ಮುಂದಿನ ಪ್ರಧಾನಿ ದೀದಿ ಹಾದಿಗೆ ಅಡ್ಡ ಬಂದರೆ ಕೊಲೆ, ಬಿಜೆಪಿ ಸಂಸದ ಮೋದಿಗೆ ಬೆದರಿಕೆ ಪತ್ರ!

ಟಿಎಂಸಿ ನಾಯಕ ಸೋಮಾ ಎಂಬ ಹೆಸರಿನಲ್ಲಿ ಬೆದರಿಕೆ ಪತ್ರವೊಂದು ಬಂದಿದೆ. ಮಮತಾ ಬ್ಯಾನರ್ಜಿ ಮುಂದಿನ ಪ್ರಧಾನಿ. ನೀವೆಲ್ಲಾ ಬಿಜೆಪಿ ನಾಯಿಗಳು. ಹತ್ಯೆ ಮಾಡುತ್ತೇನೆ ಎಂದು ಬೆದರಿಕೆ ಪತ್ರದಲ್ಲಿ ಹೇಳಲಾಗಿದೆ.

Bihar BJP MP Sushil kumar Modi receives death threat letter Police take quick action com

ಪಾಟ್ನಾ(ಸೆ.20):  ಬಿಜೆಪಿ ನಾಯಕರಿಗೆ ಬೆದರಿಕೆ ಕರೆಗಳು, ಪತ್ರಗಳು ಹೆಚ್ಚಾಗುತ್ತಿದೆ. ಇದೀಗ ಬಿಹಾರ ಮಾಜಿ ಉಪಮುಖ್ಯಮಂತ್ರಿ, ಸಂಸದ ಸುಶೀಲ್ ಮೋದಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ. ಟಿಎಂಸಿ ನಾಯಕ ಚಂಪಾ ಸೋಮ ಎಂದು ಹೇಳಿ ಪತ್ರದಲ್ಲಿ ಬರೆಯಲಾಗಿದ್ದು, ಹತ್ಯೆ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ. ಈ ಪತ್ರದ ಕುರಿತು ಪೊಲೀಸರಿಗೆ ಮಾಹಿತಿ ನೀಡಿರುವ ಸುಶೀಲ್ ಮೋದಿಗೆ ಇದೀಗ ಭದ್ರತೆ ಒದಗಿಸಲಾಗಿದೆ. ಇತ್ತ ಪೊಲೀಸರು ಪತ್ರದ ಮೂಲ ಹಾಗೂ ಬೆದರಿಕೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಸುಶೀಲ್ ಮೋದಿ ವಿಳಾಸಕ್ಕೆ ಈ ಬೆದೆರಿಕೆ ಪತ್ರ ಬಂದಿದೆ. ಈ ಪತ್ರದಲ್ಲಿ ತಾನು ತೃಣಮೂಲ ಕಾಂಗ್ರೆಸ್ ನಾಯಕ ಚಂಪಾ ಸೋಮ್ ಎಂದು ಬರೆದುಕೊಂಡಿದ್ದಾನೆ. ಪತ್ರದಲ್ಲಿ ಸುಶೀಲ್ ಮೋದಿಯನ್ನು ಹತ್ಯೆ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.

ಸುಶೀಲ್ ಮೋದಿ(Sushil Modi) ಈ ಬೆದರಿಕೆ ಪತ್ರವನ್ನು ಪಾಟ್ನಾ(Patna) ಎಸ್‌ಪಿ ಮಾನವ್‌ಜಿತ್ ಸಿಂಗ್ ದಿಲ್ಹೋನ್‌ಗೆ ರವಾನಿಸಿದ್ದಾರೆ. ಪತ್ರದ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪಾಟ್ನಾ ಪೊಲೀಸರು(Police) ತನಿಖೆ ಆರಂಭಿಸಿದ್ದಾರೆ. ಇತ್ತೀಚೆಗೆ ಬಿಜೆಪಿ ನಾಯಕರಿಗೆ ಬೆದರಿಕೆ(Death threat), ಹತ್ಯೆ ಕರೆಗಳು ಹೆಚ್ಚಾಗುತ್ತಿರುವ ಕಾರಣದಿಂದ ಈ ಬೆದರಿಕೆ ಪತ್ರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ವಿದ್ಯಾರ್ಥಿನಿಯರ ವಿಡಿಯೋ ಲೀಕ್ ಕೇಸ್ ಹಿಂದೆ ಖಲಿಸ್ತಾನ್? ಪ್ರತಿಭಟನೆ ನಿಲ್ಲಿಸಲು ಕೆನಡಾದಿಂದ ಬೆದರಿಕೆ ಕರೆ!

ಈ ಬೆದರಿಕೆ ಪತ್ರದಲ್ಲಿ ಏನಿದೆ?
ನಾನು ಈ ಪತ್ರದ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ. ನಾನು ತೃಣಮೂಲ ಕಾಂಗ್ರೆಸ್(TMC) ನಾಯಕ. ಮಮತಾ ಬ್ಯಾನರ್ಜಿ(Mamata banerjee) ಮುಂದಿನ ಪ್ರಧಾನಿ. ನೀವೆಲ್ಲಾ ನರೇಂದ್ರ ಮೋದಿ ಹಾಗೂ ಅಮಿತ್ ಶಾ ನಾಯಿಗಳು. ಮಮತಾ ಬ್ಯಾನರ್ಜಿಹಾಗೂ ನಿತೀಶ್ ಕುಮಾರ್ ಜಿಂದಾಬಾದ್..ನಿನ್ನನ್ನು ಹತ್ಯೆ ಮಾಡುತ್ತೇನೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಕೊನೆಯಲ್ಲಿ ಚಂಪಾ ಸೋಮ್ ಎಂದು ಹೆಸರು ಉಲ್ಲೇಖಿಸಲಾಗಿದೆ.

ಜೀವ ಬೆದರಿಕೆ ಆರೋಪ: ಸಚಿವ ಆನಂದ ಸಿಂಗ್‌ ವಿರುದ್ಧ ಕೇಸ್‌
ತಮಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಕುಟುಂಬವೊಂದು ವಿಜಯನಗರ ಎಸ್ಪಿ ಕಚೇರಿಯ ಎದುರು ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಿನ್ನೆಲೆ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ನಗರದ 6ನೇ ವಾರ್ಡ್‌ ನಿವಾಸಿ ಡಿ.ಪೋಲಯ್ಯ ನೀಡಿದ ದೂರಿನನ್ವಯ ಸಚಿವ ಆನಂದ್‌ ಸಿಂಗ್‌, ವಕೀಲ ಮರಿಯಪ್ಪ, ಹನುಮಂತಪ್ಪ ಮತ್ತು ಹುಲುಗಪ್ಪ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಹೊಸಪೇಟೆ ನಗರದ 6ನೇ ವಾರ್ಡ್‌ ನಿವಾಸಿ ಡಿ. ಪೋಲಯ್ಯ ಸೇರಿ ಕುಟುಂಬದ 6 ಮಂದಿ ಇತ್ತೀಚೆಗೆ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಬಗ್ಗೆ ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಸಚಿವ ಆನಂದ ಸಿಂಗ್‌, ವಕೀಲ ಮರಿಯಪ್ಪ, ಹನುಮಂತಪ್ಪ, ಹುಲುಗಪ್ಪ ಎಂಬವರ ವಿರುದ್ಧ ಸೆಕ್ಷನ್‌ 504, 506 ಡಿ/ತಿ 34 ಐಪಿಸಿ 3(2)(ಗಿಚಿ) ಎಸ್ಸಿ, ಎಸ್ಟಿಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

6 ತಿಂಗಳ ಹಿಂದೆ ಆನಂದ ಸಿಂಗ್‌ ಅವ್ಯವಹಾರದ ಬಗ್ಗೆ ನಾನು ದಾಖಲಾತಿ ಬಿಡುಗಡೆ ಮಾಡಿದ್ದೆ, ಅಂದಿನಿಂದ ಧಮಕಿ ಹಾಕುತ್ತಾ, ಕಿರುಕುಳ ಕೊಡ್ತಿದ್ದಾರೆ ಎಂದು ದೂರುದಾರರಾದ ಪೋಲಪ್ಪ ತಿಳಿಸಿದ್ದಾರೆ. ಈ ಬಗ್ಗೆ ಸಚಿವ ಆನಂದ್‌ ಸಿಂಗ್‌ ನಾನು ಯಾವುದೇ ರೀತಿಯಲ್ಲಿ ಜೀವ ಬೆದರಿಕೆ ಹಾಕಿಲ್ಲ. ಈ ಮಾತುಗಳೆಲ್ಲವೂ ಸತ್ಯಕ್ಕೆ ದೂರವಾದುದು ಎಂದಿದ್ದಾರೆ.
 

Latest Videos
Follow Us:
Download App:
  • android
  • ios