ದನದ ಕೊಟ್ಟಿಗೆ ಬೆಂಕಿ ತಗುಲಿ ಒಂದು ಆಕಳು, ಎರಡು ಕರುಗಳು ಸಾವು| ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಗುಡ್ಡದ ಹುಲಿಕಟ್ಟಿ ಗ್ರಾಮದಲ್ಲಿ ನಡೆದ ಘಟನೆ| ಈ ಸಂಬಂಧ ಕಲಘಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 

ಕಲಘಟಗಿ(ಅ.14):  ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಗುಡ್ಡದ ಹುಲಿಕಟ್ಟಿ ಗ್ರಾಮದ ನೀಲಕಂಠಗೌಡ ಪಾಟೀಲ ಅವರ ಹೊಲದಲ್ಲಿರುವ ದನದ ಕೊಟ್ಟಿಗೆ ಬೆಂಕಿ ತಗುಲಿ ಒಂದು ಆಕಳು, ಎರಡು ಕರುಗಳು ಸಜೀವ ದಹನವಾಗಿವೆ.

ಸೋಮವಾರ ರಾತ್ರಿ ನೀಲಕಂಠ ಅವರು ಕೊಟ್ಟಿಗೆಯಲ್ಲಿದ್ದ ಏಳು ಆಕಳುಗಳ ಹಾಲು ಹಿಂಡಿ, ಮೇವು ಹಾಕಿ ಮನೆಗೆ ಹೋಗಿದ್ದರು. ಬೆಳಗ್ಗೆ ಹೊಲದಲ್ಲಿರುವ ದನದ ಕೊಟ್ಟಿಗೆಗೆ ಹೋದಾಗ ಒಂದು ಆಕಳು ಎರಡು ಕರುಗಳು ಸುಟ್ಟು ಕರಕಲಾಗಿದ್ದವು. ದನದ ಶೆಡ್ಡು ಕೂಡ ಬೆಂಕಿಗೆ ಆಹುತಿಯಾಗಿದೆ. 

ಧಾರವಾಡ ಐಐಟಿ ವಿದ್ಯಾರ್ಥಿಗಳ ಆವಿಷ್ಕಾರ: ಸುಳ್‌ ಸುದ್ದಿ ಪತ್ತೆ ಹಚ್ಚಲು ಫೇಕ್‌ವಿಡ್‌ ಆ್ಯಪ್‌..!

ಆಕಸ್ಮಿಕವೋ ಅಥವಾ ಯಾರೂ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದ್ದಾರೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಈ ಕುರಿತು ಕಲಘಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.