ಮದುವೆಯಾಗುವನಿಗೆ ಬಂತು ಹುಡುಗಿಯ ನ್ಯೂಡ್ ಪಿಕ್, ಕಳಿಸಿದ್ದು ಮಾಜಿ ಪ್ರಿಯಕರ!
ಕೋಲ್ಕತ್ತಾ ಮೂಲದ ಯುವತಿಯಿಂದ ದೂರು/ ಅಶ್ಲೀಲ ಪೋಟೋ ಶೇರ್ ಮಾಡುತ್ತಿರುವ ಮಾಜಿ ಪ್ರಿಯಕರ/ ಮದುವೆ ನಿಶ್ಚಯವಾದ ಹುಡುಗನಿಗೂ ಫೋಟೋ ಕಳಿಸಿದ ದುರುಳ
ಬೆಂಗಳೂರು[ಜ. 27] ಲವ್ ಬ್ರೇಕಪ್ ಆಗಿದ್ದಕ್ಕೆ ಮಾಜಿ ಪ್ರಿಯಕರನಿಂದ ಯುವತಿಗೆ ಬ್ಲಾಕ್‌ಮೇಲ್ ಮಾಡಲು ಆರಂಭಿಸಿದಿದ್ದಾನೆ. ಈ ಸಂಬಂಧ ಪೊಲೀಸರಿಗೆ ಯುವತಿ ಕುಟುಂಬದವರು ದೂರು ನೀಡಿದ್ದಾರೆ.
ಘಟನೆ ವಿವರ: ಇದು ಕೋಲ್ಕತ್ತಾ ಮೂಲದ ಯುವತಿಯೊಬ್ಬಳ ಕತೆ. ಕಳೆದ ಎರಡು ವರ್ಷಗಳಿಂದ ಕೊಲ್ಕತ್ತಾದಲ್ಲಿ ರೆಸ್ಟೊರೆಂಟ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವತಿ ಇತ್ತೀಚೆಗೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು.
ಕೋಲ್ಕತ್ತಾದಲ್ಲಿ ಇದ್ದಾಗ ಫೇಸ್ ಬುಕ್ ನಲ್ಲಿ ಸ್ಟಾಲೋನ್ ವುಡ್ ಎಂಬಾತನ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿತ್ತು.
ಗಂಡನ ಹಂತಕರ ಮೊಬೈಲ್ ನಂಬರ್ ಹೆಂಡಿಯ ಪೋನ್ ನಲ್ಲಿತ್ತು!
ಕೋಲ್ಕತ್ತಾದಲ್ಲಿ ಇಬರಬು ಜತೆಯಾಗಿಯೇ ಓಡಾಡಿದ್ದಾರೆ. ಈ ನಡುವೆ ಇಬ್ಬರ ನಡುವೆ ಮನಸ್ತಾಪ ಬಂದು ಜಗಳವಾಗಿ ಲವ್ ಬ್ರೇಕ್ ಅಪ್ ಆಗಿದೆ. ಕೊಲ್ಕತ್ತಾದಲ್ಲಿ ಜೊತೆಯಲ್ಲಿ ಇರೋ ವೇಳೆ ಯುವತಿಯ ಅಶ್ಲೀಲ ಫೊಟೊಗಳನ್ನ ಆರೋಪಿ ಪಡೆದಿದ್ದ ಎನ್ನಲಾಗಿದೆ.
ಆದರೆ ಈಗ ಲವ್ ಬ್ರೇಕಪ್ ಆಗಿದ್ದಕ್ಕೆ ಯುವತಿಯ ಖಾಸಗಿ ಫೊಟೊಗಳನ್ನು ಆರೋಪಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲು ಆರಂಭಿಸಿದ್ದಾನೆ. ಅರಿಂದಮ್ ಸರ್ಕಾರ್ ಹಾಗೂ ಇಕ್ಬಾಲ್ ಎಂಬ ತನ್ನ ಗೆಳೆಯರೊಂದಿಗೆ ಯುವತಿಯ ಫೊಟೊ ಶೇರ್ ಮಾಡಿರೋ ಆರೋಪ ಎದುರಿಸುತ್ತಿದ್ದಾರೆ.
ಯುವತಿಯ ಮದುವೆಗೆ ನಿಶ್ಚಯ ಆಗಿರೋ ಯುವಕನಿಗೆ ಆಕೆಯ ಅಶ್ಲೀಲ ಫೊಟೊಗಳನ್ನು ಶೇರ್ ಮಾಡಲಾಗಿದ್ದು ಪೋಟೋಗಳನ್ನ ನೋಡಿದ ಯುವಕನ ಕುಟುಂಬ ಮದುವೆ ಕ್ಯಾನ್ಸಲ್ ಮಾಡಿದೆ. ನೊಂದ ಯುವತಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.