ಶಿವಮೊಗ್ಗ: ಖ್ಯಾತ ಸಾಹಿತಿ ನಾ. ಡಿಸೋಜಾಗೆ ಬೆದರಿಕೆ ಪತ್ರ
ಕೆಲ ತಿಂಗಳ ಹಿಂದೆ ತಮಗೆ ಬೆದರಿಕೆ ಪತ್ರ ಬಂದ ಬಗ್ಗೆ ಬಹಿರಂಗ ಪಡಿಸಿದ ಸಾಹಿತಿ ನಾ. ಡಿಸೋಜಾ
ಶಿವಮೊಗ್ಗ(ಅ.26): ಖ್ಯಾತ ಸಾಹಿತಿ ಡಾ. ನಾ. ಡಿಸೋಜಾ ಅವರಿಗೆ ಬೆದರಿಕೆ ಪತ್ರಗಳು ಬಂದಿವೆ. ಈ ಬಗ್ಗೆ ಸ್ವತಃ ಸಾಹಿತಿ ನಾ. ಡಿಸೋಜಾ ಅವರೇ ಕೆಲ ತಿಂಗಳ ಹಿಂದೆ ತಮಗೆ ಬೆದರಿಕೆ ಪತ್ರ ಬಂದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಸಾಹಿತಿ ನಾ. ಡಿಸೋಜ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ವಾಸವಾಗಿದ್ದಾರೆ.
ಇಂದು(ಬುಧವಾರ) ಮಾತನಾಡಿದ ಅವರು, ಈಗಿನ ಸನ್ನಿವೇಶದಲ್ಲಿ ನಿರ್ಭಯವಾಗಿ ಕಂಡಿದ್ದನ್ನು ಬರೆಯುವ ಸ್ವಾತಂತ್ರ್ಯ ಉಳಿದಿಲ್ಲ. ಸತ್ಯವನ್ನು ಬರೆಯುವವರಿಗೆ ಬೆದರಿಕೆ ಪತ್ರಗಳು ಬರುತ್ತಿವೆ. ನನಗೂ ಎರಡು ಬೆದರಿಕೆ ಪತ್ರಗಳು ಬಂದಿದ್ದು ಅದನ್ನು ಎತ್ತಿಟ್ಟಿದ್ದೇನೆ ಎಂದು ಸಾಹಿತಿ ನಾ.ಡಿಸೋಜ ಹೇಳಿದ್ದಾರೆ.
Tumakuru: ರಾಜ್ಯಸಭಾ ಸದಸ್ಯ ಡಾ.ಹನುಮಂತಯ್ಯಗೆ ಬೆದರಿಕೆ ಪತ್ರ
ನನ್ನ ಸ್ನೇಹಿತರೊಬ್ಬರು ಸಾಹಿತಿಯಾಗಿದ್ದು ಅವರಿಗೆ ನಿಮ್ಮನ್ನು ತೆಗೆಯುತ್ತೇವೆ ಎಂಬ ಬೆದರಿಕೆ ಪತ್ರ ಬಂದಿದೆ. ಅದರ ಹಿಂದೆಯೇ ನನಗೂ ಎರಡು ಬೆದರಿಕೆ ಪತ್ರಗಲು ಬಂದಿವೆ. ಇತ್ತೀಚಿನ ದಿನಮಾನಗಳಲ್ಲಿ ಇಂತಹ ವಿಭಿನ್ನ ಸನ್ನಿವೇಶ ಸೃಷ್ಟಿಯಾಗಿದೆ. ಸಾಹಿತಿಗಳು ಅನಿಸಿದ್ದನ್ನು ಬರೆಯಲು ಕಡಿವಾಣ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ. ಇಂದಿಗೂ ಸಾಹಿತ್ಯ ಒಳ್ಳೆಯವರ ಕೈನಲ್ಲಿ ಇದೆ ಎನ್ನುವ ವಿಶ್ವಾಸ ನನಗಿದೆ. ಸಾಹಿತಿಗಳ ಹಿಂದೆ ಜನ ಇರಬೇಕು. ಸಾಹಿತಿಗೆ ತೊಂದರೆಯಾಗಿದೆ, ಅಪಾಯದಲ್ಲಿದ್ದಾರೆ ಎಂದರೆ ಯಾರೂ ಬರುವುದಿಲ್ಲ. ಲೇಖಕನೊಬ್ಬ ಸತ್ಯವನ್ನು ಬರೆಯುತ್ತಿದ್ದಾನೆ, ಅವನ ಸಾಹಿತ್ಯ ಬರವಣಿಗೆ ಸಮಾಜಕ್ಕೆ ಪೂರಕವಾಗಿದೆ ಎಂದು ಗೊತ್ತಾದಾಗ ಅವರ ಪರವಾಗಿ ನಿಲ್ಲುವ ವಾತಾವರಣ ಸೃಷ್ಟಿಯಾಗಬೇಕು ಅಂತ ತಿಳಿಸಿದ್ದಾರೆ.
ಮುಂದಿನ ಪ್ರಧಾನಿ ದೀದಿ ಹಾದಿಗೆ ಅಡ್ಡ ಬಂದರೆ ಕೊಲೆ, ಬಿಜೆಪಿ ಸಂಸದ ಮೋದಿಗೆ ಬೆದರಿಕೆ ಪತ್ರ!
ಸಾಹಿತಿ ನಾ. ಡಿಸೋಜರಿಗೆ ಬೆದರಿಕೆ ಪತ್ರ ಹಿನ್ನೆಲೆಯಲ್ಲಿ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಅವರು ಡಿಸೋಜ ಅವರನ್ನ ಭೇಟಿ ಮಾಡಿದ್ದಾರೆ. ಸಾಗರ ಪಟ್ಟಣದಲ್ಲಿರುವ ಡಿಸೋಜ ಅವರ ನಿವಾಸಕ್ಕೆ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿದ್ದಾರೆ. ಬೆದರಿಕೆ ಪತ್ರಗಳು ಬಂದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಶಾಸಕ ಹರತಾಳು ಹಾಲಪ್ಪ ಭರವಸೆ ನೀಡಿದ್ದಾರೆ.
ಬೆದರಿಕೆ ಪತ್ರದ ಬಗ್ಗೆ ಶಾಸಕ ಹರತಾಳು ಹಾಲಪ್ಪ ಸಂಪೂರ್ಣ ಮಾಹಿತಿಯನ್ನ ಪಡೆದುಕೊಂಡಿದ್ದಾರೆ. ಬೆದರಿಕೆ ಪತ್ರ ಬಂದಾಗಲೇ ಮಾಹಿತಿ ನೀಡಿದ್ದರೆ ಆರೋಪಿಗಳ ಶೀಘ್ರ ಬಂಧನಕ್ಕೆ ಅನುಕೂಲ ಆಗುತ್ತಿತ್ತು. ಈ ರೀತಿಯ ಬೆದರಿಕೆ ಪತ್ರ ಬಂದಾಗ ತಕ್ಷಣ ಮಾಹಿತಿ ನೀಡಲು ಶಾಸಕರು ಮನವಿ ಮಾಡಿದ್ದಾರೆ. ಪೊಲೀಸರಿಗೆ ಕಾನೂನು ಕ್ರಮ ಕೈಗೊಳ್ಳಲು ಶಾಸಕ ಹರತಾಳು ಹಾಲಪ್ಪ ಸೂಚನೆ ನೀಡಿದ್ದಾರೆ.