ್ಕೆ ನೂರು ಪೇಪರ್ ಗ್ಲಾಸ್ ಕೊಡಿ ಎನ್ನುತ್ತಾನೆ.
ಪ್ರಾವಿಷನ್ ಸ್ಟೋರ್ ನಲ್ಲಿ ಪೇಪರ್ ಗ್ಲಾಸ್ ಇಲ್ಲ ಊಟದ ಪ್ಲೇಟ್ ಅಮೌಂಟ್ ಕೊಡಿ ಎಂದು ಮಹಿಳೆ ಹೇಳಿದ್ದಾರೆ. ಈ ವೇಳೆ ಪಕ್ಕದ ಅಂಗಡಿಯಿಂದ ಪೇಪರ್ ಗ್ಲಾಸ್ ತಂದುಕೊಡಿ ಬೇಕಿದ್ರೆ ಎಕ್ಸ್ ಟ್ರಾ ಹಣ ತಗೊಳಿ ಎಂದು ಹೇಳಿದ ಕಳ್ಳ ಚಾಲಾಕಿತನ ತೋರಿಸಿದ್ದಾನೆ.
ಆರೋಪಿಯ ಮಾತನ್ನ ನಂಬಿದ ಮಾಲಕಿ ಪೇಪರ್ ಗ್ಲಾಸ್ ತರಲು ಎದುರು ರಸ್ತೆಯ ಅಂಗಡಿಗೆ ತೆರಳಿದ್ದಾರೆ. ಈ ವೇಳೆ ಮಾರ್ಗಮಧ್ಯೆಯಲ್ಲಿ ಮತ್ತೊಬ್ಬ ಮಹಿಳೆಗೆ ಊಟದ ಪ್ಲೇಟ್ ಕೊಟ್ಟು ಬನ್ನಿ ಎಂದು ಸನ್ನೆಮಾಡಿ ತಿಳಿಸಿದ್ದಾನೆ.
ಹೋಟೆಲ್ ಪೋಟೋ ಹಾಕಿ 90 ಸಾವಿರ ಕಳಕೊಂಡ ರಾಯಚೂರು ಹೋಟೆಲ್ ಮಾಲೀಕ!
ಈ ವೇಳೆ ಮಾರ್ಗಮಧ್ಯೆ ಮತ್ತೊಬ್ಬ ಆರೋಪಿ ಮಹಿಳೆ ಅಂಗಡಿಯಾಕೆಯ ಜೊತೆ ಮಾತಿಗೆ ಇಳಿದಿದ್ದಾಳೆ. ಇದೇ ಸಮಯಕ್ಕೆ ಕಾದು ಅಂಗಡಿ ಬಳಿಯಿದ್ದ ಪ್ರಮುಖ ಆರೋಪಿ, ಪ್ರಾವಿಷನ್ ಸ್ಟೊರ್ ಕ್ಯಾಶ್ ಬ್ಯಾಗ್ ನಲ್ಲಿದ್ದ ಹಣ ಎಗರಿಸಿದ್ದಾನೆ . 70 ಸಾವಿರ ಹಣ ಎಗರಿಸಿ ನಂತರ ಎಸ್ಕೇಪ್ ಆಗಿದ್ದಾನೆ.
ನಾಲ್ಕು ದಿನಗಳ ಹಿಂದೆ ನಡೆದಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಅಂಗಡಿ ಮಾಲೀಕೆ ಮಂಜುಳಾ ಬೊಮ್ಮನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.